ವರ್ಷಕ್ಕೊಮ್ಮೆ ಸಿಗುವ ಈ ಕಾಯಿ ತಿಂದರೆ ಹೊಟ್ಟೆ ಮತ್ತು ಸೊಂಟದ ಬೊಜ್ಜು ಬೆಣ್ಣೆಯಂತೆ ಕರಗಿಹೋಗುತ್ತೆ! ಬ್ಲಡ್ ಶುಗರ್ ಕಂಟ್ರೋಲ್ ಮಾಡಲು ಸಹ ಇದು ಸಹಕಾರಿ
ಬೇಸಿಗೆಯಲ್ಲಷ್ಟೇ ಸಿಗುವ ಇದೊಂದು ಕಾಯಿ ಉಪ್ಪಿನಕಾಯಿ, ಚಟ್ನಿಗೆ ಹೇಳಿಮಾಡಿಸಿದ್ದು... ಇದು ರುಚಿಯಷ್ಟೇ ಅಲ್ಲದೆ, ಅನೇಕ ಆರೋಗ್ಯ ಪ್ರಯೋಜನಗಳನ್ನೂ ಸಹ ಹೊಂದಿದೆ. ಅಷ್ಟಕ್ಕೂ ಆ ಕಾಯಿ ಯಾವುದು? ಅದರ ಪ್ರಯೋಜನಗಳೇನು ಎಂಬುದನ್ನು ಮುಂದೆ ತಿಳಿಯೋಣ.
ಕ್ರ್ಯಾನ್ಬೆರಿ ಅಥವಾ ಕರಂಡೆ ಕಾಯಿ ವಿಟಮಿನ್ ಸಿ ಮತ್ತು ವಿಟಮಿನ್ ಎ ಅನ್ನು ಹೊಂದಿರುತ್ತದೆ. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುವುದಲ್ಲದೆ, ಹಲವಾರು ರೀತಿಯ ಕಾಯಿಲೆಗಳಿಂದ ದೂರವಿರಬಹುದು.
ಕ್ರ್ಯಾನ್‌ಬೆರಿ ತಿನ್ನುವುದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಇದು ಜೀರ್ಣಾಂಗ ವ್ಯವಸ್ಥೆಯು ಉತ್ತಮವಾಗಿ ಕಾರ್ಯನಿರ್ವಹಿಸಲು ಸಹಾಯ ಮಾಡುತ್ತದೆ. ಹಾಗೆಯೇ ಗ್ಯಾಸ್, ಮಲಬದ್ಧತೆ ಮತ್ತು ಆಮ್ಲೀಯತೆಯ ಸಮಸ್ಯೆಗಳಿಂದ ಪರಿಹಾರವನ್ನು ನೀಡುತ್ತದೆ.
ಕ್ರ್ಯಾನ್ಬೆರಿ ಫೈಬರ್ ಅನ್ನು ಹೊಂದಿದೆ. ಹೀಗಾಗಿ ಇದರ ಜ್ಯೂಸ್ ಕುಡಿಯುವುದರಿಂದ ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ. ಜೊತೆಗೆ ಕ್ರ್ಯಾನ್ಬೆರಿಯಲ್ಲಿ ಉತ್ತಮ ಪ್ರಮಾಣದ ಕ್ಯಾಲ್ಸಿಯಂ ಕಂಡುಬರುತ್ತದೆ. ಹೀಗಾಗಿ ಇದನ್ನು ಸೇವಿಸುವುದರಿಂದ ಮೂಳೆಗಳು ಬಲಗೊಳ್ಳುತ್ತವೆ.
ಇದು ವಿಟಮಿನ್ ಸಿ ಮತ್ತು ವಿಟಮಿನ್ ಎ ಅನ್ನು ಹೊಂದಿರುತ್ತದೆ. ಈ ಎರಡೂ ಜೀವಸತ್ವಗಳು ಕೂದಲಿಗೆ ಒಳ್ಳೆಯದು. ಹೀಗಾಗಿ ಕೂದಲು ಬೆಳವಣಿಗೆ, ಬಿಳಿ ಕೂದಲು ಕಪ್ಪಾಗಿಸಲು ಮತ್ತು ಆರೋಗ್ಯಕರವಾಗಿ ದಪ್ಪವಾಗಲು ಇದು ಸಹಾಯ ಮಾಡುತ್ತದೆ.
ನಿಯಮಿತವಾಗಿ ಕರಂಡೆ ಹಣ್ಣನ್ನು ತಿನ್ನುವುದು ಮಾನಸಿಕ ಆರೋಗ್ಯವನ್ನು ಸುಧಾರಿಸುತ್ತದೆ. ಮೆಗ್ನೀಸಿಯಮ್, ವಿಟಮಿನ್ಸ್ ಮತ್ತು ಟ್ರಿಪ್ಟೊಫಾನ್ ನಂತಹ ಪೋಷಕಾಂಶಗಳು ಇದರಲ್ಲಿ ಕಂಡುಬರುತ್ತವೆ. ಇದು ಒಟ್ಟಾರೆ ಮಾನಸಿಕ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಇದರಿಂದ ಜ್ಞಾಪಕಶಕ್ತಿಯೂ ಸುಧಾರಿಸುತ್ತದೆ.
ಕ್ರ್ಯಾನ್ಬೆರಿಯಲ್ಲಿ ಸಾಕಷ್ಟು ಪ್ರಮಾಣದ ಕಬ್ಬಿಣವು ಕಂಡುಬರುತ್ತದೆ. ಇದರ ಸೇವನೆಯು ದೇಹದಲ್ಲಿ ಹಿಮೋಗ್ಲೋಬಿನ್ ಪ್ರಮಾಣವನ್ನು ಹೆಚ್ಚಿಸುತ್ತದೆ. ಜೊತೆಗೆ ರಕ್ತಹೀನತೆಯ ಸಮಸ್ಯೆಯನ್ನು ಗುಣಪಡಿಸಲು ಸಹಾಯ ಮಾಡುತ್ತದೆ.
ಸೂಚನೆ: ಪ್ರಿಯ ಓದುಗರೇ, ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತಪ್ಪದೇ ತೆಗೆದುಕೊಳ್ಳಿ.