ಡಬಲ್ ಚಿನ್ ಸಮಸ್ಯೆಗೆ ಸುಲಭ ಪರಿಹಾರ ನೀಡುತ್ತೆ ಫೇಶಿಯಲ್ ಯೋಗ
ಮುಖಕ್ಕೆ ಸಂಬಂಧಿಸಿದ ಕೆಲವು ಯೋಗಗಳ ಸಹಾಯದಿಂದ ಮುಖದಲ್ಲಿ ಶೇಖರವಾಗಿರುವ ಕೊಬ್ಬನ್ನು ಕಡಿಮೆ ಮಾಡಬಹುದು.
ಫೇಶಿಯಲ್ ಯೋಗ ಮಾಡಲು ಹಲವು ವಿಧಾನಗಳಿವೆ. ಆದರೆ, ಇವೆಲ್ಲದರ ಉದ್ದೇಶ ಒಂದೇ, ಮುಖದ ಚಲನೆಯನ್ನು ಹೆಚ್ಚಿಸುವುದು. ಈ ಕಾರಣದಿಂದಾಗಿ ಮುಖದ ಚಟುವಟಿಕೆಗಳು ಹೆಚ್ಚಾಗುತ್ತವೆ. ಇದರಿಂದ ಮುಖದಲ್ಲಿ ಕೊಬ್ಬು ಶೇಖರಣೆಯನ್ನು ತಡೆಯಬಹುದು.
ಬಲೂನ್ ಭಂಗಿ: ಸಾಮಾನ್ಯವಾಗಿ ನಾವು ಬಾಯಿ ಮುಕ್ಕಳಿಸುವಾಗ ಈ ಭಂಗಿಯನ್ನು ಬಳಸುತ್ತೇವೆ. ಬಾಯಿಯಲ್ಲಿ ಸಾಧ್ಯವಾದಷ್ಟು ಗಾಳಿಯನ್ನು ತುಂಬಿಸಿ. ನಂತರ ಇದೆ ಭಂಗಿಯಲ್ಲಿ ಬಾಯಿ ಮುಕ್ಕಳಿಸುವಂತೆ ಮಾಡಿ. ದಿನಕ್ಕೆ 5 ರಿಂದ 7 ಬಾರಿ ಹೀಗೆ ಮಾಡಿದರೆ ಡಬಲ್ ಚಿನ್ ಹೋಗುವುದು ಮಾತ್ರವಲ್ಲದೆ ದವಡೆಯ ಮೂಳೆಗಳು ಗಟ್ಟಿಯಾಗುತ್ತವೆ.
ಮೀನಿನ ಭಂಗಿ: ಕೆನ್ನೆಗಳನ್ನು ಎರಡೂ ಬದಿಯಿಂದ ಒಳಕ್ಕೆ ಎಳೆದು ತುಟಿಯನ್ನು ಮೀನಿನ ಆಕಾರಕ್ಕೆ ತರುವ ಆಟವನ್ನು ಸಣ್ಣ ವಯಸ್ಸಿನಲ್ಲಿ ನಾವು ಆಡಿಯೇ ಇರುತ್ತೇವೆ. ಇದೂ ಕೂಡ ಡಬಲ್ ಚಿನ್ ಸಮಸ್ಯೆಗೆ ಸುಲಭ ಪರಿಹಾರ ನೀಡಬಲ್ಲದು.
ಸಿಂಹದ ಭಂಗಿ: ಈ ಭಂಗಿಯಲ್ಲಿ, ನಿಮ್ಮ ನಾಲಿಗೆಯನ್ನು ಪೂರ್ಣ ಬಲದಿಂದ ಹೊರತೆಗೆಯಿರಿ ಮತ್ತು ಬಾಯಿಯಲ್ಲಿ ಗಾಳಿಯನ್ನು ತುಂಬುವ ಮೂಲಕ ನಾಲಿಗೆಯನ್ನು ಬಲ ಮತ್ತು ಎಡಕ್ಕೆ ಸರಿಸಿ, ಹೀಗೆ ಮಾಡುವುದರಿಂದ ನಿಮ್ಮ ಮುಖದ ಚರ್ಮವು ಬಿಗಿಯಾಗುತ್ತದೆ ಮತ್ತು ಮುಖದಲ್ಲಿ ಶೇಕಹರವಾಗಿರುವ ಹೆಚ್ಚುವರಿ ಕೊಬ್ಬು ಕೂಡ ಕರಗುತ್ತದೆ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಜ್ಞಾನವನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ತಪ್ಪದೇ ವೈದ್ಯಕೀಯ ಸಲಹೆಯನ್ನು ಪಡೆಯಿರಿ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.