ತೆರೆಗೆ ಬರಲು ಸಜ್ಜಾಗುತ್ತಿದೆ ಟೀಂ ಇಂಡಿಯಾ ನಾಯಕ ರೋಹಿತ್‌ ಶರ್ಮಾ ಅವರ ಜೀವನ ಚರಿತ್ರೆ? ಬಯೋಪಿಕ್‌ನಲ್ಲಿ ನಟಿಸುತ್ತಿರುವ ಸ್ಟಾರ್‌ ಹೀರೋ ಯಾರು ಗೊತ್ತಾ?

Tue, 24 Sep 2024-8:37 am,

ಸಿನಿಮಾ ಇಂಡಸ್ಟ್ರಿಯಲ್ಲಿ ಬಯೋಪಿಕ್‌ಗಳಿಗಿರುವ ಕ್ರೇಜ್‌ ಅಷ್ಟಿಷ್ಟಲ್ಲ. ನಪ್ರಿಯ ಚಲನಚಿತ್ರ, ರಾಜಕೀಯ ಮತ್ತು ಕ್ರೀಡಾ ಸೆಲೆಬ್ರಿಟಿಗಳ ಜೀವನದ ಆಧಾರಿತ ಅನೇಕ ಬಯೋಪಿಕ್‌ಗಳು ಸಿಕ್ಕಾಪಟ್ಟೆ ಹಿಟ್‌ ಆಗಿರುವ ಉದಾಹರನೆಗಳು ಸಾಕಷ್ಟಿವೆ. ಈ ಬಯೋಪಿಕ್‌ ಸಿನಿಮಾಗಳು ಬಾಕ್ಸ್‌ ಆಫಿಸ್‌ನಲ್ಲಿ ಕೋಟಿ ಕೋಟಿ ಹಣ ಬಾಚಿಕೊಂಡಿದ್ದು ಅಷ್ಟೆ ಅಲ್ಲದೆ. ಸಾಕಷ್ಟು ಅವಾರ್ಡ್‌ಗಳನ್ನು ಸಹ ಗೆದ್ದುಕೊಂಡಿದೆ.  ಇದರಿಂದಾಗಿ ಆ ಭಾಷೆ ಮತ್ತು ಈ ಭಾಷೆಯ ಭೇದವಿಲ್ಲದೆ ಅನೇಕ ಇಂಡಸ್ಟ್ರಿಗಳಲ್ಲಿ ಈ ರೀತಿಯ ಚಿತ್ರಗಳು ಸತತವಾಗಿ ಬಿಡುಗಡೆಯಾಗುತ್ತಿವೆ. 

ಕ್ರೀಡೆಗೆ ಸಂಬಂಧಿಸಿದಂತೆ, 'ಭಾಗ್ ಮಿಲ್ಕಾ ಭಾಗ್' ಮತ್ತು 'ಎಂಎಸ್ ಧೋನಿ: ದಿ ಅನ್‌ಟೋಲ್ಡ್ ಸ್ಟೋರಿ' ನಂತಹ ಬಯೋಪಿಕ್‌ಗಳು ಡಬಲ್ ಬ್ಲಾಕ್‌ಬಸ್ಟರ್‌ಗಳಾಗಿವೆ. ಸದ್ಯ ಟೀಂ ಇಂಡಿಯಾ ಲೆಜೆಂಡ್ ಯುವರಾಜ್ ಸಿಂಗ್ ಜೀವನಾಧಾರಿತ ಬಯೋಪಿಕ್ ತಯಾರಾಗುತ್ತಿದೆ. ಈ ವೇಳೆ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಬಗ್ಗೆ ಕುತೂಹಲಕಾರಿ ಸುದ್ದಿಯೊಂದು ಹೊರಬಿದ್ದಿದೆ. ಹಿಟ್ ಮ್ಯಾನ್ ಬಯೋಪಿಕ್ ನಲ್ಲಿ ಮ್ಯಾನ್ ಆಫ್ ಮಾಸ್ ಜೂನಿಯರ್ ಎನ್ ಟಿಆರ್ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ ಎಂದು ವರದಿಯಾಗಿದೆ.   

ರೋಹಿತ್ ಶರ್ಮಾ ಜೀವನಾಧಾರಿತ ಬಯೋಪಿಕ್ ಬೇಕು ಎಂದು ಅಭಿಮಾನಿಗಳು ಹಲವು ವರ್ಷಗಳಿಂದ ಕೇಳುತ್ತಿದ್ದಾರೆ. ಭಾರತ T20 ವಿಶ್ವಕಪ್-2024 ಗೆದ್ದ ನಂತರ, ಈ ಬೇಡಿಕೆಗಳು ಹೆಚ್ಚು ವೇಗವನ್ನು ಪಡೆದುಕೊಂಡಿವೆ. 

ಧೋನಿ, ಸಚಿನ್ ತೆಂಡೂಲ್ಕರ್ ಅವರ ಜೀವನಾಧಾರಿತ ಚಿತ್ರಗಳು ಈಗಾಗಲೇ ಬಂದಿದ್ದು, ಮುಂದೆ ರೋಹಿತ್ ಜೀವನಾಧಾರಿತ ಸಿನಿಮಾ ಮಾಡಬೇಕೆಂದು ಕ್ರಿಕೆಟ್ ಪ್ರೇಮಿಗಳೂ ಬಲವಾಗಿ ಬೇಡಿಕೆಯಿಟ್ಟಿದ್ದಾರೆ. ಆದರೆ ಈ ಚಿತ್ರದಲ್ಲಿ ರೋಹಿತ್ ಪಾತ್ರದಲ್ಲಿ ಯಾರು ಕಾಣಿಸಿಕೊಳ್ಳಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ. 

ಈ ಕುತೂಹಲಕ್ಕೆ ಇದೀಗ ತೆರೆ ಬಿದ್ದಿದ್ದು, ರೋಹಿತ್‌ ಶರ್ಮಾ ಅವರ ಬಯೋಪಿಕ್‌ನಲ್ಲಿ ಯಾರು ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಪ್ರಶ್ನೆಗೆ ಉತ್ತರ ಸಿಕ್ಕಿದೆ.  ತಾರಕ್, ರೋಹಿತ್ ಆಗಿ ಕಾಣಿಸಿಕೊಂಡರೆ ಚೆನ್ನಾಗಿರುತ್ತದೆ ಎಂದು ಅಭಿಮಾನಿಗಳು ಆಶಿಸುತ್ತಿದ್ದಾರೆ. ಯಂಗ್ ಟೈಗರ್ ಜೂನಿಯರ್ ಎನ್.ಟಿ.ಆರ್ ಭಾರತ ತಂಡದ ನಾಯಕನಾಗಿ ನಟಿಸಿದರೆ, ಸಿನಿಮಾ ಇಂಡಸ್ಟರಿಯಲ್ಲಿ ಸುನಾಮಿ ಎಬ್ಬಿಸಲಿದೆ ಈ ಸಿನಿಮಾ ಎನ್ನುತ್ತಿದ್ದಾರೆ ಅಭಿಮಾನಿಗಳು.

ರೋಹಿತ್ ಶರ್ಮಾ ಪಾತ್ರದಲ್ಲಿ ಎನ್ ಟಿಆರ್ ನಟಿಸಬೇಕು ಎಂದು ಸಿನಿಮಾ ಅಭಿಮಾನಿಗಳು ಹಾಗೂ ಕ್ರಿಕೆಟ್ ಪ್ರೇಮಿಗಳು ಕೂಡ ಬಯಸಿದ್ದಾರೆ. ಯಾವುದೇ ಪಾತ್ರವನ್ನು ಸುಲಭವಾಗಿ ಮಾಡುವ ಸಾಮಾರ್ಥ್ಯ ಹೊಂದಿರುವ ತಾರಕ್‌, ರೋಹಿತ್‌ ಆರ್ಮಾರನ್ನು ಹೋಲುತ್ತಾರೆ ಇದರಿಂದ ಹಿಟ್‌ಮ್ಯಾನ್‌ ಪಾತ್ರವನ್ನು ಜೂ, ಎನ್‌ಟಿಆರ್‌ ನಟಿಸಿದರೆ ಉತ್ತಮ ಎನ್ನುತ್ತಿದ್ದಾರೆ ಅಭಿಮಾನಿಗಳು. 

ಈ ಸಿನಿಮಾದ ಬಗ್ಗೆ ಇನ್ನೂ ಯಾವುದೇ ಯೋಜನೆಗಳು ನಡೆದಿಲ್ಲ, ಎಲ್ಲವೂ ಇನ್ನೂ ರೋಹಿತ್‌ ಹಾಗೂ ಜೂ. ಎನ್‌ಟಿಆರ್‌ ಅವರ ನಿರ್ಧರಗಳ ಮೇಲೆ ಆವಲಂಭೀತವಾಗಲಿದೆ. ತಯಾರಕರು ಈ ದಿಕ್ಕಿನಲ್ಲಿ ಯೋಜಿಸಿ ಬಯೋಪಿಕ್ ಅನ್ನು ರೆಡಿಮಾಡಿದರೆ ಇದಕ್ಕಿಂತ ದೊಡ್ಡದಾಗಿ ಅಭಿಮಾನಗಳು ಇನ್ನೇನನ್ನು ಸಹ ಬಯಸುವುದಿಲ್ಲ ಎನ್ನುತ್ತಾರೆ ಅಭಿಮಾನಿಗಳು. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link