ಹುಣ್ಣಿಮೆಯಂದೇ ಸಂಭವಿಸಲಿದೆ ವರ್ಷದ ಮೊದಲ ಚಂದ್ರ ಗ್ರಹಣ: ಅದೃಷ್ಟಕ್ಕೆ ಮತ್ತೊಂದು ಹೆಸರಾಗುವರು ಈ ರಾಶಿಯವರು

Tue, 09 Jan 2024-7:08 pm,

ಹಿಂದೂ ಕ್ಯಾಲೆಂಡರ್ ಪ್ರಕಾರ, ಮಾರ್ಚ್ 25 ರಂದು ವರ್ಷದ ಮೊದಲ ಚಂದ್ರ ಗ್ರಹಣ ಸಂಭವಿಸಲಿದ್ದು, ಚಂದ್ರನು ಕನ್ಯಾರಾಶಿಯಲ್ಲಿ ಸ್ಥಿತನಾದರೆ, ರಾಹು ಕೂಡ ಅಲ್ಲೇ ಸ್ಥಾನ ಪಡೆಯುತ್ತಾನೆ. ಹೀಗಾಗಿ, ಕನ್ಯಾರಾಶಿಯಲ್ಲಿ ರಾಹು ಮತ್ತು ಚಂದ್ರನ ಸಂಯೋಗವಿರುತ್ತದೆ.

ಇನ್ನೊಂದೆಡೆ ಮೊದಲ ಚಂದ್ರಗ್ರಹಣವು ಫಲ್ಗುಣ ಮಾಸದ ಶುಕ್ಲ ಪಕ್ಷದ ಹುಣ್ಣಿಮೆಯಂದು ಸಂಭವಿಸುತ್ತದೆ. ಇದು ಬೆಳಿಗ್ಗೆ 10.23 ಕ್ಕೆ ಪ್ರಾರಂಭವಾಗಿ, ಮಧ್ಯಾಹ್ನ 3.02 ರವರೆಗೆ ಮುಂದುವರಿಯುತ್ತದೆ. ಮೊದಲ ಚಂದ್ರಗ್ರಹಣ 2024 ಭಾರತದಲ್ಲಿ ಗೋಚರಿಸುವುದಿಲ್ಲ. ಆದರೆ ಇದರ ಪರಿಣಾಮ 3 ರಾಶಿಗಳ ಮೇಲೆ ಬೀರಲಿದೆ ಎಂಬುದು ಗಮನಾರ್ಹ.

ಜ್ಯೋತಿಷ್ಯದ ಪ್ರಕಾರ, ಎಲ್ಲಾ ರಾಶಿಗಳು 25 ಮಾರ್ಚ್ 2024 ರಂದು ಸಂಭವಿಸುವ ಚಂದ್ರಗ್ರಹಣದಿಂದ ಪ್ರಭಾವಿತವಾಗಿರುತ್ತದೆ. ಆದರೆ ಕೆಲವು ಮಾತ್ರ ಗ್ರಹಣದಿಂದ ವಿಶೇಷ ಪ್ರಯೋಜನಗಳನ್ನು ಪಡೆಯುತ್ತವೆ.

ಮಿಥುನ ರಾಶಿ: ವರ್ಷದ ಮೊದಲ ಚಂದ್ರಗ್ರಹಣವು ಮಿಥುನ ರಾಶಿಯ ಜನರಿಗೆ ಸೌಭಾಗ್ಯವನ್ನೇ ತರಲಿದೆ. ಬಾಕಿ ಕೆಲಸಗಳು ಯಶಸ್ವಿಯಾಗಿ ಪೂರ್ಣಗೊಳ್ಳುತ್ತವೆ. ಇಲ್ಲಿಯವರೆಗೆ ಎದುರಿಸಿದ ಸಮಸ್ಯೆಗಳು ನಿವಾರಣೆಯಾಗುತ್ತದೆ. ಎಲ್ಲಾ ಮಾನಸಿಕ ಒತ್ತಡದಿಂದ ಪರಿಹಾರ ಸಿಗುತ್ತದೆ.

ಸಿಂಹ ರಾಶಿ: ಮೊದಲ ಚಂದ್ರಗ್ರಹಣ ಸಿಂಹ ರಾಶಿಯ ಜನರ ಜೀವನದಲ್ಲಿ ಬಹಳಷ್ಟು ಪ್ರಯೋಜನಗಳನ್ನು ನೀಡಲಿದೆ. ವೃತ್ತಿ ಮತ್ತು ವೈಯಕ್ತಿಕ ಜೀವನದಲ್ಲಿ ಸಂತೋಷ ಇರಲಿದೆ. ಹೂಡಿಕೆಗೆ ಇದು ಉತ್ತಮ ಸಮಯ. ಆರ್ಥಿಕ ಸ್ಥಿತಿ ಈ ಸಂದರ್ಭಗಳಲ್ಲಿ ಬಲಗೊಳ್ಳಲಿದೆ. ಜೀವನದಲ್ಲಿ ಹೊಸ ಆದಾಯದ ಮೂಲಗಳು ಬರಲಿವೆ.

ಮಕರ ರಾಶಿ: 2024ರ ಮೊದಲ ಚಂದ್ರಗ್ರಹಣವು ಮಕರ ರಾಶಿಯವರಿಗೆ ಉತ್ತಮ ಫಲಿತಾಂಶಗಳನ್ನು ನೀಡುತ್ತದೆ. ನೀವು ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದರೆ ಉತ್ತಮ ಯಶಸ್ಸನ್ನು ನೀಡುತ್ತದೆ. ವಿವಿಧ ಕ್ಷೇತ್ರಗಳಲ್ಲಿ ಯಶಸ್ಸನ್ನು ಪಡೆಯುವ ಸಾಧ್ಯತೆಗಳಿವೆ ಮಾನಸಿಕ ಒತ್ತಡ ನಿವಾರಣೆಯಾಗಿ, ಜೀವನದಲ್ಲಿ ಸಂತೋಷ ಲಭಿಸಲಿದೆ.

(ಸೂಚನೆ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ) 

ZEENEWS TRENDING STORIES

By continuing to use the site, you agree to the use of cookies. You can find out more by Tapping this link