ವಿನಾಶಕಾರಿ ಗುರು-ಚಾಂಡಾಲ ಯೋಗ ಅಂತ್ಯ, ಗುರು ದೆಸೆಯಿಂದ ಈ ಜನರ ಜೀವನದಲ್ಲಿ ಹಣವೋ ಹಣ ಹರಿದುಬರಲಿದೆ!
End Of Guru Chandal Yog 2023: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಇಂದು ಅಂದರೆ ಅಕ್ಟೋಬರ್ 30 ರಂದು ರಾಹು ಮೇಷ ರಾಶಿಯನ್ನು ತೊರೆದು ಹಿಮ್ಮುಖ ಚಲನೆಯಲ್ಲಿ ಮೀನ ರಾಶಿಗೆ ಪ್ರವೇಶಿಸಿದ್ದಾನೆ. ಇದರಿಂದ 3 ರಾಶಿಗಳ ಜನರ ಜೀವನದಲ್ಲಿ ಒಳ್ಳೆಯ ದಿನಗಳು ಆರಂಭಗೊಂಡು, ಅವರಿಗೆ ಅಪಾರ ಧನಸಂಪತ್ತು ಪ್ರಾಪ್ತಿಯಾಗಲಿದೆ. Spiritual News In Kannada
ಮೇಷ ರಾಶಿ: ಈ ಗುರು ಚಾಂಡಾಲ ಯೋಗ ನಿಮ್ಮ ಜಾತಕದ ಲಗ್ನ ಭಾವದಲ್ಲಿ ಏರ್ಪಟ್ಟಿತ್ತು. ಇದರಿಂದ ನಿಮಗೆ ವೈವಾಹಿಕ ಜೀವನದಲ್ಲಿ ಒತ್ತಡದ ಪರಿಸ್ಥಿತಿ ಎದುರಾಗಿತ್ತು. ಈಗ ಅದರಿಂದ ನಿಮಗೆ ಮುಕ್ತಿ ಸಿಗಲಿದೆ. ನಿಮಗೆ ನಿಮ್ಮ ಬಾಳಸಂಗಾತಿಯ ಸಂಪೂರ್ಣ ಬೆಂಬಲ ಪ್ರಾಪ್ತಿಯಾಗಲಿದೆ. ಪಾರ್ಟ್ನರ್ಶಿಪ್ ವ್ಯವಹಾರದಲ್ಲಿ ನಿಮಗೆ ಲಾಭ ಸಿಗಲಿದೆ. ವೃತ್ತಿ ಹಾಗೂ ವ್ಯಾಪಾರ ಜೀವನದಲ್ಲಿ ಈ ಯೋಗ ಅತ್ಯದ ಪ್ರಭಾವವನ್ನು ನೀವು ಗಮನಿಸುವಿರಿ. ಆರೋಗ್ಯ ಉತ್ತಮವಾಗಿರಲಿದೆ ಮತ್ತು ಆರ್ಥಿಕ ವಿಷಯಗಳಲ್ಲಿ ನಿಮಗೆ ಲಾಭದ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ. ಅವಿವಾಹಿತರಿಗೆ ವಿವಾಹದ ಪ್ರಸ್ತಾಪ ಸಿಗುವ ಸಾಧ್ಯತೆ ಇದೆ. (Spiritual News In Kannada)
ಮಿಥುನ ರಾಶಿ: ನಿಮ್ಮ ಜಾತಕದ ಆದಾಯ ಭಾವದಲ್ಲಿ ಈ ಯೋಗ ರೂಪುಗೊಂಡಿತ್ತು. ಹೀಗಾಗಿ ನಿಮ್ಮ ಆದಾಯ ಕುಂಠಿತಗೊಂಡಿತ್ತು. ಹೀಗಾಗಿ ಈ ಯೋಗ ಅಂತ್ಯದ ಹಿನ್ನೆಲೆ ನಿಮ್ಮ ಆದಾಯ ಇದೀಗ ಮತ್ತೆ ಭಾರಿ ಹೆಚ್ಚಾಗಲಿದೆ. ಆದಾಯದ ಹೊಸ ಮೂಲಗಳು ಕೂಡ ತೆರೆದುಕೊಳ್ಳಲಿವೆ. ವೃತ್ತಿ ಜೀವನದಲ್ಲಿ ಹಲವು ಹೊಸ ಅವಕಾಶಗಳು ಒದಗಿ ಬರಲಿವೆ. ಕಾರ್ಯಸ್ಥಳದಲ್ಲಿ ನಿಮಗೆ ಮಹತ್ವದ ಜವಾಬ್ದಾರಿ ಸಿಗುವ ಸಾಧ್ಯತೆ ಇದೆ. ಮಕ್ಕಳಿಗೆ ಸಂಬಂಧಿಸಿದ ಶುಭ ಸಮಾಚಾರಗಳು ಕೂಡ ಪ್ರಾಪ್ತಿಯಾಗಲಿವೆ.
ಕನ್ಯಾ ರಾಶಿ: ಈ ಯೋಗ ನಿಮ್ಮ ಜಾತಕದ ಅಷ್ಟಮ ಭಾವದ ಮೇಲೆ ನಿರ್ಮಾಣಗೊಂಡಿತ್ತು. ಇದರಿಂದ ನಿಮ್ಮ ಆರೋಗ್ಯ ಕುಂಠಿತಗೊಂಡಿತ್ತು. ಈಗ ಈ ಯೋಗ ಅಂತ್ಯದ ಲಾಭ ನಿಮಗೆ ಸಿಗಲಿದೆ ಮತ್ತು ಆರೋಗ್ಯ ಸುಧಾರಿಸಲಿದೆ. ಈ ಯೋಗ ಅಂತ್ಯದಿಂದ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗಲಿದೆ ಮತ್ತು ಆಕಸ್ಮಿಕವಾಗಿ ಕೆಲ ಪ್ರಕರಣಗಳಲ್ಲಿ ನಿಮಗೆ ಅಪ್ರತ್ಯಕ್ಷ ರೂಪದಲ್ಲಿ ಲಾಭ ಸಿಗಲಿದೆ. ಹಣಕಾಸಿಗೆ ಸಂಬಂಧಿಸಿದ ವಿಷಯಗಳಲ್ಲಿ ನಿಮಗೆ ಭರಪೂರ ಲಾಭ ಸಿಗಳಿದ್ದು, ಆರ್ಥಿಕ ಸ್ಥಿತಿ ಸುಧಾರಿಸಲಿದೆ. ಬಿಸ್ನೆಸ್ ನಲ್ಲಿ ಉತ್ತಮ ಆದಾಯ ನಿಮ್ಮದಾಗಲಿದೆ. ನಿಮ್ಮ ಆಸೆಗಳು ಈಡೇರಲಿವೆ. ಹೊಸ ಕೆಲಸ ಆರಂಭಿಸಲು ಈ ಸಮಯ ನಿಮ್ಮ ಪಾಲಿಗೆ ಒಂದು ವರದಾನ ಎಂದರೆ ತಪ್ಪಾಗಲಾರದು. ಸಮಾಜದಲ್ಲಿ ಘನತೆ-ಗೌರವ ಹಾಗೂ ಪ್ರತಿಷ್ಠೆ ಹೆಚ್ಚಾಗಲಿದೆ.
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)