ಅನನಾಸ್ ತಿನ್ನುವುದರಿಂದ ಈ ಎಲ್ಲಾ ಸಮಸ್ಯೆಗಳಿಗೂ ಗುಡ್ ಬೈ ಹೇಳಬಹುದು..!
ಅನಾನಸ್ ವಿಟಮಿನ್ ಸಿ ಯಲ್ಲಿ ಸಮೃದ್ದವಾಗಿದೆ ಇದನ್ನು ಸೇವಿಸುವುದರಿಂದ ನಮ್ಮ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಇದು ಅನೇಕ ರೋಗಗಳನ್ನು ಬರದಂತೆ ತಡೆಯುತ್ತದೆ.
ಅನಾನಸ್ ನಮ್ಮ ದೇಹವನ್ನು ರೋಗಗಳು ಮತ್ತು ಸೋಂಕುಗಳಿಂದ ರಕ್ಷಿಸಲು ಸಹಾಯ ಮಾಡುತ್ತದೆ. ಅನಾನಸ್ ಅನ್ನು ನಿಯಮಿತವಾಗಿ ಸೇವಿಸುವುದರಿಂದ ಶೀತ ಮತ್ತು ಜ್ವರವನ್ನು ತ್ವರಿತವಾಗಿ ಕಡಿಮೆ ಮಾಡಬಹುದು.
ಅನಾನಸ್‌ನಲ್ಲಿ ಮ್ಯಾಂಗನೀಸ್ ಅಂಶ ಸಮೃದ್ಧವಾಗಿದೆ. ಆಸ್ಟಿಯೊಪೊರೋಸಿಸ್ ವಿರುದ್ಧ ರಕ್ಷಿಸುವ ಪ್ರಮುಖ ಕಿಣ್ವಗಳನ್ನು ಉತ್ಪಾದಿಸಲು ಮ್ಯಾಂಗನೀಸ್ ನಮ್ಮ ದೇಹಕ್ಕೆ ಸಹಾಯ ಮಾಡುತ್ತದೆ.
ಅನಾನಸ್ ಅನ್ನು ನಿಯಮಿತವಾಗಿ ತಿನ್ನುವುದರಿಂದ ನಮ್ಮ ಮೂಳೆಯ ಸಾಂದ್ರತೆಯು ಹೆಚ್ಚಾಗುತ್ತದೆ. ಇದು ಮೂಳೆ ಮುರಿತದ ಅಪಾಯವನ್ನು ಸಹ ಕಡಿಮೆ ಮಾಡುತ್ತದೆ.
ಅನಾನಸ್ ಬೀಟಾ ಕ್ಯಾರೋಟಿನ್ ಮತ್ತು ವಿಟಮಿನ್ ಎ ನಂತಹ ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದೆ. ಇದು ದೃಷ್ಟಿಯನ್ನು ಹೆಚ್ಚಿಸಿ ಕಣ್ಣುಗಳನ್ನು ಆರೋಗ್ಯವಾಗಿಡುತ್ತವೆ.
ಅನಾನಸ್‌ನಲ್ಲಿರುವ ಬೊಮೆಲಿನ್ ಕಿಣ್ವವು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಇದಲ್ಲದೆ ಅನಾನಸ್ ಅನ್ನು ನಿಯಮಿತವಾಗಿ ಸೇವಿಸುವುದರಿಂದ ಕೀಲು ನೋವು ಕಡಿಮೆಯಾಗುತ್ತದೆ.