Endangered Sea Mammal: ಜಗತ್ತಿನಲ್ಲಿ ಈ ಜಾತಿಯ ಮೀನು ಉಳಿದಿರೋದು ಕೇವಲ 10 ಮಾತ್ರ!

Sat, 14 May 2022-4:32 pm,

ಅಳಿವಿನಂಚಿನಲ್ಲಿರುವ ವಕ್ವಿಟಾ ಪೋರ್ಪೊಯಿಸ್ ಅನ್ನು ಭಾರತದಲ್ಲಿ ಸೂರ್ಯ ಎಂದು ಕರೆಯಲಾಗುತ್ತದೆ. ವಿಜ್ಞಾನಿಗಳ ಪ್ರಕಾರ, ಅಳಿವಿನ ಅಂಚಿನಲ್ಲಿರುವ ಈ ಜೀವಿಯನ್ನು ಉಳಿಸಬಹುದಂತೆ. ಈ ಜೀವಿಗಳ ಬಣ್ಣ ಬೂದು ಮತ್ತು ಬೆಳ್ಳಿ. ಇವು 5 ಅಡಿ ಉದ್ದ ಮತ್ತು 54 ಕೆಜಿ ತೂಕವಿರುತ್ತವೆ. ಅವುಗಳ ದೇಹದ ಕೆಳಭಾಗವು ಬಿಳಿ ಮತ್ತು ಮೇಲಿನ ಭಾಗ ಬೂದು ಬಣ್ಣದಿಂದ ಕೂಡಿರುತ್ತದೆ. ಜೊತೆಗೆ ಈ ಜೀವಿಯ ಕಣ್ಣಿನ ಸುತ್ತ ಕಾಜಲ್‌ ಲೇಪಿಸಿದಂತೆ ನೈಸರ್ಗಿಕವಾದ ಬಣ್ಣ ಕಂಡುಬರುತ್ತದೆ. 

ಈ ಅಳಿವಿನಂಚಿನಲ್ಲಿರುವ ಪ್ರಭೇದಗಳು ಮೆಕ್ಸಿಕೋದ ಕ್ಯಾಲಿಫೋರ್ನಿಯಾ ಕೊಲ್ಲಿಯಲ್ಲಿ ಮಾತ್ರ ಕಂಡುಬರುತ್ತವೆ. ಇವುಗಳ ಅಳಿವಿಗೆ ದೊಡ್ಡ ಕಾರಣವೆಂದರೆ ಟೊಟೊಬಾ ಮೀನುಗಳ ಬೇಟೆ. ವಾಸ್ತವವಾಗಿ ವಿಸಿಟಾ ಪೊರ್ಪೊಯಿಸ್‌ಗಳು ಟೊಟೊಬಾ ಮೀನುಗಳನ್ನು ತಿನ್ನುತ್ತವೆ. ವಿಕಿಟಾ ಪೋರ್ಪೊಯಿಸ್ ಬಗ್ಗೆಯೂ ಅಧ್ಯಯನ ನಡೆಸಲಾಗಿದೆ.  

ವಿಸಿಟಾ ಪೋರ್ಪೊಯಿಸ್ ಅನ್ನು ಉಳಿಸಲು ಸಾಧ್ಯ ಎಂದು ಈ ಅಧ್ಯಯನದಲ್ಲಿ ಹೇಳಲಾಗಿದೆ. ಆದರೆ ಇದಕ್ಕಾಗಿ, ಭಾರವಾದ ಬಲೆಯಾಗಿರುವ ಗಿಲ್ನೆಟ್‌ಗಳನ್ನ ಬಳಕೆ ಮಾಡದಿರಬೇಕು. ಗಿಲ್ನೆಟ್‌ ಬಲೆಗಳನ್ನು ದೊಡ್ಡ ಮೀನುಗಳ ಬೇಟೆಗೆ ಬಳಸಲಾಗುತ್ತದೆ. 

 ‘ಸೈನ್ಸ್ ಜರ್ನಲ್’ನಲ್ಲಿ ಪ್ರಕಟವಾದ ವರದಿಯನ್ನು ಆಧರಿಸಿ, ಈ ಜೀವಿಗಳಲ್ಲಿ ಕಡಿಮೆ ಆನುವಂಶಿಕ ವ್ಯತ್ಯಾಸವಿದೆ ಎಂದು ಡಾ.ಜಾಕ್ವೆಲಿನ್ ಹೇಳುತ್ತಾರೆ. ಈ ಜೀವಿಯನ್ನು ಉಳಿಸುವುದು ಸುಲಭವಲ್ಲ ಆದರೆ ಅಸಾಧ್ಯವೂ ಅಲ್ಲ. ಅದನ್ನು ಉಳಿಸುವಲ್ಲಿ, ಮೆಕ್ಸಿಕೋ ಸರ್ಕಾರದ ರಾಜತಾಂತ್ರಿಕರು, ಸ್ಥಳೀಯ ಜನರು, ಪರಿಸರವಾದಿಗಳ ಕಾಳಜಿ ಅಗತ್ಯವಾಗಿರುತ್ತದೆ

ಡಾ.ಜಾಕ್ವೆಲಿನ್ ಪ್ರಕಾರ, ಈ ಜಾತಿಯ ರಕ್ಷಣೆಗೆ ಅವಕಾಶ ನೀಡಿದರೆ ಮುಂದಿನ 50 ವರ್ಷಗಳಲ್ಲಿ ವಿಸಿಟಾ ಮೀನುಗಳ ಸಂಖ್ಯೆಯನ್ನು ಹೆಚ್ಚಿಸಬಹುದು. ಅದರ ಡಿಎನ್ಎ ಮೂಲಕ ಜೀವಗಳನ್ನು ಮೌಲ್ಯಮಾಪನ ಮಾಡಲಾಗಿದೆ. ಪರಿಸರವನ್ನು ಅವುಗಳಿಗೆ ಬೇಕಾದ ರೀತಿಯಲ್ಲಿ ಅನುಕೂಲಕರವಾಗಿ ಮಾಡಿದರೆ, ಅದರ ಸಂಖ್ಯೆಯನ್ನು ವಿನಾಶದಿಂದ ಉಳಿಸಬಹುದು ಎಂದು ಹೇಳಿದ್ದಾರೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link