EPFO Latest News: ದೇಶದ 6 ಕೋಟಿ ಚಂದಾದಾರರಿಗೆ EPFO ನೀಡಲಿದೆಯೇ ಶಾಕ್ ! ಮಾ.4 ರಂದು ನಿರ್ಧಾರ
1. Latest News On EPFO Interest Rates - ಮಾರುಕಟ್ಟೆಯಲ್ಲಿನ ಪರಿಸ್ಥಿತಿ ಸರಿಯಾಗಿಲ್ಲ - ಬಡ್ಡಿ ಪಾವತಿಸುವ ಕುರಿತು ಇತ್ತೀಚೆಗಷ್ಟೇ ಹೇಳಿಕೆ ನೀಡಿದ್ದ ಸಘಟನೆ, 2021 ರ ಮಾರ್ಚ್ 31 ರ ಅಂತ್ಯದ ವೇಳೆಗೆ ಚಂದಾದಾರರಿಗೆ ಎರಡು ಕಂತುಗಳಲ್ಲಿ ಶೇ .8.50 ರಷ್ಟು ಬಡ್ಡಿದರವನ್ನು ನೀಡಲಾಗುವುದು ಎಂದು ಹೇಳಿತ್ತು. ಚಂದಾದಾರರಿಗೆ ಮೊದಲ ಕಂತಿನಲ್ಲಿ ಶೇ 8.15 ರಷ್ಟು ಬಡ್ಡಿ ಮತ್ತು ಎರಡನೇ ಕಂತಿನಲ್ಲಿ ಶೇ 0.35 ರಷ್ಟು ಬಡ್ಡಿ ನೀಡಲಾಗುವುದು ಎಂದು ತಿಳಿಸಿತ್ತು. ಶೇ. 8.15ರಷ್ಟು ಡೆಟ್ ಇನ್ಕಮ್ ಮತ್ತು ಉಳಿದ ಶೇ.0.35 ರಷ್ಟನ್ನು ಇಟಿಎಫ್ ಮಾರಾಟ ಪ್ರಕ್ರಿಯೆಯ ಮೂಲಕ ಒಟ್ಟು ಶೇ .8.50 ರಷ್ಟು ಬಡ್ಡಿಯನ್ನು ನೀಡಲಾಗುವುದು ಎಂದು ಇಪಿಎಫ್‌ಒ ತಿಳಿಸಿತ್ತು. 2019-20ರ ಹಣಕಾಸು ವರ್ಷದ ಬಡ್ಡಿದರಗಳಲ್ಲಿ ಯಾವುದೇ ಕಡಿತವಾಗುವುದಿಲ್ಲ, ಆದರೆ ಪ್ರಸ್ತುತ ಪರಿಸ್ಥಿತಿಯಲ್ಲಿ ಅದನ್ನು ಎರಡು ಕಂತುಗಳಲ್ಲಿ ಮರುಪಾವತಿ ಮಾಡಲಾಗುವುದು ಎಂದು ಇಪಿಎಫ್‌ಒ ಮಂಡಳಿಯ ಸದಸ್ಯ ಬೃಜೇಶ್ ಉಪಾಧ್ಯಾಯ ಹೇಳಿದ್ದಾರೆ. ಮಾರುಕಟ್ಟೆಯಲ್ಲಿ ಪರಿಸ್ಥಿತಿ ಸರಿಯಾಗಿಲ್ಲದ ಈ ಸಮಯದಲ್ಲಿ ಕೆಲವು ಹೂಡಿಕೆಗಳನ್ನು ಹಿಂಪಡೆಯಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.
2. Latest News On EPFO Interest Rates - EPFO ಬಡ್ಡಿ ದರ ಇಳಿಕೆ ಯಾಕೆ? - ಈ ಕುರಿತು ಹೇಳಿಕೆ ನೀಡಿರುವ EPFO ಟ್ರಸ್ಟೀ ಸದಸ್ಯರಾಗಿರುವ ಕೆ. ಇ. ರಘುನಾಥನ್, ಶ್ರೀನಗರ್ ನಲ್ಲಿ ಮಾರ್ಚ್ 4 ರಂದು ನಡೆಸಲು ಉದ್ದೇಶಿಸಲಾಗಿರುವ ಈ ಸಭೆಯ ಕುರಿತು ತಮಗೆ ಈಗಾಗಲೇ ಸೂಚನೆ ಬಂದಿದೆ, ಹಾಗೂ ಶೀಘ್ರದಲ್ಲಿಯೇ ಈ ಸಭೆಯ ಅಜೆಂಡಾ ಕೂಡ ಬರಲಿದೆ. ಆದರೆ, ಸಭೆಯ ಕುರಿತಾಗಿ ಬಂದಿರುವ ಇ-ಮೇಲ್ ನಲ್ಲಿ ಬಡ್ಡಿದರದ ಚರ್ಚೆಯ ಕುರಿತು ಯಾವುದೇ ಉಲ್ಲೇಖವಿಲ್ಲ ಎಂದು ಅವರು ಹೇಳಿದ್ದಾರೆ. ಏತನ್ಮಧ್ಯೆ ಕೇಂದ್ರ ಭವಿಷ್ಯನಿಧಿ ಸಂಘಟನೆ ಆರ್ಥಿಕ ವರ್ಷ 2020-21ಕ್ಕಾಗಿ ನೌಕರರ ಭವಿಷ್ಯನಿಧಿ ಮೇಲಿನ ಬಡ್ಡಿ ದರ ಇಳಿಕೆ ಮಾಡುವ ಸಾಧ್ಯತೆ ಇದೆ ಎಂದು ಅಂದಾಜು ವ್ಯಕ್ತಪಡಿಸಲಾಗುತ್ತಿದೆ.
3. Latest News On EPFO Interest Rates - 2020ರಲ್ಲಿ 7 ವರ್ಷಗಳಲ್ಲಿಯೇ ಅತ್ಯಂತ ಕಡಿಮೆ ಬಡ್ಡಿ ನೀಡಲಾಗಿತ್ತು - ವರ್ಷ 2019-20 ರಲ್ಲಿ ಪ್ರಾವಿಡೆಂಟ್ ಫಂಡ್ ಮೇಲಿನ ಬಡ್ಡಿದರವನ್ನು ಶೇ.8.5 ರಷ್ಟು ನಿಗದಿಪಡಿಸಲಾಗಿತ್ತು. ಕಳೆದ 7 ವರ್ಷಗಳಲ್ಲೇ ಇದು ಅತ್ಯಂತ ಕಡಿಮೆ ಬಡ್ಡಿದರ ಇದಾಗಿದೆ. ಈ ಮೊದಲು 2012-13ರಲ್ಲಿ ಶೇ.8.5 ರಷ್ಟು ಬಡ್ಡಿದರ ನಿಗದಿಪಡಿಸಲಾಗಿತ್ತು. ಚಂದಾದಾರರು 2018-19ರ ಆರ್ಥಿಕ ವರ್ಷದಲ್ಲಿ ಪಿಎಫ್ ಠೇವಣಿಗಳ ಮೇಲೆ ಶೇ 8.65 ರಷ್ಟು ಬಡ್ಡಿ ಪಡೆದಿದ್ದರು. ಇಪಿಎಫ್‌ಒ 2016-17ನೇ ಸಾಲಿನ ಪಿಎಫ್ ಠೇವಣಿಗಳ ಮೇಲೆ ಶೇ 8.65, 2017-18ರಲ್ಲಿ ಶೇ 8.55 ಮತ್ತು 2015-16ರಲ್ಲಿ ಶೇ 8.8 ರಷ್ಟುಬಡ್ಡಿಯನ್ನು ಪಡೆದಿದ್ದರು. ಇದೇ ವೇಳೆ 2013-14ರಲ್ಲಿ ಪಿಎಫ್ ಠೇವಣಿಗಳ ಮೇಲೆ ಶೇಕಡಾ 8.75 ರಷ್ಟು ಬಡ್ಡಿಯನ್ನು ನೀಡಲಾಗಿತ್ತು ಮತ್ತು ಇದು 2012-13ರ ಆರ್ಥಿಕ ವರ್ಷದ ಶೇ 8.5 ಬದ್ದಿದರಕ್ಕಿಂತ ಹೆಚ್ಚಾಗಿದೆ.