Salary Hike News :ಸರ್ಕಾರಿ ನೌಕರರ ನಿರೀಕ್ಷೆ ಅಂತ್ಯ! ವೇತನ ಹೆಚ್ಚಳದ ಬಗ್ಗೆ ಹೊರ ಬಿದ್ದಿದೆ ಬಿಗ್ ಅಪ್ಡೇಟ್
ಕೇಂದ್ರ ನೌಕರರು ಮತ್ತು ಪಿಂಚಣಿದಾರರಿಗೆ ಮೋದಿ ಸರ್ಕಾರ ಬಹು ದೊಡ್ಡ ಉಡುಗೊರೆಯನ್ನು ನೀಡಬಹುದು.ಈ ಬಾರಿ ತುಟ್ಟಿಭತ್ಯೆಯಲ್ಲಿ ಶೇ.4ರಷ್ಟು ಹೆಚ್ಚಳವಾಗುವ ನಿರೀಕ್ಷೆ ಇದೆ. ಹೀಗಾದಾಗ ತುಟ್ಟಿಭತ್ಯೆ ಶೇ ೫೦ಕ್ಕೆ ಏರಲಿದೆ.
ಕೇಂದ್ರ ಸರ್ಕಾರವು ಪ್ರತಿ ವರ್ಷ ಎರಡು ಬಾರಿ ಡಿಎಯನ್ನು ಹೆಚ್ಚಿಸುತ್ತದೆ. ಈ ಹೆಚ್ಚಳವನ್ನು ಪ್ರತಿ ಅರ್ಧ ವರ್ಷಕ್ಕೊಮ್ಮೆ ಮಾಡಲಾಗುತ್ತದೆ.ಈ ಬಾರಿಯ ಡಿಎ ಹೆಚ್ಚಳ ಮಾರ್ಚ್ ನಲ್ಲಿ ಘೋಷಣೆಯಾಗುವ ಸಾಧ್ಯತೆ ಇದೆ.
ಸರ್ಕಾರವು ನೌಕರರ ತುಟ್ಟಿಭತ್ಯೆಯನ್ನು ಸುಮಾರು 4 ಪ್ರತಿಶತದಷ್ಟು ಹೆಚ್ಚಿಸಬಹುದು. ಇದರ ಹೊರತಾಗಿ, ಬಹು ಕಾಲದ ನಿರೀಕ್ಷೆಯ ನಂತರ ಫಿಟ್‌ಮೆಂಟ್ ಅಂಶದಲ್ಲಿಯೂ ಹೆಚ್ಚಳ ಮಾಡಲಿದೆ ಎಂದು ಮೂಲಗಳು ತಿಳಿಸಿವೆ. ಹೀಗಾದಾಗ ನೌಕರರ ವೇತನದಲ್ಲಿ ಭಾರೀ ಹೆಚ್ಚಳವಾಗುವುದು.
ಸರ್ಕಾರವು ಕೇಂದ್ರ ನೌಕರರ ಫಿಟ್‌ಮೆಂಟ್ ಅಂಶವನ್ನು ಕೂಡಾ ಹೆಚ್ಚಿಸಲಿದೆ ಎಂದು ಹೇಳಲಾಗುತ್ತಿದೆ. ಕೇಂದ್ರ ಉದ್ಯೋಗಿಗಳ ಫಿಟ್‌ಮೆಂಟ್ ಅಂಶವನ್ನು 2.60 ಶೇ.ದಿಂದ 3 ಶೇ ಕ್ಕೆ ಏರಿಕೆಯಾಗಲಿದೆ ಎಂದು ಹೇಳಲಾಗುತ್ತಿದೆ.
ಫಿಟ್‌ಮೆಂಟ್ ಅಂಶದಲ್ಲಿ ಹೆಚ್ಚಳವಾದರೆ ಕನಿಷ್ಠ ಮೂಲ ವೇತನವೂ ಗಣನೀಯವಾಗಿ ಹೆಚ್ಚಾಗಲಿದೆ.ಆದರೆ, ಈ ಬಗ್ಗೆ ಸರ್ಕಾರ ಇನ್ನೂ ಅಧಿಕೃತವಾಗಿ ಏನನ್ನೂ ಹೇಳಿಲ್ಲ. ಈ ಬಗ್ಗೆ ಗಂಭೀರವಾಗಿ ಚರ್ಚೆ ನಡೆಯುತ್ತಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.