PHOTOS: 9 ತಿಂಗಳ ಮಗುವಿನ ಹೊಟ್ಟೆಯಲ್ಲಿ ಭ್ರೂಣ ಕಂಡು ವೈದ್ಯರಿಗೇ ಶಾಕ್!

Tue, 06 Aug 2019-1:47 pm,

ಇಸಾಯಕ್ ಖಾನ್, ಪಾಟ್ನಾ: ದಾನಾಪುರದ ಫುಲ್ವರ್‌ಶರೀಫ್‌ನಿಂದ ಆಶ್ಚರ್ಯಕರ ಪ್ರಕರಣವೊಂದು ಹೊರಬಿದ್ದಿದೆ. ಖಾಸಗಿ ನರ್ಸಿಂಗ್ ಹೋಂನಲ್ಲಿ ಆಪರೇಷನ್ ಮೂಲಕಒಂಬತ್ತು ತಿಂಗಳ ಮಗುವಿನ ಹೊಟ್ಟೆಯಿಂದ ಭ್ರೂಣವನ್ನು ಹೊರ ತೆಗೆಯಲಾಗಿದೆ.

ದರ್ಬಂಗ್ ನಿವಾಸಿ 9 ತಿಂಗಳ ಹೆಣ್ಣು ಮಗುವಿನ ಹೊಟ್ಟೆಯಲ್ಲಿ ಭ್ರೂಣ ಇರುವ ಬಗ್ಗೆ  ಸಿಟಿ ಸ್ಕ್ಯಾನ್‌ನಲ್ಲಿ ತಿಳಿದುಬಂದಿದೆ. ಆ ಮಗುವಿಗೆ ಶಸ್ತ್ರಚಿಕಿತ್ಸೆ ಮಾಡುವ ಮೂಲಕ ಗರ್ಭವನ್ನು ತೆಗೆಯಲಾಗಿದೆ. ಈ ಘಟನೆಯಿಂದ ವೈದ್ಯರ ತಂಡವೂ ಆಶ್ಚರ್ಯಚಕಿತವಾಗಿದೆ. ಪಾಟ್ನಾ ಅಮೆಸ್ ರಸ್ತೆಯಲ್ಲಿರುವ ಖಾಸಗಿ ನರ್ಸಿಂಗ್ ಹೋಂನ ವೈದ್ಯರ ತಂಡ ಈ ಶಸ್ತ್ರಚಿಕಿತ್ಸೆಯನ್ನು ನಡೆಸಿತು.

ಒಂಬತ್ತು ತಿಂಗಳ ಮಗುವಿಗೆ ಹೊಟ್ಟೆಯಲ್ಲಿ ಗೆಡ್ಡೆ ಬೆಳೆದಿದೆ ಎಂದು ವೈದ್ಯರು ಹೇಳುತ್ತಾರೆ. ಮಗುವಿನ ಪೋಷಕರು ಆಕೆಯನ್ನು ಆಸ್ಪತ್ರೆಗೆ ಕರೆತಂದರು. ನಾವು ಮಗುವಿನ ಆರೋಗ್ಯವನ್ನು ಪರಿಶೀಲಿಸಿ ಬಳಿಕ ಸಿಟಿ ಸ್ಕ್ಯಾನ್ ಮಾಡಿಸಲು ಹೇಳಿದೆವು. ಇದರಲ್ಲಿ ತಾಯಿಯ ಗರ್ಭದಲ್ಲಿ ಮಗುವಿನ ಭ್ರೂಣದಂತೆ ಮಗುವಿನ ಹೊಟ್ಟೆಯಲ್ಲಿ ಅಭಿವೃದ್ಧಿಗೊಂಡಿರುವುದು ಕಂಡು ಬಂದಿತು. ಕೆಲವೊಮ್ಮೆ ಇದು ಕ್ಯಾನ್ಸರ್ ರೂಪವನ್ನೂ ತೆಗೆದುಕೊಳ್ಳುತ್ತದೆ ಎಂದು ವೈದ್ಯರು ಹೇಳುತ್ತಾರೆ.

ಮಗುವಿನ ಹೊಟ್ಟೆಯಿಂದ ವೈದ್ಯರು ಎರಡು ಕೆಜಿ ಗೆಡ್ಡೆಯನ್ನು ಹೊರತೆಗೆದಿದ್ದಾರೆ. ಇದು ತಾಯಿಯ ಹೊಟ್ಟೆಯಲ್ಲೇ ಉಳಿದಿದ್ದರೆ ಅದು ಅವಳಿ ಮಗುವಾಗಿ ಹುಟ್ಟುತ್ತಿತ್ತು ಎಂದು ವೈದ್ಯರು ಹೇಳುತ್ತಾರೆ. ಅಲ್ಲದೆ, ಆಪರೇಷನ್ ನಂತರ ಮಗು ಈಗ ಆರೋಗ್ಯವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ವೈದ್ಯಕೀಯ ಕ್ಷೇತ್ರಕ್ಕೆ ಆಶ್ಚರ್ಯವನ್ನುಂಟು ಮಾಡಿರುವ ಈ ಗೆಡ್ಡೆಯನ್ನು ಸಂಶೋಧನೆಗಾಗಿ ಇಡಲಾಗಿದೆ ಎಂದು ವೈದ್ಯರು ಹೇಳಿದ್ದಾರೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link