Blood sugar Control tips : ಈ ಎಲೆಯನ್ನು ರಾತ್ರಿ ಹೊತ್ತು ಜಗಿದು ತಿಂದರೆ ಬ್ಲಡ್ ಶುಗರ್ ಕಡಿಮೆ ಮಾಡಲು ಔಷಧಿಯೇ ಬೇಕಿಲ್ಲ!
ಕೆಲವು ನೈಸರ್ಗಿಕ ಪರಿಹಾರಗಳು ಮಧುಮೇಹವನ್ನು ನಿಯಂತ್ರಿಸುವಲ್ಲಿ ಹೆಚ್ಚು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತವೆ. ಅವುಗಳನ್ನು ನಿಯಮಿತವಾಗಿ ಬಳಸುವ ಮೂಲಕ ಔಷಧಿ ಅವಲಂಬನೆಯನ್ನು ಕೂಡಾ ತಪ್ಪಿಸಬಹುದು.
ಮನೆ ಮದ್ದುಗಳ ಸಹಾಯದಿಂದಲೂ ಮಧುಮೇಹವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಬಹಳ ಪರಿಣಾಮಕಾರಿಯಾಗಿ ನಿಯಂತ್ರಿಸಲು ನಮ್ಮ ಸುತ್ತಲೇ ಇರುವ ಕೆಲವು ವಸ್ತುಗಳು ಸಹಾಯ ಮಾಡುತ್ತವೆ. ಅವುಗಳಲ್ಲಿ ಒಂದು ಪೇರಳೆ ಎಲೆ.
ಪೇರಳೆ ಎಲೆಗಳನ್ನು ಸೇವಿಸುವುದರಿಂದ ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಬಹುದು. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಅಥವಾ ರಾತ್ರಿ ಮಲಗುವ ಮುನ್ನ ಪೇರಳೆ ಎಲೆಗಳನ್ನು ಜಗಿಯುವುದರಿಂದ ರಕ್ತದಲ್ಲಿನ ಸಕ್ಕರೆ ಅಂಶ ನಿಯಂತ್ರಣದಲ್ಲಿರುತ್ತದೆ.
ಪೇರಳೆ ಎಲೆಗಳನ್ನು ಯಾವುದೇ ಸಮಯದಲ್ಲಿ ಅಗಿಯಬಹುದು. ಆದರೆ, ರಾತ್ರಿ ಹೊತ್ತು ಅಗಿದು ತಿನ್ನುವುದರಿಂದ ಹೆಚ್ಚಿನ ಪ್ರಯೋಜನವಾಗುವುದು. ಏಕೆಂದರೆ ಹೊಟ್ಟೆ ಸೇರಿದ ನಂತರ, ಈ ಎಲೆಯು ರಾತ್ರಿಯಿಡೀ ಕೆಲಸ ಮಾಡುತ್ತದೆ. ಈ ಮೂಲಕ ಮತ್ತು ಬೆಳಗಿನ ತನಕ ಅಧಿಕ ರಕ್ತದ ಸಕ್ಕರೆಯ ಮಟ್ಟವನ್ನು ನಿಯಂತ್ರಿಸಲಾಗುತ್ತದೆ.
ಸರಿಯಾದ ರೀತಿಯಲ್ಲಿ ಪೇರಳೆ ಎಲೆಗಳನ್ನು ಬಳಸುವುದರಿಂದ ಮಾತ್ರ ಅದರಿಂದ ಪ್ರಯೋಜನಗಳನ್ನು ಪಡೆಯಬಹುದು. ಪೇರಳೆ ಎಲೆಗಳು ಸಂಪೂರ್ಣವಾಗಿ ಮಾಗಿರಬಾರದು. ದೊಡ್ಡ ಗಾತ್ರದಲ್ಲೂ ಇರಬಾರದು. ಬದಲಿಗೆ ನೀವು ಹಸಿ ಮತ್ತು ಸಣ್ಣ ಗಾತ್ರದ ಎಲೆಗಳನ್ನು ಆರಿಸಬೇಕಾಗುತ್ತದೆ.
ಮೂರರಿಂದ ನಾಲ್ಕು ಎಲೆಗಳನ್ನು ತೆಗೆದುಕೊಂಡು ಅವುಗಳನ್ನು ಶುದ್ಧ ನೀರಿನಲ್ಲಿ ಚೆನ್ನಾಗಿ ತೊಳೆಯಿರಿ. ತೊಳೆದ ನಂತರ, ಎಲೆಗಳನ್ನು ಒಂದೊಂದಾಗಿ ಅಗಿಯುತ್ತಲೇ ಇರಿ ಮತ್ತು ಜಗಿಯುವಾಗ ಬಿಡುಗಡೆಯಾದ ರಸವನ್ನು ನುಂಗಿ. (ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.)