PF ಖಾತೆದಾರರಿಗೆ ಉಚಿತವಾಗಿ ಸಿಗಲಿದೆ 7 ಲಕ್ಷ ರೂಪಾಯಿಗಳ ವಿಮೆ

Sun, 30 May 2021-2:52 pm,

ಮೊದಲ ವಿಮಾ ಮೊತ್ತ  6 ಲಕ್ಷ ರೂಗಳಾಗಿತ್ತು. ಕಾರ್ಮಿಕ ಸಚಿವ ಸಂತೋಷ್ ಗಂಗ್ವಾರ್ ನೇತೃತ್ವದ ಇಪಿಎಫ್‌ಒನ ಕೇಂದ್ರೀಯ ಟ್ರಸ್ಟಿಗಳ ಮಂಡಳಿ (CBT) 2020 ರ ಸೆಪ್ಟೆಂಬರ್ 9 ರಂದು   ಈ ಮೊತ್ತವನ್ನು 7 ಲಕ್ಷ ರೂ.ಗೆ ಹೆಚ್ಚಿಸಿದೆ.   

 ನೌಕರನ ಅನಾರೋಗ್ಯ, ಅಪಘಾತ ಅಥವಾ ಸ್ವಾಭಾವಿಕ ಸಾವು ಸಂಭವಿಸಿದರೆ, ನೌಕರನ ಪರವಾಗಿ ನಾಮಿನಿಗೆ ಈ ವಿಮೆಯ ಹಕ್ಕು ನೀಡಲಾಗುತ್ತದೆ. ಅಂದರೆ, ಕೋವಿಡ್ -19 ಕಾರಣದಿಂದಾಗಿ ಒಬ್ಬ ಉದ್ಯೋಗಿ ಮೃತಪಟ್ಟರೆ,  EDLI  ಅಡಿಯಲ್ಲಿ ಮೃತ ನೌಕರನ ಕುಟುಂಬಕ್ಕೆ ವಿಮೆಯ 7 ಲಕ್ಷ ರೂಗಳನ್ನು ನೀಡಲಾಗುವುದು. ವಿಮೆ ಪಡೆಯಲು ಇಪಿಎಫ್‌ಒ ಯಾವುದೇ ಗಡುವನ್ನು ನಿಗದಿಪಡಿಸಿಲ್ಲ.

 ಈ ಮೊತ್ತವನ್ನು ಪಿಎಫ್ ಖಾತೆದಾರರ ಸಾವಿನ ನಂತರ ನಾಮಿನಿಗೆ ನೀಡಲಾಗುತ್ತದೆ. ಒಂದು ವೇಳೆ , ನಾಮಿನಿ ಹಾಕಿರದಿದ್ದಲ್ಲಿ, ಮೃತ ನೌಕರನ ಸಂಗಾತಿ, ಅಥವಾ ಮಕ್ಕಳಿಗೆ ನೀಡಲಾಗುತ್ತದೆ. 

ನೌಕರನು ಈ ವಿಮೆಗೆ ಯಾವುದೇ ಮೊತ್ತವನ್ನು ಪಾವತಿಸಬೇಕಾಗಿಲ್ಲ. ಅಂದರೆ, ಈ ವಿಮಾ ಕವರ್ ನೌಕರನಿಗೆ ಉಚಿತವಾಗಿ ಸಿಗಲಿದೆ. ಇದು ಪಿಎಫ್ ಖಾತೆಯೊಂದಿಗೆ ಲಿಂಕ್ ಆಗಿರುತ್ತದೆ. ಕೋವಿಡ್ -19 ರ ಕಾರಣದಿಂದಾಗಿ ಸಾವು ಸಂಭವಿಸಿದರೆ, ಆ ಸಂದರ್ಭದಲ್ಲಿಯೂ ವಿಮೆಯ ಲಾಭ ಸಿಗಲಿದೆ. 

ಉದ್ಯೋಗಿಯ ಸಾವಿನ ನಂತರ, ನಾಮಿನಿಯು ಹಕ್ಕಿಗಾಗಿ ಫಾರ್ಮ್ -5 ಐಎಫ್ ಅನ್ನು ಸಲ್ಲಿಸಬೇಕಾಗುತ್ತದೆ. ಅದನ್ನು ಉದ್ಯೋಗದಾತ ಪರಿಶೀಲಿಸುತ್ತಾನೆ. ಉದ್ಯೋಗದಾತ ಲಭ್ಯವಿಲ್ಲದಿದ್ದರೆ, ಗೆಜೆಟೆಡ್ ಅಧಿಕಾರಿ, ಮ್ಯಾಜಿಸ್ಟ್ರೇಟ್, ಗ್ರಾಮ ಪಂಚಾಯತ್ ಅಧ್ಯಕ್ಷ ಮತ್ತು ಪುರಸಭೆ ಅಥವಾ ಜಿಲ್ಲಾ ಸ್ಥಳೀಯ ಮಂಡಳಿ ಪರಿಶೀಲಿಸುತ್ತದೆ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link