ಮದುವೆಯಾದ 16 ದಿನಕ್ಕೆ ಗಂಡನಿಂದ ದೂರಾದ ಖ್ಯಾತ ಸೌತ್ ನಟಿ !
celebrity divorce: ಸೆಲೆಬ್ರಿಟಿಗಳ ವಿಚ್ಛೇದನವು ಯಾವಾಗಲೂ ಅಭಿಮಾನಿಗಳಲ್ಲಿ ನಿರಾಶೆಯನ್ನು ಉಂಟುಮಾಡುತ್ತದೆ.
ಈ ಟಾಲಿವುಡ್ ನಟಿ ತಾನು ಪ್ರೀತಿಸಿದ ಹುಡುಗನನ್ನೇ ಮದುವೆ ಆದಳು. ಆದರೆ ಅದು ಕೆಲವೇ ದಿನಗಳಲ್ಲಿ ಕೊನೆಗೊಂಡಿತು. ಆಕೆ ಯಾರು ಗೊತ್ತಾ?
ನಟಿ ಎಸ್ತರ್ ನೊರೊನ್ಹಾ ಮದುವೆಯ ಕತೆಯಿದು. ರಾಪರ್ ನೋಯೆಲ್ ಸೀನ್ ಎಂಬ ವ್ಯಕ್ತಿಯೊಂದಿಗೆ ಹಲವು ವರ್ಷಗಳ ಕಾಲ ಡೇಟಿಂಗ್ ಮಾಡಿದ್ದರು. 2019 ರಲ್ಲಿ ರಾಪರ್ ನೋಯೆಲ್ ಸೀನ್ ಅವರೊಂದಿಗೆ ನಟಿ ಎಸ್ತರ್ ನೊರೊನ್ಹಾ ಮದುವೆಯಾದರು.
ವರದಿಗಳ ಪ್ರಕಾರ, ಅವರ ಮದುವೆಯು ಅದ್ಧೂರಿಯಾಗಿ ನಡೆಯಿತು. ಆದರೆ ಮದುವೆಯಾದ ಮೂರು ತಿಂಗಳೊಳಗೆ ದಂಪತಿಗಳು ವಿಚ್ಛೇದನ ಪಡೆದರು. 16 ದಿನದಲ್ಲೇ ಇಬ್ಬರ ನಡುವೆ ಭಿನ್ನಾಭಿಪ್ರಾಯ ಹುಟ್ಟಿತು ಎಂದು ಹೇಳಲಾಗಿದೆ.
ಸಂದರ್ಶನವೊಂದರಲ್ಲಿ ನಟಿ ಎಸ್ತರ್ ನೊರೊನ್ಹಾ ತಮ್ಮ ಮದುವೆಯ ಬಗ್ಗೆ ಬಹಳಷ್ಟು ವಿಷಯಗಳನ್ನು ಹೇಳಿದ್ದಾರೆ. ಮದುವೆಯಾದ 16 ದಿನಗಳಲ್ಲಿ ಗಂಡನ "ನಿಜ ಸ್ವರೂಪದ" ಬಗ್ಗೆ ತಿಳಿಯಿತು. ಹೀಗಾಗಿ ಆತನಿಂದ ದೂರಾಗುವ ನಿರ್ಧಾರ ತೆಗೆದುಕೊಂಡೆ ಎಂದಿದ್ದಾರೆ
ಅಕ್ಟೋಬರ್ 31, 2020ರಂದು ಅಧಿಕೃತವಾಗಿ ವಿಚ್ಛೇದನ ಪಡೆದು ದೂರಾಗಿದ್ದೇವೆ ಎಂದು ನಟಿ ಎಸ್ತರ್ ಸಂದರ್ಶನ ಒಂದರಲ್ಲಿ ತಿಳಿಸಿದ್ದಾರೆ.
ನಟಿ ಎಸ್ತರ್ ಬಾಲಿವುಡ್ ನ ಅನೇಕ ಸಿನಿಮಾಗಳಲ್ಲಿ ಮಿಂಚಿದ್ದಾರೆ. ಈ ವರ್ಷ ಏಪ್ರಿಲ್‌ನಲ್ಲಿ ಬಿಡುಗಡೆಯಾದ ಥ್ರಿಲ್ಲರ್ ಸಿನಿಮಾ ಟೆನಂಟ್ ಚಿತ್ರದಲ್ಲಿ ಅವರು ಕೊನೆಯದಾಗಿ ಕಾಣಿಸಿಕೊಂಡರು. ಎಸ್ತರ್ ಸದ್ಯ ಸಿನಿಮಾ ಹಾಗೂ ವೆಬ್ ಸೀರೀಸ್‌ಗಳಲ್ಲಿ ಬ್ಯುಸಿಯಾಗಿದ್ದಾರೆ.