Best Morning Teas: ಉತ್ತಮ ಆರೋಗ್ಯಕ್ಕಾಗಿ ಮುಂಜಾನೆ ಸವಿಯಿರಿ ಈ 7 ಬಗೆಯ ಚಹಾ
ಸಾಮಾನ್ಯವಾಗಿ ಬೆಳಿಗ್ಗೆ ಎದ್ದ ಕೂಡಲೇ ಟೀ/ಕಾಫಿ ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ಹೇಳಲಾಗುತ್ತದೆ. ಹಾಲು, ಸಕ್ಕರೆ, ಟೀ ಸೊಪ್ಪು ಬೆರೆಸಿ ಮಾಡುವ ಚಹಾವನ್ನು ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ ಗ್ಯಾಸ್ಟ್ರಿಕ್ ಸೇರಿದಂತೆ ಹಲವು ಸಮಸ್ಯೆಗಳು ಬಾಧಿಸುತ್ತದೆ. ಆದರೆ, ನಿತ್ಯ ಬೆಳಿಗ್ಗೆ ಆರೋಗ್ಯಕರ ಚಹಾದೊಂದಿಗೆ ದಿನ ಆರಂಭಿಸಿದರೆ ಮನಸ್ಸಿಗೆ ಉಲ್ಲಾಸದ ಜೊತೆಗೆ ಫಿಟ್ ಆಗಿಯೂ ಇರಬಹುದು. ಅಂತಹ ಏಳು ಬಗೆಯ ಆರೋಗ್ಯಕರ ಚಹಾಗಳ ಬಗ್ಗೆ ಈ ಫೋಟೋ ಗ್ಯಾಲರಿಯಲ್ಲಿ ತಿಳಿಯೋಣ...
ಲವಂಗದಿಂದ ತಯಾರಿಸಿದ ಚಹಾವನ್ನು ಮುಂಜಾನೆ ಖಲೈ ಹೊಟ್ಟೆಯಲ್ಲಿ ಕುಡಿಯುವುದರಿಂದ ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಜೊತೆಗೆ ಹೊಟ್ಟೆಗೆ ಸಂಬಂಧಿಸಿದ ಕಾಯಿಲೆಗಳಿಂದಲೂ ರಕ್ಷಣೆ ನೀಡುತ್ತದೆ.
ನಿತ್ಯ ಬೆಳಿಗ್ಗೆ ಶುಂಠಿ ಟೀ ಕುಡಿಯುವುದರಿಂದ ಇದು ದೇಹಕ್ಕೆ ಉಲ್ಲಾಸವನ್ನು ನೀಡುವುದರ ಜೊತೆಗೆ ಸಾಂಕ್ರಾಮಿಕ ಸಮಸ್ಯೆಗಳಿಂದ ದೂರ ಉಳಿಯುವಂತೆ ಮಾಡುತ್ತದೆ.
ತೂಕ ಇಳಿಕೆಗೆ ಪರಿಣಾಮಕಾರಿ ಚಹಾ ಎಂದು ಪರಿಗಣಿಸಲಾಗಿರುವ ಗ್ರೀನ್ ಟೀ ಅನ್ನು ಬೆಳಿಗ್ಗೆ ಹೊತ್ತು ಕುಡಿಯುವುದರಿಂದ ಟೈಪ್ 2 ಮಧುಮೇಹದ ಅಪಾಯವನ್ನು ಕಡಿಮೆ ಮಾಡಬಹುದು. ಮಾತ್ರವಲ್ಲ, ಹೃದಯದ ಆರೋಗ್ಯವನ್ನು ಉತ್ತೇಜಿಸಲು ಇದು ಸಹಕಾರಿ ಆಗಿದೆ.
ನಿಂಬೆ ಹುಲ್ಲಿನಿಂದ ತಯಾರಿಸಿದ ಲೆಮನ್ ಗ್ರಾಸ್ ಟೀ ಅನ್ನು ನಿತ್ಯ ಸೇವಿಸುವುದರಿಂದ ಜೀರ್ಣಕ್ರಿಯೆ ಉತ್ತಮಗೊಳ್ಳುತ್ತದೆ. ಅಷ್ಟೇ ಅಲ್ಲ, ಈ ಟೀ ತೂಕ ಇಳಿಕೆಗೂ ಕೂಡ ಉತ್ತಮ ಕೊಡುಗೆಯನ್ನು ನೀಡುತ್ತದೆ.
ನಿತ್ಯ ಬೆಳಿಗ್ಗೆ ರೋಸ್ಮರಿ ಚಹಾ ಕುಡಿಯುವುದರಿಂದ ಉಸಿರಾಟದ ಸಮಸ್ಯೆ ಇರುವವರು ಹೆಚ್ಚು ಲಾಭ ಪಡೆಯುತ್ತಾರೆ. ಅದರಲ್ಲೂ ಅಸ್ತಮಾ ರೋಗಿಗಳಿಗೆ ಈ ಚಹಾ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ.
ದಾಲ್ಚಿನ್ನಿಯಿಂದ ತಯಾರಿಸಿದ ಚಹಾ ಸೇವಿಸುವುದರಿಂದ ಇದು ಮಧುಮೇಹಿಗಳಿಗೆ ತುಂಬಾ ಪ್ರಯೋಜನಕಾರಿ ಆಗಿದೆ.
ಹರ್ಸಿಂಗಾರ್/ಹರಸಿಂಗಾರ್ ಟೀ ಅನ್ನು ನಿತ್ಯ ಕುಡಿಯುವುದರಿಂದ ಇದರಲ್ಲಿರುವ ಆ್ಯಂಟಿ ಆಕ್ಸಿಡೆಂಟ್‌ಗಳು ನಮ್ಮನ್ನು ಹಲವು ಕಾಯಿಲೆಗಳಿಂದ ದೂರ ಉಳಿಯುವಂತೆ ಮಾಡುತ್ತದೆ. ಮಾತ್ರವಲ್ಲ, ಹೈ ಬಿಪಿಯನ್ನು ನಿಯಂತ್ರಿಸುವಲ್ಲಿಯೂ ಪ್ರಯೋಜನಕಾರಿ ಆಗಿದೆ.
ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.