Famous Ganesh Temples: ಗಣಪತಿಯ ಈ 5 ದೇವಸ್ಥಾನಗಳಿಗೆ ಭೇಟಿ ನೀಡುವುದರಿಂದ ನಿಮ್ಮ ಮನಸ್ಸಿನ ಆಸೆ ಈಡೇರುತ್ತೆ
ಮಧ್ಯಪ್ರದೇಶದ ಉಜ್ಜಯಿನಿ ನಗರದಲ್ಲಿ ನಿರ್ಮಿಸಲಾದ ಚಿಂತಾಮನ್ ಗಣೇಶ ದೇವಸ್ಥಾನವು (Chintaman Ganesh Temple in Ujjain) ಸುಮಾರು 1,100 ವರ್ಷಗಳಷ್ಟು ಹಳೆಯದು. ಈ ದೇವಸ್ಥಾನದಲ್ಲಿ ಇರುವ ಗಣೇಶ ಮೂರ್ತಿಗಳನ್ನು ರಾಮ, ಲಕ್ಷ್ಮಣ ಮತ್ತು ಸೀತಾ ದೇವಿಯರು ಸ್ಥಾಪಿಸಿದ್ದಾರೆ ಎಂದು ಹೇಳಲಾಗಿದೆ. ಈ ದೇವಾಲಯದ ಪ್ರಸ್ತುತ ರಚನೆಯನ್ನು ಹೋಲ್ಕರ್ ರಾಜವಂಶದ ಮಹಾರಾಣಿ ಅಹಲ್ಯಾಬಾಯಿ ನಿರ್ಮಿಸಿದ್ದಾರೆ. ಈ ದೇವಾಲಯದ ಭವ್ಯತೆಯನ್ನು ಕಣ್ತುಂಬಿಕೊಳ್ಳಲು ದೇಶ ವಿದೇಶಗಳಿಂದ ಜನರು ಇಲ್ಲಿದೆ ಧಾವಿಸುತ್ತಾರೆ.
ರಾಜಸ್ಥಾನದ ರಾಜಧಾನಿಯಾದ ಜೈಪುರದ ಮೋತಿ ದುಂಗ್ರಿ ಗಣೇಶ ದೇವಸ್ಥಾನವೂ (Moti Dungri Ganesh Temple of Jaipur) ಬಹಳ ಪ್ರಸಿದ್ಧವಾಗಿದೆ. ಇಲ್ಲಿನ ವಿಗ್ರಹವು 500 ವರ್ಷಗಳಿಗಿಂತ ಹಳೆಯದು. ಇದನ್ನು ಜೈಪುರದ ರಾಜಾ ಮಧೋ ಸಿಂಗ್ ರಾಣಿಯ ಪೂರ್ವಿಕರ ಹಳ್ಳಿಯಿಂದ ತರಲಾಗಿದೆ ಎಂದು ಹೇಳಲಾಗುತ್ತದೆ.
ಮಧ್ಯಪ್ರದೇಶದ ಇಂದೋರ್ ನಗರದ ಖಜರಾನ ಗಣೇಶ ದೇವಸ್ಥಾನವು (Khajrana Ganesh Temple of Indore) ಬಹಳ ಪ್ರಸಿದ್ಧವಾಗಿದೆ. ಈಗಿರುವ ಉಜ್ಜಯಿನಿಯಲ್ಲಿರುವ ಚಿಂತಾಮನ್ ಗಣೇಶ ದೇವಾಲಯದ ಕಟ್ಟಡದಂತೆ, ಈ ದೇವಸ್ಥಾನವನ್ನು ಕೂಡ ಹೋಳ್ಕರ್ ರಾಜವಂಶದ ಮಹಾರಾಣಿ ಅಹಲ್ಯಾ ಬಾಯಿ ನಿರ್ಮಿಸಿದ್ದಾರೆ. ಈ ಪ್ರದೇಶದಲ್ಲಿ ವಾಸಿಸುತ್ತಿರುವ ದೇವಸ್ಥಾನದ ಪೂಜಾರಿಗೆ ಗಣೇಶನ ಮೂರ್ತಿಯನ್ನು ನೆಲದಡಿಯಲ್ಲಿ ಹೂಳುವ ಕನಸು ಇತ್ತು ಎಂದು ನಂಬಲಾಗಿದೆ. ಇದರ ನಂತರ, ದೇವರ ವಿಗ್ರಹವು ಇಲ್ಲಿ ಉತ್ಖನನದಲ್ಲಿ ಕಂಡುಬಂದಿತು ಮತ್ತು ನಂತರ ರಾಣಿ ಇಲ್ಲಿ ದೇವಸ್ಥಾನವನ್ನು ನಿರ್ಮಿಸಿದಳು ಎಂದು ಹೇಳಲಾಗುತ್ತದೆ.
ಇದನ್ನೂ ಓದಿ- Planetary Transits: ಶುಕ್ರ, ಮಂಗಳನ ರಾಶಿ ಪರಿವರ್ತನೆ; ಈ 3 ರಾಶಿಯವರಿಗೆ ಅದೃಷ್ಟ
ಮಹಾರಾಷ್ಟ್ರದ ಮುಂಬೈ ನಗರದಲ್ಲಿ ಸಿದ್ಧಿವಿನಾಯಕ ದೇವಸ್ಥಾನವು (Siddhivinayak Temple of Mumbai) ಸೆಲೆಬ್ರಿಟಿಗಳಲ್ಲಿ ಬಹಳ ಜನಪ್ರಿಯವಾಗಿದೆ. ಇಲ್ಲಿ ಚಲನಚಿತ್ರ ತಾರೆಯರು, ದೇಶದ ದೊಡ್ಡ ಕೈಗಾರಿಕೋದ್ಯಮಿಗಳು ಪ್ರತಿ ದಿನವೂ ಭೇಟಿ ನೀಡುತ್ತಾರೆ. ಈ ದೇವಾಲಯವು ದೇಶದ ಶ್ರೀಮಂತ ದೇವಾಲಯಗಳಲ್ಲಿ ಸ್ಥಾನ ಪಡೆದಿದೆ. ಈ ದೇವಸ್ಥಾನದಲ್ಲಿ ಸ್ಥಾಪಿಸಲಾದ ಗಣೇಶ ಮೂರ್ತಿಯು (Lord Ganesh) ಸುಮಾರು 200 ವರ್ಷಗಳಷ್ಟು ಹಳೆಯದು. ದೇವಾಲಯದ ಮೇಲ್ಭಾಗದಲ್ಲಿ 3.5 ಕೆಜಿ ಚಿನ್ನದ ಕಲಶವಿದೆ.
ಇದನ್ನೂ ಓದಿ- Ganesh Chaturthi 2021: ಗಣೇಶ ಚತುರ್ಥಿಯಂದು, ನಿಮ್ಮ ರಾಶಿಗೆ ಅನುಗುಣವಾಗಿ ಗಣಪನನ್ನು ಪೂಜಿಸಿ ಶುಭ ಫಲ ಪಡೆಯಿರಿ
ಮಹಾರಾಷ್ಟ್ರದ ಪುಣೆ ನಗರದ ದಗ್ಡುಸೇತ್ ಹಲ್ವಾಯಿ ಗಣೇಶ ದೇವಸ್ಥಾನ ಕೂಡ 200 ವರ್ಷಗಳಷ್ಟು ಹಳೆಯದು. ಇಲ್ಲಿನ ಉದ್ಯಮಿ ದಗ್ದು ಸೇಠ್ ಹಲ್ವಾಯಿ, ಗುರು ಮಾಧವನಾಥ ಮಹಾರಾಜರ ಆಜ್ಞೆಯ ಮೇರೆಗೆ ಅವರ ಮಗನ ಮರಣದ ನಂತರ ಈ ಗಣೇಶ ದೇವಸ್ಥಾನವನ್ನು ನಿರ್ಮಿಸಿದರು.
(ಸೂಚನೆ: ಈ ಲೇಖನದಲ್ಲಿ ನೀಡಿರುವ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಊಹೆಗಳನ್ನು ಆಧರಿಸಿದೆ. ಜೀ ಹಿಂದೂಸ್ಥಾನ್ ಕನ್ನಡ ನ್ಯೂಸ್ ಇದನ್ನು ದೃಢೀಕರಿಸುವುದಿಲ್ಲ.)