ಯಶಸ್ವಿ ವೃತ್ತಿ ಜೀವನಕ್ಕಾಗಿ ಫೆಂಗ್ ಶೂಯಿ ಸಲಹೆಗಳು
ಫೆಂಗ್ ಶೂಯಿ ಪ್ರಕಾರ, ಮನೆಯಲ್ಲಿ ನಿಮಗೆ ಅಗತ್ಯವಿರುವ ಸಾಮಾನುಗಳನ್ನು ಮಾತ್ರ ಇರಿಸಿ. ಅನಾಣೆಯಲ್ಲಿ ಅನಗತ್ಯ ಸಾಮಾನುಗಳು, ಇಲ್ಲವೇ ಹೆಚ್ಚಿನ ಸಾಮಾನುಗಳಿದ್ದರೆ ಅದು ಏಳಿಗೆಯನ್ನು ಕುಂಠಿತಗೊಳಿಸುತ್ತದೆ ಎಂದು ನಂಬಲಾಗಿದೆ
ಫೆಂಗ್ ಶೂಯಿ ಶಾಸ್ತ್ರದ ಪ್ರಕಾರ, ಸೋಫಾ ಇಡುವಾಗ ಅದರ ಹಿಂಬಡಿಯು ಬಾಗಿಲಿನ ಕಡೆಗೆ ಇರದಂತೆ ಗಮನವಹಿಸಿ. ಹೊರಗಿನಿಂದ ಕೆಲಸ ಮುಗಿಸಿ ಬರುವ ಮನೆಯ ಯಜಮಾನ ಮನೆಗೆ ಬಂದ ಕೂಡಲೇ ಸೋಫಾದ ಹಿಂಬದಿಯನ್ನು ನೋಡಬಾರದು ಎಂದು ಹೇಳಲಾಗುತ್ತದೆ.
ಫೆಂಗ್ ಶೂಯಿಯಲ್ಲಿ ಮನೆಯ ಮುಖ್ಯ ದ್ವಾರಕ್ಕೆ ಹೆಚ್ಚಿನ ಮಹತ್ವವಿದೆ. ಫೆಂಗ್ ಶೂಯಿ ಶಾಸ್ತ್ರದ ಪ್ರಕಾರ, ಮನೆಯ ಮುಂಬಾಗಿಲು ಸದಾ ಶುಚಿಯಾಗಿರಬೇಕು. ನೋಡಲು ಆಕರ್ಷಕವಾಗಿರಬೇಕು. ಇದು ಮನೆಯಲ್ಲಿ ಧನಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ.
ಫೆಂಗ್ ಶೂಯಿ ಪ್ರಕಾರ, ವೃತ್ತಿ ಜೀವನದಲ್ಲಿ ಯಶಸ್ಸು ಕಾಣಬೇಕೆಂದರೆ ಮನೆಯ ಮುಂದೆ ಯಾವುದೇ ಕಾರಣಕ್ಕೂ ಮುಳ್ಳಿನ ಅಥವಾ ಚೂಪಾದ ಗಿಡಗಳನ್ನು ಇಡಬಾರದು.
ಫೆಂಗ್ ಶೂಯಿ ಪ್ರಕಾರ, ಯಶಸ್ವಿ ಜೀವನಕ್ಕಾಗಿ ಪೀಠೋಪಕರಣಗಳನ್ನು ಮನೆಯಲ್ಲಿ ಮುಖ್ಯ ದ್ವಾರಕ್ಕೆ ಎದುರಾಗಿರುವಂತೆ ಇಡಬೇಕು ಎಂದು ಹೇಳಲಾಗುತ್ತದೆ.
ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.