EPFO ಗ್ರಾಹಕರು ಈ ರೀತಿಯಾಗಿ UANನಲ್ಲಿ ಮೊಬೈಲ್ ನಂಬರ್ ಬದಲಿಸಬಹುದು

Thu, 07 Jan 2021-1:35 pm,

ಹೊಸ ಸದಸ್ಯರು ಇಪಿಎಫ್‌ಒ ಸದಸ್ಯ ಪೋರ್ಟಲ್‌ನಲ್ಲಿ ಸೈನ್ ಅಪ್ ಮಾಡುವಾಗ ತಮ್ಮ ಮೊಬೈಲ್ ಸಂಖ್ಯೆಯನ್ನು ನೋಂದಾಯಿಸಿಕೊಳ್ಳಬೇಕು. ಏಕೆಂದರೆ ಪಿಎಫ್‌ಗಳಿಗೆ ಸಂಬಂಧಿಸಿದ ಎಲ್ಲಾ ರೀತಿಯ  ಸಂದೇಶಗಳು ಈ ಸಂಖ್ಯೆಯಲ್ಲಿ ಬರುತ್ತವೆ.  

ಮೊದಲನೆಯದಾಗಿ ನೀವು ಯುಎಎನ್ (UAN) ಸದಸ್ಯ ಸೇವೆಯ ಪೋರ್ಟಲ್‌ಗೆ ಹೋಗಬೇಕು. ಇದರ ನಂತರ ಮುಖ್ಯ ವಿಂಡೋದ ಬಲಭಾಗದಲ್ಲಿರುವ ಆನ್‌ಲೈನ್ ಸೇವಾ ವಿಭಾಗದಲ್ಲಿ "ಯುಎಎನ್ ಸದಸ್ಯ ಇ-ಸೆವಾ" (UAN Member e-Sewa) ಹೆಸರಿನ ಲಿಂಕ್ ಕಾಣಿಸುತ್ತದೆ. ಈ ಲಿಂಕ್ ಅನ್ನು ಕ್ಲಿಕ್ ಮಾಡುವುದರಿಂದ ಹೊಸ ವಿಂಡೋ ತೆರೆಯುತ್ತದೆ.

ಇದನ್ನೂ ಓದಿ : ಹೊಸ ವರ್ಷಕ್ಕೆ EPFO ಚಂದಾದಾರರಿಗೆ 'ಭರ್ಜರಿ ಕೊಡುಗೆ' ನೀಡಿದ ಕೇಂದ್ರ ಸರ್ಕಾರ..!

ಲಾಗಿನ್ ಮಾಡಿದ ನಂತರ, ಮೆನು ವಿಭಾಗದಲ್ಲಿ ಮ್ಯಾನೇಜ್ ಬಟನ್ ಅನ್ನು ನೀವು ನೋಡುತ್ತೀರಿ. ಇದನ್ನು ಕ್ಲಿಕ್ ಮಾಡಿದ ನಂತರ ಡ್ರಾಪ್ ಡೌನ್ ಮೆನುವಿನಲ್ಲಿ ಸಂಪರ್ಕ ವಿವರಗಳ ಆಯ್ಕೆಯನ್ನು ಆರಿಸಿ.

ಇದರ ನಂತರ ಮೊಬೈಲ್ ಸಂಖ್ಯೆಯನ್ನು ಬದಲಾಯಿಸುವ ಆಯ್ಕೆಯನ್ನು ಆರಿಸಬೇಕಾಗುತ್ತದೆ. ಇದರ ನಂತರ ಹೊಸ ನವೀಕರಿಸಿದ ಮೊಬೈಲ್ ಸಂಖ್ಯೆಯನ್ನು ನಮೂದಿಸಬೇಕಾಗುತ್ತದೆ. ಬಳಿಕ ಗೆಟ್ ಆಥರೈಸೇಶನ್ ಪಿನ್ ಬಟನ್ ಕ್ಲಿಕ್ ಮಾಡಿ.

ಇದನ್ನೂ ಓದಿ : EPFO 6 ಕೋಟಿ ಚಂದಾದಾರರಿಗೆ ಮೋದಿ ಸರ್ಕಾರದ ಹೊಸ ವರ್ಷದ ಉಡುಗೊರೆ

ಬಳಿಕ ಒಟಿಪಿ ನಮೂದಿಸಿದ ನಂತರ ಬದಲಾವಣೆಗಳನ್ನು ಸೇವ್ ಮಾಡುವ ಬಟನ್ ಕ್ಲಿಕ್ ಮಾಡಿ. ಇದರ ನಂತರ ನಿಮ್ಮ ಸಂಪರ್ಕ ವಿವರಗಳನ್ನು ಯಶಸ್ವಿಯಾಗಿ ನವೀಕರಿಸಿದ ಸಂದೇಶವು ಪರದೆಯ ಮೇಲೆ ಕಾಣಿಸುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ... Android Link - https://bit.ly/3hDyh4G Apple Link - https://apple.co/3loQYe  ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

ZEENEWS TRENDING STORIES

By continuing to use the site, you agree to the use of cookies. You can find out more by Tapping this link