Farmers Protest: ಜನ ಸಾಮಾನ್ಯರಿಗೆ ಬೆಲೆ ಏರಿಕೆ ಬಿಸಿ

Wed, 02 Dec 2020-12:45 pm,

ನವದೆಹಲಿ: ದೆಹಲಿ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ತರಕಾರಿಗಳ ಚಿಲ್ಲರೆ ಬೆಲೆ ಹೆಚ್ಚಾಗಿದೆ. ದೆಹಲಿಯ ಗಡಿಯಲ್ಲಿ ರೈತರ ಪ್ರತಿಭಟನೆ ನಡೆಯುತ್ತಿರುವುದರಿಂದ ದೆಹಲಿ-ಎನ್‌ಸಿಆರ್‌ನಲ್ಲಿ ತರಕಾರಿಗಳ ಪೂರೈಕೆಗೆ ತೊಂದರೆಯಾಗಿದೆ. ರೈತರ ಪ್ರತಿಭಟನೆ ಕಾರಣ  ತರಕಾರಿಗಳು ಮತ್ತು ಹಣ್ಣುಗಳೊಂದಿಗೆ ದೆಹಲಿ-ಎನ್‌ಸಿಆರ್ ತಲುಪಲು ಟ್ರಕ್‌ಗಳು ಸಾಕಷ್ಟು ತೊಂದರೆಗಳನ್ನು ಎದುರಿಸುತ್ತಿವೆ ಎನ್ನಲಾಗಿದೆ.

ರೈತರ ಪ್ರತಿಭಟನೆಯಿಂದಾಗಿ ಸರಬರಾಜಿನಲ್ಲಿ ಕೆಟ್ಟ ಪರಿಣಾಮ ಬೀರಿದೆ ಎಂದು ದೆಹಲಿಯಲ್ಲಿ ತರಕಾರಿ ಮಾರಾಟಗಾರರು ಹೇಳುತ್ತಾರೆ. ಇದರಿಂದಾಗಿ ಸಗಟು ವ್ಯಾಪಾರದಲ್ಲಿ ತರಕಾರಿಗಳ ಬೆಲೆ 50 ರಿಂದ 100 ರೂಪಾಯಿಗೆ ಏರಿದೆ. (ಫೋಟೊ ಕೃಪೆ: ANI)

ಸಿಂಗ್ ಮತ್ತು ಟಿಕಾರಿ ಗಡಿಯಲ್ಲಿ ರೈತರ ಪ್ರತಿಭಟನೆಯಿಂದಾಗಿ ಪಂಜಾಬ್, ಹರಿಯಾಣ, ಹಿಮಾಚಲ ಪ್ರದೇಶ ಮತ್ತು ಜಮ್ಮು ಮತ್ತು ಕಾಶ್ಮೀರದಿಂದ ತರಕಾರಿಗಳು ಮತ್ತು ಹಣ್ಣುಗಳನ್ನು ತರುವ ಟ್ರಕ್‌ಗಳು ದೆಹಲಿ-ಎನ್‌ಸಿಆರ್ ತಲುಪಲು ಹೆಣಗಾಡಬೇಕಾಗಿದೆ. (ಫೋಟೊ ಕೃಪೆ: PTI)

ರೈತರ ಅನಿರ್ದಿಷ್ಟಾವಧಿ ಮುಷ್ಕರದಿಂದಾಗಿ ದೆಹಲಿಯ ಗಡಿಗಳು ಅಸ್ತವ್ಯಸ್ತಗೊಂಡಿದ್ದು, ಇದರಿಂದಾಗಿ ಮುಂಬರುವ ದಿನಗಳಲ್ಲಿ ತರಕಾರಿಗಳು ಮತ್ತು ಹಣ್ಣುಗಳ ಬೆಲೆಗಳು ಹೆಚ್ಚಾಗಬಹುದು ಎಂದು ನಿರೀಕ್ಷಿಸಲಾಗಿದೆ. (ಫೋಟೊ ಕೃಪೆ: PTI)

ಹರಿಯಾಣ ಮತ್ತು ದೆಹಲಿಯ ಪಕ್ಕದ ಸಿಂಗು ಗಡಿಯ ಸಮೀಪವಿರುವ ಕುಂಡ್ಲಿ ಹೆದ್ದಾರಿಯಲ್ಲಿ ಹಣ್ಣುಗಳು ಮತ್ತು ತರಕಾರಿಗಳನ್ನು ತುಂಬಿದ ಟ್ರಕ್‌ಗಳು ಸಿಕ್ಕಿಕೊಂಡಿವೆ. ಈ ಭಾಗದಲ್ಲಿ ಸಾವಿರಾರು ರೈತರು ರಸ್ತೆಯಲ್ಲಿ ಮೊಕ್ಕಾಂ ಹೂಡಿದ್ದಾರೆ. (ಫೋಟೊ ಕೃಪೆ: ಐಎಎನ್‌ಎಸ್)

ಅದೇ ಸಮಯದಲ್ಲಿ ಕೇಂದ್ರ ಸಚಿವ ನರೇಂದ್ರ ಸಿಂಗ್ ತೋಮರ್ ಮತ್ತು ರೈಲ್ವೆ ಸಚಿವ ಪಿಯೂಷ್ ಗೋಯಲ್ ಅವರೊಂದಿಗೆ ಮಂಗಳವಾರ ರೈತ ಮುಖಂಡರು ಸಭೆ ನಡೆಸಿದ ನಂತರವೂ ಯಾವುದೇ ಪರಿಹಾರ ಕಂಡುಬಂದಿಲ್ಲ. ಸರ್ಕಾರವು ಕನಿಷ್ಠ ಬೆಂಬಲ ಬೆಲೆಗೆ (ಎಂಎಸ್‌ಪಿ) ಖಾತರಿ ನೀಡುವುದು ಮತ್ತು ಹೊಸ ಕೃಷಿ ಕಾನೂನನ್ನು ಹಿಂತೆಗೆದುಕೊಳ್ಳದವರೆಗೂ ತಮ್ಮ ಪ್ರತಿಭಟನೆಯಿಂದ ಹಿಂದೆ ಸರಿಯುವುದಿಲ್ಲ ಎಂದು ರೈತ ಮುಖಂಡರು ಹೇಳಿದ್ದಾರೆ. (ಫೋಟೊ ಕೃಪೆ: ಎಎನ್‌ಐ)

ZEENEWS TRENDING STORIES

By continuing to use the site, you agree to the use of cookies. You can find out more by Tapping this link