ಪ್ರತಿದಿನ ವೀಳ್ಯದೆಲೆ ತಿಂತೀರಾ..? ಹಾಗಿದ್ರೆ ಈ ಮಾರಕ ರೋಗಗಳಿಂದ ನೀವು ಸೇಫ್
ವೀಳ್ಯದೆಲೆಯು ಗ್ಯಾಸ್ಟ್ರೋಪ್ರೊಟೆಕ್ಟಿವ್ ಗುಣಗಳನ್ನು ಹೊಂದಿದ್ದು, ಇದು ಗ್ಯಾಸ್ಟ್ರಿಕ್ ಅಲ್ಸರ್ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ ಮತ್ತು ಅಲ್ಸರ್ ರೋಗಿಗಳಿಗೆ ಪ್ರಯೋಜನಕಾರಿ.
ವೀಳ್ಯದೆಲೆಯನ್ನು ಪ್ರತಿದಿನ ತಿನ್ನುವುದರಿಂದ ಶಿಲೀಂಧ್ರಗಳ ಸೋಂಕಿನಿಂದ ಪರಿಹಾರವನ್ನು ಪಡೆಯಬಹುದು. ಇದಕ್ಕೆ ಕಾರಣ ವೀಳ್ಯದೆಲೆಯಲ್ಲಿ ಹೈಡ್ರಾಕ್ಸಿಕಾವಿಕೋಲ್ ಎಂಬ ಜೈವಿಕ ಸಂಯುಕ್ತವಿದೆ.
ಪ್ರತಿದಿನ ವೀಳ್ಯದೆಲೆಯನ್ನು ತಿನ್ನುವುದರಿಂದ ರಕ್ತದಲ್ಲಿನ ಸಕ್ಕರೆಯ ಸಮಸ್ಯೆಗಳು ಕಡಿಮೆಯಾಗುತ್ತವೆ. ಅಧಿಕ ರಕ್ತದ ಸಕ್ಕರೆ ಹೊಂದಿದ್ದರೆ ವೀಳ್ಯದೆಲೆಯನ್ನು ನಿಯಮಿತವಾಗಿ ಅಗಿಯಿರಿ.
ಮಲಬದ್ಧತೆ ಸಮಸ್ಯೆಯಿಂದ ಬಳಲುತ್ತಿದ್ದವರು ವೀಳ್ಯದೆಲೆಯನ್ನು ಸೇವಿಸಬಹುದು. ವೀಳ್ಯದೆಲೆಯಲ್ಲಿರುವ ಔಷಧೀಯ ಗುಣಗಳು ಮಲಬದ್ಧತೆಗೆ ಪರಿಹಾರ ನೀಡುತ್ತದೆ.
ವೀಳ್ಯದೆಲೆ ತಿಂದರೆ ತಲೆನೋವಿನಿಂದ ಉಪಶಮನ ಪಡೆಯಬಹುದು. ವೀಳ್ಯದೆಲೆಯು ನೋವು ನಿವಾರಕ ಗುಣಗಳನ್ನು ಹೊಂದಿದ್ದು ನೋವಿನಿಂದ ಉಪಶಮನವನ್ನು ನೀಡುತ್ತದೆ.
ಇಲ್ಲಿ ನೀಡಿರುವ ಮಾಹಿತಿ ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇವುಗಳನ್ನು ಅನುಸರಿಸುವ ಮೊದಲು ವೈದ್ಯಕೀಯ ಸಲಹೆಯನ್ನು ಪಡೆಯುವುದು ಒಳ್ಳೆಯದರು. ಈ ಮಾಹಿತಿಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸಿಲ್ಲ.