Mobile Addiction: ಮಕ್ಕಳು- ಪೋಷಕರ ನಡುವೆ ದೊಡ್ಡ ಕಂದಕವನ್ನೇ ಸೃಷ್ಟಿಸುತ್ತಿ ಮೊಬೈಲ್ ಫೋನ್: ಸಮೀಕ್ಷೆ

Fri, 08 Dec 2023-9:37 am,

ಇತ್ತೀಚಿನ ದಿನಗಳಲ್ಲಿ ಮೊಬೈಲ್ ಫೋನ್ ಇಲ್ಲದೆ ಜೀವನವನ್ನು ಊಹಿಸುವುದು ಕೂಡ ಅಸಾಧ್ಯ. ಆದರೆ, ಈ ಫೋನ್ ಮಕ್ಕಳು ಮತ್ತು ಹೆತ್ತವರ ನಡುವೆ ದೊಡ್ಡ ಕಂದಕವನ್ನೇ ಸೃಷ್ಟಿಸುತ್ತಿದೆ ಎಂಬ ಆಘಾತಕಾರಿ ಮಾಹಿತಿ ಸಮೀಕ್ಷೆಯಿಂದ ಬಹಿರಂಗಗೊಂಡಿದೆ. 

ಮೊಬೈಲ್ ಫೋನ್ ತಯಾರಿಕಾ ಕಂಪನಿಯಾದ Vivo, ಸೈಬರ್ ಮೀಡಿಯಾ ರಿಸರ್ಚ್ ಸಹಯೋಗದಲ್ಲಿ ಪೋಷಕರು ಮತ್ತು ಮಕ್ಕಳ ನಡುವಿನ ಸಂಬಂಧದ ಮೇಲೆ ಸೆಲ್ ಫೋನ್‌ಗಳ ಪ್ರಭಾವದ ಬಗ್ಗೆ ಸಮೀಕ್ಷೆಯನ್ನು ನಡೆಸಿದ್ದು, ಅದರ ಫಲಿತಾಂಶಗಳು ಆಘಾತಕಾರಿಯಾಗಿದೆ. ಇದರ ಪ್ರಮುಖ ಅಂಶಗಳು ಕೆಳಕಂಡಂತಿವೆ.   

ಈ ಸಮೀಕ್ಷೆಯಲ್ಲಿ ಒಳಗೊಂಡಿರುವ 90 ಪ್ರತಿಶತದಷ್ಟು ಪೋಷಕರು ತಾವು ಫೋನ್ ಇಲ್ಲದೆ ಬದುಕಲು ಸಾಧ್ಯವೇ ಇಲ್ಲ ಎಂಬುದನ್ನು ಒಪ್ಪಿಕೊಂಡಿದ್ದಾರೆ. ಇದಲ್ಲದೆ, ನಿತ್ಯ ಸರಾಸರಿ ಏಳೂವರೆ ಗಂಟೆಗಳ ಕಾಲ ಮೊಬೈಲ್ ಫೋನ್‌ನಲ್ಲಿ ಕಾಲ ಕಳೆಯುವುದಾಗಿ ಒಪ್ಪಿಕೊಂಡಿದ್ದಾರೆ. 

ಅತಿಯಾದ ಫೋನ್ ಬಳಕೆ ನಮ್ಮ ಜೀವನವನ್ನು ಯಾವ ಮಟ್ಟಿಗೆ ಆವರಿಸಿಬಿಟ್ಟಿದೆ ಎಂದರೆ 92 ರಷ್ಟು ಪೋಷಕರು ತಮ್ಮ 'ಫ್ಯಾಮಿಲಿ ಟೈಮ್' ಈಗ 'ಮೊಬೈಲ್ ಫೋನ್ ಟೈಮ್' ಆಗಿ ಬದಲಾಗಿದೆ ಎಂಬುದನ್ನು ಪೋಷಕರು ಸ್ವತಃ ತಾವೇ ಒಪ್ಪಿಕೊಂಡಿದ್ದಾರೆ ಎಂದು ಸಮೀಕ್ಷೆಯಿಂದ ತಿಳಿದುಬಂದಿದೆ. 

ಈ ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದ 90% ಪೋಷಕರು ಮೊಬೈಲ್ ಫೋನ್‌ಗಳಲ್ಲಿ ನಿರತರಾಗಿರುವ ಕಾರಣ ತಮ್ಮ ಮಕ್ಕಳೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ. 

87% ಜನರು ತಮಗೆ ಬೆಳಿಗ್ಗೆ ಕಣ್ತೆರೆದ ತಕ್ಷಣ ಮೊಬೈಲ್ ಬೇಕೇ ಬೇಕು ಎಂಬ ಮನಸ್ಥಿತಿಯ ಬಗ್ಗೆ ಒಪ್ಪಿಕೊಂಡಿದ್ದಾರೆ. 

ಮೊಬೈಲ್ ಎಷ್ಟು ನಮ್ಮೆಲ್ಲರ ಜೀವನವನ್ನು ಆವರಿಸಿಬಿಟ್ಟಿದೆ ಎಂದರೆ ಊಟದ ಸಮಯದಲ್ಲೂ ಸಹ ಮೊಬೈಲ್ ಬಿಟ್ಟಿರದಷ್ಟು ಗೀಳು ಬಂದುಬಿಟ್ಟಿದೆ ಎಂದು ಸಮೀಕ್ಷೆಗೆ ಒಳಗಾಗಿದ್ದ 60%  ಮಂದಿ ಒಪ್ಪಿಕೊಂಡಿದ್ದಾರೆ. 

ತಾವು ಸದಾ ಫೋನ್‌ನಲ್ಲಿ ನಿರತರಾಗಿರುವಾಗ ಮಕ್ಕಳು ಏನನ್ನಾದರೂ ಕೇಳಿದಾಗಲೂ ಕಿರಿಕಿರಿ ಎನಿಸುತ್ತದೆ ಎಂಬುದನ್ನು 90%ಜನರು ಒಪ್ಪಿಕೊಂಡಿದ್ದಾರೆ. ಇದು ಫೋನ್ ಮೇಲಿನ ಅತಿಯಾದ ಗೀಳು ನಮ್ಮ ಮಕ್ಕಳಿಗಿಂತಲೂ ಗ್ಯಾಜೆಟ್ ಗೆ ಹೆಚ್ಚಿನ ಮಹತ್ವ ನೀಡುತ್ತಿರುವ ವಾಸ್ತವತೆಯ ಬಗೆಗಿನ ಆಘಾತಕಾರಿ ಮಾಹಿತಿಯನ್ನು ಸಮೀಕ್ಷೆ ಬಹಿರಂಗಗೊಳಿಸಿದೆ. ಒಟ್ಟಾರೆಯಾಗಿ ಈಗಲೇ ನಾವು ಈ ಬಗ್ಗೆ ಎಚ್ಚೆತ್ತುಕೊಳ್ಳದಿದ್ದರೆ ಮಕ್ಕಳು ಪೋಷಕರಿಂದ ಭಾವನಾತ್ಮಕವಾಗಿ ದೂರ ಸರಿಯುವ ಕಾಲ ತುಂಬಾ ಸನಿಹದಲ್ಲೇ ಇದೆ ಎಂದರೆ ತಪ್ಪಾಗುವುದಿಲ್ಲ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link