ಮಗುವಿನ ಉತ್ತಮ ಬೆಳವಣಿಗೆಗಾಗಿ ಗರ್ಭಿಣಿಯರು ಈ ಮೂರು ಜ್ಯೂಸ್ ಕುಡಿಯಲೇಬೇಕು .!
ಇತ್ತೀಚಿನ ಸಂಶೋಧನೆಯಲ್ಲಿ, ಗರ್ಭಾವಸ್ಥೆಯಲ್ಲಿ ದಾಳಿಂಬೆ ರಸವನ್ನು ಕುಡಿಯುವುದರಿಂದ ಮಗುವಿನ ಮೆದುಳು ಬಲಗೊಳ್ಳುತ್ತದೆ ಎನ್ನುವ ಅಂಶ ತಿಳಿದು ಬಂದಿದೆ. ಗರ್ಭಾವಸ್ಥೆಯಲ್ಲಿ, ದೇಹಕ್ಕೆ ಅಗತ್ಯವಾದ ಪೋಷಕಾಂಶಗಳು ಮತ್ತು ಜೀವಸತ್ವಗಳನ್ನು ನೀಡುವ ಇಂತಹ ಹಣ್ಣುಗಳು ಮತ್ತು ತರಕಾರಿಗಳನ್ನು ಸೇವಿಸಬೇಕು. ಗರ್ಭಾವಸ್ಥೆಯಲ್ಲಿ ಮಗುವಿನ ಬೆಳವಣಿಗೆಯಲ್ಲಿ ದಾಳಿಂಬೆ ರಸದ ಪ್ರಯೋಜನಗಳು ಅನೇಕ.
ದಾಳಿಂಬೆ ರಸವು ಗರ್ಭಾವಸ್ಥೆಯಲ್ಲಿ ದೇಹವನ್ನು ಹೈಡ್ರೇಟ್ ಮಾಡುತ್ತದೆ. ದಾಳಿಂಬೆಯಲ್ಲಿ, ವಿಟಮಿನ್ ಎ, ವಿಟಮಿನ್ ಸಿ ಮತ್ತು ಐರನ್ ಹೆಚ್ಚಿನ ಪ್ರಮಾಣದಲ್ಲಿ ಕಂಡು ಬರುತ್ತದೆ. ದಾಳಿಂಬೆ ರಸದ ಸೇವನೆಯು ಮಗುವಿನ ಬೆಳವಣಿಗೆಗೆ ಪ್ರಯೋಜನಕಾರಿಯಾಗಿದೆ.
ಗರ್ಭಾವಸ್ಥೆಯಲ್ಲಿ ಬೀಟ್ ಜ್ಯೂಸ್ ಅನೇಕ ಪ್ರಯೋಜನಗಳನ್ನು ನೀಡುತ್ತದೆ. ಗರ್ಭಾವಸ್ಥೆಯಲ್ಲಿ ದೇಹದಲ್ಲಿ ರಕ್ತದ ಕೊರತೆಯನ್ನು ತಪ್ಪಿಸಬೇಕಾದರೆ ಬೀಟ್ರೂಟ್ ಸಹಕಾರಿ. ಹಾಗಾಗಿ ಗರ್ಭಿಣಿಯರಿಗೆ ಬೀಟ್ ರೂಟ್ ಜ್ಯೂಸ್ ಕುಡಿಯುವಂತೆ ಹೇಳಲಾಗುತ್ತದೆ.
ಗರ್ಭಾವಸ್ಥೆಯಲ್ಲಿ ದ್ರಾಕ್ಷಿಹಣ್ಣಿನ ರಸದ ಪ್ರಯೋಜನಗಳು ಹಲವು. ದ್ರಾಕ್ಷಿಯಲ್ಲಿ ಕಂಡುಬರುವ ಪೋಷಕಾಂಶಗಳು ಮಗುವಿಗೆ ಪೋಷಣೆಯನ್ನು ನೀಡುತ್ತದೆ. ಗರ್ಭಾವಸ್ಥೆಯಲ್ಲಿ ದ್ರಾಕ್ಷಿಹಣ್ಣಿನ ರಸವನ್ನು ಸೇವಿಸಿದರೆ, ಮಗು ಆರೋಗ್ಯಕರವಾಗಿಜನಿಸುತ್ತದೆ.