ಈ ನಾಲ್ಕು ತರಕಾರಿಗಳನ್ನು ಬೇಯಿಸದೆ ತಿನ್ನಲೇ ಬಾರದು ..! ದೇಹದ ಈ ಭಾಗಗಳಿಗೆ ಮಾಡುತ್ತದೆ ಹಾನಿ
ಹಸಿರು ತರಕಾರಿಗಳು ಅನೇಕ ಪ್ರಯೋಜನಗಳನ್ನು ಹೊಂದಿವೆ ಮತ್ತು ಸರಿಯಾದ ಪ್ರಮಾಣದಲ್ಲಿ ಇವುಗಳನ್ನು ಸೇವಿಸಿದರೆ, ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುವುದಿಲ್ಲ. ಕೆಲವರು ಪಾಲಕ್, ಬ್ರೊಕೊಲಿಯಂತಹ ತರಕಾರಿಗಳನ್ನು ಹಸಿ ತಿನ್ನಲು ಬಯಸುತ್ತಾರೆ. ಆದರೆ ಈ ತರಕಾರಿಗಳನ್ನು ದೀರ್ಘಕಾಲದವರೆಗೆ ಹಸಿಯಾಗಿಯೇ ತಿನ್ನುತ್ತಿದ್ದರೆ, ಅನೇಕ ಕಾಯಿಲೆಗಳನ್ನು ಎದುರಿಸಬೇಕಾಗಬಹುದು. ಇದು ಮೂತ್ರಪಿಂಡಗಳ ಮೇಲೆ ಪರಿಣಾಮ ಬೀರುತ್ತದೆ.
ಆಲೂಗೆಡ್ಡೆಯನ್ನು ಸಾಮಾನ್ಯವಾಗಿ ಹಸಿಯಾಗಿ ತಿನ್ನುವುದಿಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ಕೆಲವರು ಆಲೂಗಡ್ಡೆಯನ್ನು ಹಸಿಯಾಗಿ ತಿನ್ನುವ ಅಭ್ಯಾಸವನ್ನು ಹೊಂದಿದ್ದಾರೆ. ಆದರೆ ಹಸಿ ಆಲೂಗೆಡ್ಡೆ ತಿಂದರೆ ಅನೇಕ ಕಾಯಿಲೆಗಳು ಬರಬಹುದು. ಸೋಲನೈನ್ ಎಂಬ ವಿಶೇಷ ರೀತಿಯ ವಿಷಕಾರಿ ವಸ್ತುವು ಹಸಿ ಆಲೂಗಡ್ಡೆಯಲ್ಲಿ ಕಂಡುಬರುತ್ತದೆ. ಇದು ತಲೆನೋವು, ವಾಂತಿ ಮತ್ತು ಅತಿಸಾರದಂತಹ ಸಮಸ್ಯೆಗಳನ್ನು ಉಂಟುಮಾಡುತ್ತದೆ.
ಕೆಲವರು ಸಲಾಡ್‌ನಲ್ಲಿ ಬೆಂಡೆಕಾಯಿಯನ್ನು ಬೆರೆಸಿ ಹಸಿಯಾಗಿ ತಿನ್ನುತ್ತಾರೆ. ಆದರೆ ಹಸಿ ಬೆಂಡೆಕಾಯಿ ದೇಹಕ್ಕೆ ಹಾನಿ ಉಂಟು ಮಾಡುತ್ತದೆ. ಬೆಂಡೆಕಾಯಿಯನ್ನು ತಿನ್ನುವ ಮೊದಲು ಬೇಯಿಸದಿದ್ದರೆ, ಅದು ಹೊಟ್ಟೆಗೆ ಹೋಗಿ ಜೀರ್ಣಾಂಗ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ. ಇದು ತೀವ್ರವಾದ ಹೊಟ್ಟೆ ನೋವು, ವಾಯು ಮುಂತಾದ ಸಮಸ್ಯೆಗಳನ್ನು ಉಂಟುಮಾಡಬಹುದು.
ಹಸಿ ಬದನೆಕಾಯಿಯನ್ನು ತಿನ್ನುವುದರಿಂದ ಆರೋಗ್ಯಕ್ಕೆ ಹಾನಿಯಾಗುತ್ತದೆ. ಇನ್ಸೈಡರ್ ವರದಿಯ ಪ್ರಕಾರ, ಬದನೆಕಾಯಿಯನ್ನು ಬೇಯಿಸದೆ ಅಥವಾ ಸಂಪೂರ್ಣವಾಗಿ ಬೇಯಿಸದೆ ತಿನ್ನುವುದು ವಾಂತಿ, ವಾಕರಿಕೆ ಮತ್ತು ಅತಿಸಾರದಂತಹ ಸಮಸ್ಯೆಗಳಿಗೆ ಕಾರಣವಾಗುತ್ತದೆ.