ವಾಯು ಮಾಲಿನ್ಯದಿಂದ ಆರೋಗ್ಯ ರಕ್ಷಣೆ ಹೇಗೆ ಎಂಬ ಚಿಂತೆಯೇ? ಈ ಆಹಾರ ಸೇವಿಸಿ...

Tue, 30 Oct 2018-1:34 pm,

ಭಾರತದಲ್ಲೇ ಅತಿಹೆಚ್ಚು ವಾಯು ಮಾಲಿನ್ಯದಿಂದ ಕೂಡಿದ ಪ್ರದೇಶ ರಾಷ್ಟ್ರ ರಾಜಧಾನಿ ದೆಹಲಿ. ಇದಲ್ಲದೆ ಮುಂಬೈ, ಪುಣೆ, ಬೆಂಗಳೂರು ಮಹಾನಗರಗಳೂ ಸಹ ವಾಯುಮಾಲಿನ್ಯದಿಂದ ಹೊರತಾಗಿಲ್ಲ. ವಾಯು ಮಾಲಿನ್ಯದಿಂದಾಗಿ ಅಸ್ತಮಾ, ಹೃದಯ ಸಂಬಂಧಿ ಸಮಸ್ಯೆಗಳು, ರಕ್ತ ಮತ್ತು ಮೆದುಳಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ಕಾರಣವಾಗುವುದಲ್ಲದೆ ದೇಹದಲ್ಲಿನ ರೋಗನಿರೋಧಕ ಶಕ್ತಿಯನ್ನೂ ಕುಗ್ಗಿಸುತ್ತದೆ.   

ವಾಯುಮಾಲಿನ್ಯದಿಂದಾಗಿ ಮಾನವನ ಆರೋಗ್ಯ ಹದಗೆದುತ್ತಿದ್ದು ಸರಿಯಾದ ಸಮಯಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳದಿದ್ದರೆ ಅದು ಜೀವಕ್ಕೆ ಮಾರಕವಾಗಲಿದೆ. ಹಾಗಾಗಿ ನಮ್ಮ ಆಹಾರ ಸೇವನೆಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳುವುದು ಅಗತ್ಯ. 

ವಾಯುಮಾಲಿನ್ಯದಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳಿಂದ ರಕ್ಷಿಸಿಕೊಳ್ಳಲು ವಿಟಮಿನ್ ಸಿ, ಇ, ಮತ್ತು ಒಮೆಗಾ 3, ಬೀಟಾ ಕ್ಯಾರೋಟಿನ್ ಅಂಶಗಳಿರುವ ಆಹಾರ ಸೇವಿಸುವುದು ಅಗತ್ಯ. ಇವು ನೈಸರ್ಗಿಕ ಆಂಟಿ ಆಕ್ಸಿಡೆಂಟ್ ಗಳಾಗಿ ಕಾರ್ಯನಿರ್ವಹಿಸುತ್ತವೆ. ಇದು ಮಾಲಿನ್ಯವನ್ನು ಎದುರಿಸುವಲ್ಲಿ ಸಹಕರಿಸಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. 

ವಿಟಮಿನ್ ಸಿ ಸೇವನೆಯಿಂದ ದೇಹದಲ್ಲಿನ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆಯಲ್ಲದೆ ಆರೋಗ್ಯ ಸಮಸ್ಯೆಗಳ ವಿರುದ್ಧ ಹೋರಾಡುತ್ತದೆ. ಒಂದು ಅಧ್ಯಯನದ ಪ್ರಕಾರ, ಪ್ರತಿನಿತ್ಯ 40 ಮಿಲಿಗ್ರಾಂ ವಿಟಮಿನ್ ಸಿ ಸೇವನೆಯಿಂದ ಯಾವುದೇ ರೀತಿಯ ರೋಗಗಳಿಂದ ಶರೀರವನ್ನು ರಕ್ಷಿಸಿಕೊಳ್ಳಬಹುದು.  ವಿಟಮಿನ್ ಸಿ ಹೆಚ್ಚಾಗಿರುವ ಕಿತ್ತಳೆ, ಸೌತೆಕಾಯಿ, ನಿಂಬೆ, ನೆಲ್ಲಿಕಾಯಿ ಮತ್ತು ಸೀಬೆಹಣ್ಣುಗಳನ್ನು ಹೆಚ್ಚಾಗಿ ಸೇವಿಸುವುದು ಆಗತ್ಯ. ಪ್ರತಿನಿತ್ಯ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಲೋಟ ಬಿಸಿ ನೀರಿಗೆ ನಿಂಬೆ ರಸ ಸೇವಿಸಿ ಕುಡಿಯುವುದು ಆರೋಗ್ಯಕ್ಕೆ ಉತ್ತಮ. 

ದೇಹದ ಹಲವು ಸಮಸ್ಯೆಗಳಿಗೆ ವಿಟಮಿನ್ ಇ ರಾಮಬಾಣವಿದ್ದಂತೆ. ಪ್ರತಿನಿತ್ಯ ವಿಟಮಿನ್ ಇ ಸಮೃದ್ಧವಾಗಿರುವ ಆಹಾರ ಸೇವನೆಯಿಂದ ಹೃದಯ ಮತ್ತು ಮನಸ್ಸು ಉಲ್ಲಾಸಭಾರಿತವಾಗಿರಲು ಸಹಕಾರಿಯಾಗುತ್ತದೆ. ಪ್ರತಿನಿತ್ಯ ಸೂರ್ಯಕಾಂತಿ ಬಿಜ, ಕಡಲೆಕಾಯಿ ಬೀಜ ಸೇವಿಸುವುದು ಅಗತ್ಯ. ಮಿನಿನಲ್ಲಿ ವಿಟಮಿನ್ ಇ ಅಂಶ ಹೆಚ್ಚಾಗಿರುವುದರಿಂದ ಅದೂ ಸಹ ಆರೋಗ್ಯ ವೃದ್ಧಿಗೆ ಸಹಕಾರಿ.

ಸಸ್ಯಾಹಾರದಲ್ಲಿ ಪೊಟ್ಯಾಷಿಯಂ, ಕಾರ್ಬೋಹೈಡ್ರೇಟ್, ಅಪರ್ಯಾಪ್ತ ಕೊಬ್ಬು, ಫೈಬರ್, ಕ್ಯಾಲ್ಸಿಯಂ, ಮೆಗ್ನೀಷಿಯಂ, ವಿಟಮಿನ್ ಸಿ ಮತ್ತು ವಿಟಮಿನ್ ಎ ಅಂಶಗಳಿರುವುದರಿಂದ ರಕ್ತದೊತ್ತಡ ಸಮತೋಲನವಾಗಿರಲು ಸಹಕಾರಿ. ಅಷ್ಟೇ ಅಲ್ಲದೆ, ಸ್ಥೂಲಕಾಯವನ್ನು ಕಡಿಮೆ ಮಾಡಿಕೊಳ್ಳಲು ಸಹಕಾರಿ. ಸಸ್ಯಾಹಾರಿ ಆಹಾರದಲ್ಲಿ ಕೊಲೆಸ್ಟರಾಲ್ ಮತ್ತು ಕೊಬ್ಬಿನ ಅಂಶ ಕಡಿಮೆ ಇರುವುದರಿಂದ ಅಧಿಕ ರಕ್ತದೊತ್ತಡದ ಅಪಾಯವನ್ನು ಕಡಿಮೆ ಮಾಡುತ್ತದೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link