ಬೆಳ್ಳಂಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ನೆನಸಿಟ್ಟ ಈ ಡ್ರೈ ಫ್ರೂಟ್ಸ್ ತಿಂದರೆ ಸಿಗುತ್ತೆ ಅದ್ಭುತ ಆರೋಗ್ಯ ಪ್ರಯೋಜನಗಳು
ಸಾಮಾನ್ಯವಾಗಿ ಸ್ವಲ್ಪ ಸುಸ್ತು, ಬಾಯಾರಿಕೆ ಎಂದಾಗಲೆಲ್ಲಾ ಒಂದೆರಡು ಒಣದ್ರಾಕ್ಷಿಯನ್ನು ಬಾಯಿಗೆ ಒತ್ತರಿಸಿಕೊಳ್ಳುತ್ತೇವೆ. ಆದರೆ, ಇದನ್ನು ಹಾಗೆಯೇ ತಿನ್ನುವುದಕ್ಕಿಂತ ರಾತ್ರಿ ನೆನೆಸಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತಿನ್ನುವುದರಿಂದ ಆರೋಗ್ಯಕ್ಕೆ ಇನ್ನೂ ಉತ್ತಮ ಎಂದು ಹೇಳಲಾಗುತ್ತದೆ.
ಪ್ರೋಟೀನ್, ಫೈಬರ್, ರಂಜಕ ಮತ್ತು ಕಬ್ಬಿಣದ ಅಂಶಗಳಲ್ಲಿ ಸಮೃದ್ಧವಾಗಿರುವ ಬಾದಾಮಿಯನ್ನು ರಾತ್ರಿ ನೆನೆಸಿಟ್ಟು ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತಿನ್ನುವುದರಿಂದ ಮೆಮೊರಿ ಪವರ್ ಹೆಚ್ಚಾಗುತ್ತದೆ.
ಆರೋಗ್ಯಕ್ಕೆ ವರದಾನವಾಗಿರುವ ಅಂಜೂರವನ್ನು ಕಚ್ಚಾ ಸೇವಿಸುವುದಕ್ಕಿಂತ ಅದನ್ನು ರಾತ್ರಿ ನೆನೆಸಿಟ್ಟು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತಿನ್ನುವುದರಿಂದ ರೋಗನಿರೋಧಕ ಶಕ್ತಿಯ ಬಲಗೊಳ್ಳುತ್ತದೆ. ಮಾತ್ರವಲ್ಲ, ಇದು ಮಲಬದ್ಧತೆ ಸಮಸ್ಯೆಗೂ ಉತ್ತಮ ಪರಿಹಾರವಾಗಿದೆ.
ಒಮೆಗಾ 3 ಕೊಬ್ಬಿನಾಮ್ಲಗಳ ಸಮೃದ್ಧ ಮೂಲವಾಗಿರುವ ವಾಲ್ನಟ್ನಲ್ಲಿ ವಿಟಮಿನ್ ಇ, ಫೋಲಿಕ್ ಆಮ್ಲ, ಪ್ರೋಟೀನ್ ಮತ್ತು ಫೈಬರ್ ಕೂಡ ಕಂಡು ಬರುತ್ತದೆ. ಇದನ್ನು ರಾತ್ರಿ ನೆನೆಸಿಟ್ಟು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತಿನ್ನುವುದರಿಂದ ಚಯಾಪಚಯ ಸುಧಾರಿಸುವುದರ ಜೊತೆಗೆ ಬ್ಲಡ್ ಶುಗರ್ ಅನ್ನು ಕಂಟ್ರೋಲ್ ಮಾಡುವಲ್ಲಿಯೂ ಸಹಕಾರಿ ಆಗಿದೆ.
ಖರ್ಜೂರ ಆರೋಗ್ಯಕ್ಕೆ ಪ್ರಯೋಜನಕಾರಿ ಎಂದು ನಿಮಗೆ ತಿಳಿದೇ ಇದೆ. ಖರ್ಜೂರವನ್ನು ರಾತ್ರಿಯಿಡೀ ನೆನೆಸಿಟ್ಟು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತಿನ್ನುವುದರಿಂದ ದೇಹದಲ್ಲಿ ಕಬ್ಬಿಣದ ಮಟ್ಟ ಹೆಚ್ಚಾಗುತ್ತದೆ. ಮಾತ್ರವಲ್ಲ ಇದು ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸಲು ಮತ್ತು ಮೂಲೆಗಳನ್ನು ಸ್ಟ್ರಾಂಗ್ ಆಗಿಸುವಲ್ಲಿಯೂ ಬಹಳ ಪ್ರಯೋಜನಕಾರಿ ಆಗಿದೆ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇದನ್ನು Zee ಮೀಡಿಯಾ ಖಚಿತಪಡಿಸುವುದಿಲ್ಲ.