Fitness Tips: ನೀವು ಸದಾ ಯಂಗ್ ಆಗಿರಲು ಈ ಸಲಹೆ ಪಾಲಿಸಿರಿ
ಪ್ರತಿಯೊಬ್ಬರೂ ಸದಾ ಫಿಟ್ ಆಗಿರಲು ಬಯಸುತ್ತಾರೆ. ಸದಾ ಯಂಗ್ ಹಾಗೂ ಫಿಟ್ ಆಗಿದ್ದರೆ ಯಾವುದೇ ರೋಗಗಳು ನಮ್ಮನ್ನು ಕಾಡುವುದಿಲ್ಲ. ಹೀಗಾಗಿ ನಾವು ಪ್ರತಿದಿನದ ನಮ್ಮ ದಿನಚರಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಬೇಕು.
ನಾವು ಪ್ರತಿನಿತ್ಯ ಸೇವಿಸುವು ಆಹಾರದಲ್ಲಿ ಹೆಚ್ಚು ಹೆಚ್ಚು ತರಕಾರಿಗಳನ್ನು ಸೇವಿಸುವುದು ಉತ್ತಮ. ತರಕಾರಿಗಳಿಂದ ನಮ್ಮ ಆರೋಗ್ಯ ಉತ್ತಮವಾಗಿರುತ್ತದೆ. ಯಾವುದೇ ರೋಗಗಳು ನಮ್ಮನ್ನು ಕಾಡುವುದಿಲ್ಲ.
ನಾವು ಪ್ರತಿದಿನವೂ ಡ್ರೈಫ್ರೂಟ್ಸ್ ಸೇವಿಸುವ ಅಭ್ಯಾಸವನ್ನು ರೂಢಿಸಿಕೊಳ್ಳಬೇಕು. ಎಲ್ಲಾ ರೀತಿಯ ಪೋಷಕಾಂಶಗಳನ್ನು ಹೊಂದಿರುವ ಒಣಹಣ್ಣುಗಳು ನಾವು ಸದಾ ಯಂಗ್ ಆಗಿರಲು ಸಹಾಯ ಮಾಡುತ್ತವೆ.
ದಿನನಿತ್ಯದ ಜಂಜಡದ ಬದುಕಿನಲ್ಲಿ ನಾವು ವ್ಯಾಯಾಮವನ್ನೇ ಮಾಡುವುದಿಲ್ಲ. ಆದರೆ ಪ್ರತಿದಿನ ನೀವು ಕನಿಷ್ಠ 30 ನಿಮಿಷಗಳ ವ್ಯಾಯಾಮ ಮಾಡಿದ್ರೆ ಫಿಟ್ ಅಂಡ್ ಫೈನ್ ಆಗಿರುತ್ತೀರಿ.
ಪ್ರತಿನಿವೂ ನಗುನಗುತ್ತಾ, ಸಂತೋಷದಿಂದ ಇದ್ದರೆ ನಮ್ಮ ಜೀವನವೂ ಚೆನ್ನಾಗಿರುತ್ತದೆ. ಹೀಗಾಗಿ ಫಿಟ್ ಅಂಡ್ ಫೈನ್ ಆಗಿರಬೇಕೆಂದರೆ ಖುಷಿ ಖುಷಿಯಾಗಿ ಇರುವುದು ತುಂಬಾ ಮುಖ್ಯ.