ಮೊಸರಿಗೆ ಈ ಕಪ್ಪು ಬೀಜ ಬೆರೆಸಿ ತಿಂದರೆ ಸಾಕು.. ಕೂಡಲೇ ನಾರ್ಮಲ್ ಆಗುತ್ತೆ ಬ್ಲಡ್ ಶುಗರ್!
ಮೊಸರಿನಲ್ಲಿ ಪ್ರೋಟೀನ್, ಕಾರ್ಬೋಹೈಡ್ರೇಟ್, ಫೈಬರ್, ವಿಟಮಿನ್ ಬಿ 12, ಕ್ಯಾಲ್ಸಿಯಂ, ರಂಜಕ ಮತ್ತು ರೈಬೋಫ್ಲಾವಿನ್ ಪೋಷಕಾಂಶಗಳಿರುತ್ತವೆ.
ಮೊಸರು ಆರೋಗ್ಯಕ್ಕೆ ಹಲವಾರು ಪ್ರಯೋಜನಗಳಿವೆ. ಮೊಸರು ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್ (ಜಿಐ) ಹೊಂದಿದೆ. ಇದನ್ನು ಸೇವಿಸುವುದರಿಂದ ಮಧುಮೇಹ ಹೆಚ್ಚಾಗುವುದಿಲ್ಲ.
ಮಧುಮೇಹ ಇರುವವರು ಮೊಸರಿನ ಜೊತೆ ಎಳ್ಳು ಬೆರೆಸಿ ತಿನ್ನುವುದು ಒಳ್ಳೆಯದು. ಮೊಸರಿನಲ್ಲಿ ಕಾರ್ಬೋಹೈಡ್ರೇಟ್ ಕಡಿಮೆ ಇರುತ್ತದೆ. ಹೀಗಾಗಿ ಶುಗರ್ ಲೆವಲ್ ಕಂಟ್ರೋಲ್‌ನಲ್ಲಿರುತ್ತದೆ.
ಮೊಸರು ಹೆಚ್ಚಿನ ಪ್ರೋಟೀನ್ ಅಂಶ ಹೊಂದಿದ್ದು, ಸಕ್ಕರೆ ಕಾಯಿಲೆ ಇರುವವರಿಗೆ ಇದು ಉತ್ತಮ ಆಹಾರವಾಗಿದೆ.
ಇಡೀ ದಿನದಲ್ಲಿ ಮೊಸರು ಮತ್ತು ಎಳ್ಳು ಬೆರೆಸಿ ಒಂದು ಬಾರಿ ಸೇವಿಸಿ. ಲಿಗ್ನಾನ್ಸ್‌ನಲ್ಲಿ ಸಮೃದ್ಧವಾಗಿದೆ ಎಳ್ಳು ಬೀಜಗಳ ಸೇವನೆಯಿಂದ ಬ್ಲಡ್ ಶುಗರ್ ನಾರ್ಮಲ್ ಆಗಿರುತ್ತದೆ.
ಮೊಸರಿಗೆ ಕಪ್ಪು ಎಳ್ಳು ಬೆರೆಸಿ ತಿಂದರೆ ಮಧುಮೇಹಿಗಳಿಗೆ ಬಹಳಷ್ಟು ಪ್ರಯೋಜನ ಸಿಗುತ್ತದೆ.
ಬೆಳಗ್ಗೆ ಒಂದು ಕಪ್ ಮೊಸರಿಗೆ ಚಿಟಿಕೆ ಪ್ರಮಾಣದಲ್ಲಿ ಕಪ್ಪು ಎಳ್ಳು ಬೆರೆಸಿ ತಿಂದರೆ ದಿನವಿಡೀ ಮಧುಮೇಹ ನಿಯಂತ್ರಣದಲ್ಲಿರುತ್ತದೆ.
ಗಮನಿಸಿ: ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆ ತೆಗೆದುಕೊಳ್ಳಿ. zee kannada news ಇದನ್ನು ಖಚಿತಪಡಿಸುವುದಿಲ್ಲ.