ಈ ಹಣ್ಣುಗಳನ್ನು ಜಗಿದು ತಿನ್ನಿ!ಇದರ ರಸವೇ ಹಲ್ಲುಗಳಲ್ಲಿ ಅಂಟಿ ಕುಳಿತಿರುವ ಹಳದಿ ಕಲೆಗಳನ್ನು ತೆಗೆದುಹಾಕುತ್ತದೆ !
ಹಳದಿ ಹಲ್ಲುಗಳನ್ನು ಕ್ಲೀನ್ ಮಾಡಿ ಬಿಳುಪುಗೊಳಿಸಲು ದಂತವೈದ್ಯರ ಬಳಿಗೆ ಹೋಗಬಹುದು.ಆದರೆ, ಅಲ್ಲಿ ದುಬಾರಿ ಶುಲ್ಕವನ್ನು ನೀಡಬೇಕಾಗುತ್ತದೆ. ಇದರ ಬದಲು ನೈಸರ್ಗಿಕವಾಗಿ ಹಳದಿ ಹಲ್ಲುಗಳು ಮುತ್ತಿನಂತೆ ಹೊಳೆಯುವಂತೆ ಮಾಡಬಹುದು. ಈ ಕೆಳಗಿನ ಹಣ್ಣುಗಳನ್ನು ಜಗಿದು ತಿಂದರೆ ಈ ಹಣ್ಣುಗಳ ರಸವೇ ಹಲ್ಲಿನ ಹಳದಿ ಕಲೆಗಳನ್ನು ಹೋಗಲಾಡಿಸುತ್ತವೆ.
ಸ್ಟ್ರಾಬೆರಿಗಳು ಮ್ಯಾಲಿಕ್ ಆಮ್ಲವನ್ನು ಹೊಂದಿರುತ್ತವೆ. ಈ ಆಮ್ಲವು ಬ್ಲೀಚಿಂಗ್ ಗುಣಲಕ್ಷಣಗಳನ್ನು ಹೊಂದಿದ್ದು ಹಲ್ಲುಗಳ ಮೇಲೆ ಅಂಟಿಕೊಂಡಿರುವ ಈ ಹಳದಿ ಪದರವನ್ನು ಸಡಿಲಗೊಳಿಸುತ್ತದೆ.
ಕಲ್ಲಂಗಡಿ ಸ್ಟ್ರಾಬೆರಿಗಳಿಗಿಂತ ಹೆಚ್ಚು ಮ್ಯಾಲಿಕ್ ಆಮ್ಲವನ್ನು ಹೊಂದಿರುತ್ತದೆ. ಈ ಅಂಶವು ಲಾಲಾರಸದ ಉತ್ಪಾದನೆಯನ್ನು ಹೆಚ್ಚಿಸಲು ಮತ್ತು ಹಲ್ಲುಗಳಿಂದ ಪ್ಲೇಕ್ ಅನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ.
ಅನಾನಸ್ ಹಣ್ಣು ಹಲ್ಲುಗಳಲ್ಲಿ ಅಂಟಿಕೊಂಡಿರುವ ಬ್ಯಾಕ್ಟೀರಿಯಾವನ್ನು ತೆಗೆದುಹಾಕುತ್ತದೆ. ಇದು ಬ್ರೋಮೆಲೈನ್ ಎಂಬ ಪ್ರೋಟಿಯೋಲೈಟಿಕ್ ಕಿಣ್ವವನ್ನು ಹೊಂದಿರುತ್ತದೆ.ಇದು ಹಲ್ಲುಗಳ ಹಳದಿ ಪದರವನ್ನು ಒಡೆಯುವ ಕೆಲಸ ಮಾಡುತ್ತದೆ.
ಅನಾನಸ್ ನಂತತೆಯೇ ಪ್ರೋಟಿಯೋಲೈಟಿಕ್ ಕಿಣ್ವ ಹೊಂದಿರುವ ಇನ್ನೊಂದು ಹಣ್ಣು ಪಪ್ಪಾಯ. ಇದರಲ್ಲಿರುವ ಕಿಣ್ವವನ್ನು ಪಪೈನ್ ಎಂದು ಕರೆಯಲಾಗುತ್ತದೆ.ಇದು ಹಲ್ಲುಗಳಿಗೆ ಹಾನಿ ಮಾಡುವ ಪ್ರೋಟೀನ್ ಅನ್ನು ತೆಗೆದುಹಾಕುತ್ತದೆ.
ಆಪಲ್ ಲಾಲಾರಸ ಉತ್ಪಾದನೆಯನ್ನು ಹೆಚ್ಚಿಸುವ ಮೂಲಕ ನೈಸರ್ಗಿಕವಾಗಿ ಹಲ್ಲುಗಳನ್ನು ಸ್ವಚ್ಛಗೊಳಿಸಲು ಕೆಲಸ ಮಾಡುತ್ತದೆ. ಇದು ಬಾಯಿಯಲ್ಲಿ ದುರ್ವಾಸನೆ ಉಂಟುಮಾಡುವ ಬ್ಯಾಕ್ಟೀರಿಯಾವನ್ನು ಕೊಲ್ಲುತ್ತದೆ.
ಕಿತ್ತಳೆಯಂತಹ ಸಿಟ್ರಸ್ ಹಣ್ಣುಗಳನ್ನು ತಿನ್ನುವುದರಿಂದ ಬಾಯಿಯಲ್ಲಿ ಲಾಲಾರಸದ ಉತ್ಪಾದನೆ ಹೆಚ್ಚಾಗುತ್ತದೆ. ಇದು ನೈಸರ್ಗಿಕವಾಗಿ ಹಲ್ಲುಗಳನ್ನು ಸ್ವಚ್ಛಗೊಳಿಸುತ್ತದೆ.