ಪ್ರತಿದಿನ ಒಂದೆರಡು ಖರ್ಜೂರ ತಿಂದರೆ ಆರೋಗ್ಯಕ್ಕಿದೆ ಇಷ್ಟೆಲ್ಲಾ ಲಾಭಗಳು
ಆರೋಗ್ಯ ತಜ್ಞರ ಪ್ರಕಾರ, ನಿಯಮಿತವಾಗಿ ಖರ್ಜೂರ ಸೇವನೆಯು ನಮ್ಮನ್ನು ಹಲವು ಆರೋಗ್ಯ ಸಮಸ್ಯೆಗಳಿಂದ ದೂರ ಉಳಿಯುವಂತೆ ಮಾಡುತ್ತದೆ. ದಿನ ಒಂದೆರಡು ಖರ್ಜೂರ ತಿನ್ನುವುದರಿಂದ ಆರೋಗ್ಯಕ್ಕಿರುವ ಅದ್ಭುತ ಲಾಭಗಳೆಂದರೆ...
ಖರ್ಜೂರದಲ್ಲಿ ಕರಗಬಲ್ಲ ಹಾಗೂ ಕರಗುವ ನಾರುಗಳು ಹೇರಳವಾಗಿರುವುದರಿಂದ ಇದು ಜೀರ್ಣಾಂಗವ್ಯವಸ್ಥೆಯನ್ನು ಸುಧಾರಿಸಲು ಪ್ರಯೋಜನಕಾರಿ ಆಗಿದೆ.
ಖರ್ಜೂರದಲ್ಲಿ ಕೋಸ್, ಸುಕ್ರೋಸ್ ಮತ್ತು ಫ್ರಕ್ಟೋಸ್‌ನಂತಹ ನೈಸರ್ಗಿಕ ಸಕ್ಕರೆಯ ಅಂಶಗಳು ಕಂಡು ಬರುವುದರಿಂದ ಇದು ನಮಗೆ ಉತ್ತಮ ಶಕ್ತಿ ವರ್ಧಕ ಎನ್ನಲಾಗುತ್ತದೆ. ಹಾಗಾಗಿಯೇ, ಉಪವಾಸದ ಸಮಯದಲ್ಲಿ ಖರ್ಜೂರ ತಿನ್ನುವಂತೆ ಸಲಹೆ ನೀಡಲಾಗುತ್ತದೆ.
ಖರ್ಜೂರದಲ್ಲಿ ಪೊಟ್ಯಾಸಿಯಮ್ ಹೆಚ್ಚಾಗಿದ್ದು, ಸೋಡಿಯಂ ಕಡಿಮೆ ಪ್ರಮಾಣದಲ್ಲಿ ಕಂಡು ಬರುತ್ತದೆ. ಇದು ನರಮಂಡಲವನ್ನು ಆರೋಗ್ಯವಾಗಿರಿಸುವುದರ ಜೊತೆಗೆ ಪಾರ್ಶ್ವವಾಯು ಅಪಾಯವನ್ನು ಕಡಿಮೆ ಮಾಡುತ್ತದೆ.
ನಿಯಮಿತ ಖರ್ಜೂರ ಸೇವನೆಯಿಂದ LDL ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಬಹುದು ಎಂದು ಸಂಶೋಧನೆಗಳಿಂದ ತಿಳಿದುಬಂದಿದೆ.
ಖರ್ಜೂರದಲ್ಲಿ ಕಬ್ಬಿಣಾಂಶ ಹೆರಳವಾಗಿರುವುದರಿಂದ ರಕ್ತಹೀನತೆ ಚಿಕಿತ್ಸೆಯಲ್ಲಿ ಇದು ಪರಿಣಾಮಕಾರಿ ಮದ್ದು.
ಖರ್ಜೂರದ ನಿಯಮಿತ ಸೇವನೆಯು ಹೃದಯ ಸಂಬಂಧಿ ಆರೋಗ್ಯ ಸಮಸ್ಯೆಗಳಿಂದ ನಮ್ಮನ್ನು ರಕ್ಷಿಸುವಲ್ಲಿ ಪರಿಣಾಮಕಾರಿ ಎನ್ನಲಾಗುತ್ತದೆ.
ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.