ಉತ್ತಮ ಆರೋಗ್ಯಕ್ಕಾಗಿ ನಿಮ್ಮ ಡಯಟ್ನಲ್ಲಿ ಈ ಆಹಾರಗಳನ್ನು ಇಂದೇ ತೆಗೆಯಿರಿ

Thu, 22 Sep 2022-7:30 am,

ಸೋಡಾ: ಸೋಡಾ ಜನಪ್ರಿಯ ಪಾನೀಯವಾಗಿದೆ. ಇದನ್ನು ತಯಾರಿಸಲು ಕಾರ್ಬೊನೇಟೆಡ್ ನೀರು ಮತ್ತು ಸಿಹಿಕಾರಕಗಳನ್ನು ಬಳಸಲಾಗುತ್ತದೆ. ಸೋಡಾವು ಬಹಳಷ್ಟು ಅಪರ್ಯಾಪ್ತ ಸಕ್ಕರೆಯನ್ನು ಹೊಂದಿರುತ್ತದೆ, ಇದು ದೇಹದಲ್ಲಿ ಕೊಬ್ಬಿನ ರೂಪದಲ್ಲಿ ಸಂಗ್ರಹವಾಗುತ್ತದೆ.  

ಕಚ್ಚಾ ಜೇನು: ಹಸಿ ಜೇನುತುಪ್ಪ ತಿನ್ನುವುದು ಆರೋಗ್ಯಕ್ಕೆ ತುಂಬಾ ಹಾನಿಕಾರಕ. ವಾಸ್ತವವಾಗಿ, ಕಚ್ಚಾ ಜೇನುತುಪ್ಪವು ಪಾಶ್ಚರೀಕರಣ ಪ್ರಕ್ರಿಯೆಯನ್ನು ಹೊಂದಿಲ್ಲ, ಇದರಿಂದಾಗಿ ಅನೇಕ ಹಾನಿಕಾರಕ ವಿಷಗಳು ಅದರಲ್ಲಿ ಇರುತ್ತವೆ. ಹಸಿ ಜೇನಿನ ಅತಿಯಾದ ಸೇವನೆಯು ದೌರ್ಬಲ್ಯದಂತಹ ಸಮಸ್ಯೆಗಳನ್ನು ಉಂಟುಮಾಡಬಹುದು.

ಸೀರಿಯಲ್: ಇತ್ತೀಚಿನ ದಿನಗಳಲ್ಲಿ, ಬೆಳಗಿನ ಉಪಾಹಾರಕ್ಕಾಗಿ ಸೀರಿಯಲ್ ಆಹಾರಕ್ಕೆ ಆದ್ಯತೆ ನೀಡಲಾಗುತ್ತದೆ. ಈ ಎಲ್ಲಾ ಉತ್ಪನ್ನಗಳನ್ನು ತಿನ್ನುವುದು ನಮ್ಮ ಪ್ರತಿರಕ್ಷಣಾ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ. ನಿತ್ಯ ಇಂತಹ ಆಹಾರಗಳನ್ನು ಸೇವಿಸುವ ಬದಲಿಗೆ, ಮನೆಯಲ್ಲಿ ಕೆಲವು ಸುಲಭವಾಗಿ ತಯಾರಿಸಬಹುದಾದ ಉಪಹಾರವನ್ನು ತಯಾರಿಸಿ ಸೇವಿಸಿ.

ಫ್ರೆಂಚ್ ಫ್ರೈಸ್: ಫ್ರೆಂಚ್ ಫ್ರೈಸ್ ಎಂದರೆ ಬಹುತೇಕ ಜನರಿಗೆ ಪಂಚ ಪ್ರಾಣ. ಅದರಲ್ಲೂ ಮಕ್ಕಳಿಗೆ ಫ್ರೆಂಚ್ ಫ್ರೈಸ್ ಇದ್ದರೆ ಊಟವೇ ಬೇಡ. ಆದರೆ, ಟ್ರಾನ್ಸ್ ಫ್ಯಾಟ್ ನಲ್ಲಿ ಸಮೃದ್ಧವಾಗಿರುವ ಈ ಜಂಕ್ ಫುಡ್ ಅನ್ನು ನಿತ್ಯ ಸೇವಿಸುವುದರಿಂದ ಆರೋಗ್ಯಕ್ಕೆ ದೊಡ್ಡ ಹಾನಿ ಆಗಬಹುದು.

ಸಂಸ್ಕರಿಸಿದ ಮಾಂಸ: ಬದಲಾದ ಜೀವನಶೈಲಿಯಲ್ಲಿ ಯಾರಿಗೂ ಸಮಯವೂ ಇರುವುದಿಲ್ಲ, ಸಂಯಮವೂ ಇರುವುದಿಲ್ಲ. ಹಾಗಾಗಿ ಮಾರುಕಟ್ಟೆಗೆ ಹೋಗಿ ತಾಜಾ ಮಾಂಸ ತರುವ ಬದಲು ಬಹುತೇಕ ಜನರು ಸಂಸ್ಕರಿತ ಮಾಂಸವನ್ನು ತುಂಬಾ ಇಷ್ಟಪಡುತ್ತಿದ್ದಾರೆ. ಆದರೆ, ಹೆಚ್ಚಾಗಿ ಇದನ್ನು ತಿನ್ನುವುದರಿಂದ ಅಧಿಕ ರಕ್ತದೊತ್ತಡದಂತಹ ಅನೇಕ ಗಂಭೀರ ಸಮಸ್ಯೆಗಳು ಉಂಟಾಗಬಹುದು.

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link