Weight Loss Tips: ತೂಕ ನಷ್ಟಕ್ಕಾಗಿ 6 ಸುಲಭ ತಂತ್ರಗಳು
ಅಧಿಕ ತೂಕ ಹೊಂದಿರುವ ಪ್ರತಿಯೊಬ್ಬರೂ ತೂಕ ಇಳಿಸಿಕೊಳ್ಳಬೇಕು ಎಂದು ಬಯಸುತ್ತಾರೆ. ನೀವೂ ಅಂತಹವರಲ್ಲಿ ಒಬ್ಬರಾಗಿದ್ದರೆ ಆರು ಸುಲಭ ವಿಧಾನಗಳನ್ನು ಅಳವಡಿಸಿಕೊಳ್ಳುವ ಮೂಲಕ ನೀವು ಸಮರ್ಥನೀಯವಾಗಿ ತೂಕ ಇಳಿಸಿಕೊಳ್ಳಬಹುದು. ಆ ವಿಧಾನಗಳೆಂದರೆ...
ನೀವು ಆರೋಗ್ಯಕರವಾಗಿ ತೂಕ ಇಳಿಸಿಕೊಳ್ಳಲು ಮೊದಲು ಆರೋಗ್ಯ ವೃತ್ತಿಪರರನ್ನು ಸಂಪರ್ಕಿಸುವ ಮೂಲಕ ನಿಮ್ಮ ದೈನಂದಿನ ಕ್ಯಾಲೋರಿ ಅಗತ್ಯಗಳನ್ನು ನಿರ್ಧರಿಸಿ. ಇದಕ್ಕೆ ತಕ್ಕಂತೆ ದೈನಂದಿನ ಆಹಾರ ಕ್ರಮ ರೂಢಿಸಿಕೊಳ್ಳುವ ಮೂಲಕ ಸುಲಭವಾಗಿ ತೂಕ ಇಳಿಸಬಹುದು.
ತೂಕ ನಷ್ಟದ ಸಮಯದಲ್ಲಿ ಸ್ನಾಯುವಿನ ದ್ರವ್ಯರಾಶಿಯನ್ನು ಬೆಂಬಲಿಸುವ ಪ್ರೊಟೀನ್ ಭರಿತ ಆಹಾರಗಳಾದ ಕೋಳಿ, ಮೀನು, ಮೊಟ್ಟೆ, ಮಸೂರ ಮತ್ತು ಮೊಸರನ್ನು ನಿಮ್ಮ ಆಹಾರದ ಭಾಗವಾಗಿಸಿ. ಇದು ಆರೋಗ್ಯಕರ ತೂಕ ನಷ್ಟಕ್ಕೆ ಸಹಕಾರಿ ಆಗಿದೆ.
ಸಂಸ್ಕರಿಸಿದ ಆಹಾರಗಳ ಬದಲಿದೆ ತಾಜಾ ಆಹಾರಗಳು ಹಣ್ಣುಗಳು, ತರಕಾರಿಗಳ ಸೇವನೆಗೆ ಒತ್ತು ನೀಡಿ. ಇದು ತ್ವರಿತ ತೂಕ ನಷ್ಟಕ್ಕೆ ಸಾಕಷ್ಟು ಕೊಡುಗೆ ನೀಡುತ್ತದೆ.
ಈ ವೇಗದ ಜೀವನಶೈಲಿಯಲ್ಲಿ ಆಹಾರ ಸೇವಿಸಲು ಕೂಡ ಸಮಯ ಇರುವುದಿಲ್ಲ. ಹಾಗಂತ, ಆತುರಾತುರವಾಗಿ ತಿನ್ನುವುದನ್ನು ತಪ್ಪಿಸಿ. ಬದಲಿಗೆ ನಿಧಾನವಾಗಿ ಆಹಾರವನ್ನು ಚೆನ್ನಾಗಿ ಜಗಿದು ತಿನ್ನುವ ಅಭ್ಯಾಸ ರೂಢಿಸಿಕೊಳ್ಳಿ. ಇದರಿಂದ ಅತಿಯಾಗಿ ತಿನ್ನುವುದನ್ನು ತಪ್ಪಿಸಬಹುದು. ಜೊತೆಗೆ, ತೂಕವನ್ನು ನಿಯಂತ್ರಿಸಬಹುದು.
ಆಹಾರ ಪದ್ದತಿಯ ಜೊತೆಗೆ ವಾಕ್, ವ್ಯಾಯಾಮ, ಯೋಗ ಮಾಡುವುದು ಹೀಗೆ ನಿಯಮಿತ ದೈಹಿಕ ಚಟುವಟಿಕೆಗಳನ್ನು ರೂಢಿಸಿಕೊಳ್ಳುವುದರಿಂದ ಸುಲಭವಾಗಿ ತೂಕ ಇಳಿಸಿಕೊಳ್ಳಬಹುದು.
ನಿದ್ರೆಯ ಅಭಾವವು ಕೂಡ ತೂಕ ಹೆಚ್ಚಳಕ್ಕೆ ಒಂದು ಕಾರಣವಾಗಿದೆ. ಇದನ್ನು ತಪ್ಪಿಸಲು ತೂಕ ಇಳಿಕೆಗೆ ಆಹಾರದ ಜೊತೆಗೆ ವಯಸ್ಸಿಗೆ ತಕ್ಕಂತೆ ಪ್ರತಿ ನಿತ್ಯ ಸಾಕಷ್ಟು ನಿದ್ರೆಯನ್ನು ಪಡೆಯುವುದು ಕೂಡ ಅಗತ್ಯ.
ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.