ಮೊಟ್ಟೆಗೆ ಈ ಹುಳಿ ಪದಾರ್ಥ ಬೆರೆಸಿ ತಲೆಗೆ ಹಚ್ಚಿ.. ಡ್ಯಾಂಡ್ರಫ್ ತೊಲಗಿ ಮಾರುದ್ದ ಕೂದಲು ಬೆಳೆದು ರೇಷ್ಮೆಯಂತೆ ಹೊಳೆಯುವುದು!
ಮೊಟ್ಟೆ ಪ್ರೋಟೀನ್ ಸಮೃದ್ಧವಾಗಿದ್ದು, ಇದರ ಹೇರ್ ಮಾಸ್ಕ್ ಹಾಕುವುದರಿಂದ ಮಳೆಗಾಲದಲ್ಲಿ ಕಾಡುವ ತಲೆಹೊಟ್ಟು ಸಮಸ್ಯೆ ದೂರವಾಗುತ್ತದೆ.
ಉದ್ದನೆಯ ಕೂದಲಿಗೆ ಮೊಸರು ಮತ್ತು ಮೊಟ್ಟೆಯ ಹೇರ್ ಪ್ಯಾಕ್ ತಯಾರಿಸಿ ಹಚ್ಚಬಹುದು. ಇದರಿಂದ ಕೂದಲಿನ ಆರೋಗ್ಯ ಸುಧಾರಿಸುವುದು.
ಒಂದು ಮೊಟ್ಟೆ ಮತ್ತು 2 ಚಮಚ ಮೊಸರನ್ನು ತೆಗೆದುಕೊಳ್ಳಿ. ಎರಡನ್ನು ಒಂದು ಬಟ್ಟಲಿನಲ್ಲಿ ಮಿಶ್ರಣ ಮಾಡಿ.
ಮೊಸರು ಮತ್ತು ಮೊಟ್ಟೆಯ ಮಿಶ್ರಣವನ್ನು ಕೂದಲಿಗೆ ಬುಡದಿಂದ ತುದಿಯವರೆಗೆ ಹಚ್ಚಿಕೊಳ್ಳಿ. ಅರ್ಧ ಘಂಟೆಯವರೆಗೆ ಹಾಗೆಯೇ ಬಿಡಿ. ಬಳಿಕ ತೊಳೆಯಿ
ಈ ಹೇರ್ ಮಾಸ್ಕ್ ಅನ್ನು ವಾರಕ್ಕೊಮ್ಮೆ ಹಚ್ಚಬಹುದು. ಈ ಆಳವಾದ ಕಂಡೀಷನಿಂಗ್ ಹೇರ್ ಮಾಸ್ಕ್ ಕೂದಲಿನ ಬೇರನ್ನು ಬಲವಾಗಿಸುತ್ತದೆ.
ಮೊಟ್ಟೆ ಮತ್ತು ಮೊಸರಿನ ಹೇರ್ ಮಾಸ್ಕ್ ಬಳಸುವುದರಿಂದ ಕೂದಲು ಉದ್ದವಾಗಿ ಮತ್ತು ದಪ್ಪವಾಗಿ ಬೆಳೆಯುವುದು. ರೇಷ್ಮೆಯಂತಹ ಹೊಳಪು ಕೂದಲಿಗೆ ಬರುತ್ತದೆ.
ಸೂಚನೆ: ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತಪ್ಪದೇ ತೆಗೆದುಕೊಳ್ಳಿ.