ನೆಗಡಿ ಕೆಮ್ಮು ಜ್ವರಕ್ಕೆ ನಿಮಿಷದಲ್ಲಿ ಉಮಶಮನ.. ಈ ಹಣ್ಣನ್ನು ಕುದಿಸಿದ ನೀರು ಕುಡಿದರೆ ಬರೋದೇ ಇಲ್ಲ ವ್ಯಾಧಿ!
ಎಲಚಿಹಣ್ಣನ್ನು ಚಚ್ಚಿ ಅದನ್ನು ನೀರು ಹಾಕದೇ ಕುಕ್ಕರ್‌ನಲ್ಲಿ ಬೇಯಿಸಿ. ಬಳಿಕ ರಸವನ್ನು ಶೋಧಿಸಿ. ಇದಕ್ಕೆ ಸಕ್ಕರೆಯ ಪಾಕ ಮಾಡಿ ಬೆರೆಸಿ. ಈ ಮಿಶ್ರಣವನ್ನು ತಿನ್ನುವುದರಿಂದ ಚಳಿಗಾಲದಲ್ಲಿ ಬರುವ ನೆಗಡಿ, ಕೆಮ್ಮು ಮತ್ತು ಜ್ವರಕ್ಕೆ ಒಳ್ಳೆಯ ಔಷಧಿಯಾಗಿದೆ.
ಎಲಚಿಹಣ್ಣಿನ ಬೀಜವನ್ನು ತೆಗೆದು ನೀರಿನಲ್ಲಿ ಅರೆದು ಮೊಡವೆಗೆ ಹಚ್ಚಬೇಕು. ಇದರಿಂದ ಮೊಡವೆಗಳು ಮಾಯವಾಗುತ್ತವೆ ಹಾಗೂ ಕಲೆ ಸಹ ಉಳಿಯುವುದಿಲ್ಲ. ಎಲಚಿಗಿಡದ ಎಲೆಗಳನ್ನು ಚೆನ್ನಾಗಿ ಅರೆದು ಕೈ - ಕಾಲುಗಳಿಗೆ ಹಚ್ಚಿದರೆ, ಮಧುಮೇಹಿಗಳನ್ನು ಕಾಡುವ ಬೆವರು ಸಮಸ್ಯೆ ಕಡಿಮೆ ಆಗುತ್ತದೆ.
ಎಲಚಿಗಿಡದ ಎಳೆಯ ಕುಡಿಯನ್ನು ಮೊಸರಿನ ಜೊತೆಯಲ್ಲಿ ಅರೆದು ಹಚ್ಚಿದರೆ ಉರಿಯು ಕಡಿಮೆ ಆಗುತ್ತದೆ ಮತ್ತು ಸುಟ್ಟಗಾಯ ಮಾಯುತ್ತದೆ. ಎಲಚಿಗಿಡದ ಎಲೆಯನ್ನು ಬೆಟ್ಟದ ನೆಲ್ಲಿಕಾಯಿಯೊಡನೆ ಅರೆದು ತಲೆಗೆ ಹಚ್ಚಿ ಸ್ನಾನ ಮಾಡಿದರೆ ಕೂದಲು ಸೊಂಪಾಗಿ ಬೆಳೆಯುತ್ತದೆ.
ಈ ಗಿಡದ ಹಸಿಯ ಚಕ್ಕೆ, ಅಳಲೆಕಾಯಿ, ತಾರೆಕಾಯಿ, ನೆಲ್ಲಿಕಾಯಿ, ಗುರುಗ ಸೊಪ್ಪು ಎಲ್ಲವನ್ನೂ ಸಮವಾಗಿ ತಂದು ಅರೆದು ತೆಂಗಿನಎಣ್ಣೆಯಲ್ಲಿ ಸೇರಿಸಿ ಕಬ್ಬಿಣದ ಪಾತ್ರೆಯಲ್ಲಿ ಹಾಕಿ ಮುಚ್ಚಿಡಿ.
ಒಂದು ತಿಂಗಳು ಇದನ್ನು ತೆಗೆಯಬಾರದು. ಗಾಳಿ ಆಡಬಾರದು. ನಂತರ ಗೆದು ತಲೆಗೆ ಹಚ್ಚಿ ಸ್ನಾನ ಮಾಡುತ್ತಾ ಇದ್ದರೆ ಬಿಳಿಕೂದಲು ಕಪ್ಪಾಗುತ್ತದೆ.
ಸೂಚನೆ: ಪ್ರಿಯ ಓದುಗರೇ, ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತಪ್ಪದೇ ತೆಗೆದುಕೊಳ್ಳಿ.