ಚಳಿಗಾಲದಲ್ಲಿ ಕಾಡುವ ಸಾಮಾನ್ಯ ಗಂಟಲು ನೋವು, ಕೆಮ್ಮಿಗೆ ಅತ್ಯುತ್ತಮ 5 ಮನೆಮದ್ದುಗಳು

Tue, 21 Nov 2023-8:41 am,

ಋತುಮಾನ ಬದಲಾದಂತೆ ಆರೋಗ್ಯ ಸಮಸ್ಯೆಗಳು ಕೂಡ ಹೆಚ್ಚುತ್ತವೆ. ಅದರಲ್ಲೂ, ಚಳಿಗಾಲದಲ್ಲಿ ಕೆಮ್ಮು, ನೆಗಡಿ, ಗಂಟಲು ನೋವಿನಂತಹ ಸಮಸ್ಯೆಗಳು ಸರ್ವೇ ಸಾಮಾನ್ಯ. ಆದರೆ, ಇದಕ್ಕಾಗಿ ಔಷಧಿಗಳ ಮೊರೆ ಹೋಗುವ ಬದಲಿಗೆ ನಿಮ್ಮ ಮನೆಯಲ್ಲಿಯೇ ಕೆಲವು ಸರಳ ಪರಿಹಾರವನ್ನು ಪಡೆಯಬಹುದು. ಈ ಫೋಟೋ ಗ್ಯಾಲರಿಯಲ್ಲಿ ಚಳಿಗಾಲದಲ್ಲಿ ಬಾಧಿಸುವ ಕೆಮ್ಮು, ನೆಗಡಿ, ಗಂಟಲು ನೋವಿಗೆ ಟಾಪ್ 5 ಮನೆ ಮದ್ದುಗಳ ಬಗ್ಗೆ ತಿಳಿಯೋಣ.. 

ಭಾರತೀಯ ಮಸಾಲೆ ಡಬ್ಬಿಯಲ್ಲಿ ಮಸಾಲೆಗಳ ರಾಜ್ ಎಂತಲೇ ಕರೆಯಲಾಗುವ ಕರಿಮೆಣಸನ್ನು ಪುಡಿ ಮಾಡಿ ಅದರಲ್ಲಿ ಜೇನು ತುಪ್ಪವನ್ನು ಬೆರೆಸಿ ತಿನ್ನುವುದರಿಂದ ಮಾಲಿನ್ಯದಿಂದ ಉಂಟಾಗುವ ಉಸಿರಾಟದ ತೊಂದರೆ, ಕಫದಿಂದ ಪರಿಹಾರ ಪಡೆಯಬಹುದು. 

ಉತ್ತಮ ಆರೋಗ್ಯ ವರ್ಧಕವಾದ ಶುಂಠಿ ಸೇವನೆಯಿಂದ ಇದು ನಿಮ್ಮನ್ನು ಸೋಂಕುಗಳ ವಿರುದ್ಧ ರಕ್ಷಿಸುತ್ತದೆ. ಮಾತ್ರವಲ್ಲ, ಚಳಿಗಾಲದಲ್ಲಿ ಶುಂಠಿ ಸೇವಿಸುವುದರಿಂದ ಇದು ನಿಮ್ಮ ರೋಗನಿರೋಧಕ ಶಕ್ತಿಯನ್ನು ಕೂಡ ಬಲಪಡಿಸುತ್ತದೆ.  ಇದರಿಂದಾಗಿ ಋತುಮಾನದ ಶೀತ, ಕೆಮ್ಮು, ನೆಗಡಿಯಂತಹ ಸಮಸ್ಯೆಗಳಿಂದ ದೂರ ಉಳಿಯಬಹುದು. 

ಆಯುರ್ವೇದ ತಜ್ಞರ ಪ್ರ್ಕಾರ, ಬೆಲ್ಲದ ಬಳಕೆ ಅದರಲ್ಲೂ ಚಳಿಗಾಲದಲ್ಲಿ ಬೆಲ್ಲ ಸೇವಿಸುವುದರಿಂದ ಹಲವು ರೋಗಗಳಿಂದ ದೂರ ಉಳಿಯಬಹುದು. ರಾತ್ರಿ ಊಟದ ನಂತರ ಬೆಲ್ಲ ಸೇವಿಸುವುದರಿಂದ ಉಸಿರಾಟದ ಸಮಸ್ಯೆ, ಅಸ್ತಮಾ ಮತ್ತು ಬ್ರಾಂಕೈಟಿಸ್‌ನಂತಹ ಉಸಿರಾಟದ ಕಾಯಿಲೆಗಳಿಂದ ಸುಲಭ ಪರಿಹಾರ ದೊರೆಯಲಿದೆ ಎಂದು ಹೇಳಲಾಗುತ್ತದೆ.  

ಉತ್ತಮ ಆಂಟಿಬಯೊಟಿಕ್ ಎಂದೇ ಬಣ್ಣಿಸಲ್ಪಡುವ ಅರಿಶಿನದಲ್ಲಿ ಕರ್ಕ್ಯುಮಿನ್ ಉರಿಯೂತದ ಗುಣಲಕ್ಷಣಗಳು ಶ್ವಾಸಕೋಶವನ್ನು ಮಾಲಿನ್ಯಕಾರಕಗಳ ವಿಷಕಾರಿ ಪರಿಣಾಮಗಳಿಂದ ರಕ್ಷಿಸಲು ಸಹಾಯ ಮಾಡುತ್ತದೆ. ದೈನಂದಿನ ಆಹಾರದಲ್ಲಿ ಅರಿಶಿನದ ಬಳಕೆಯು ಸಾಮಾನ್ಯ ಶೀತದಿಂದ ಪರಿಹಾರ ನೀಡುತ್ತದೆ. 

ಆಲಿವ್ ಎಣ್ಣೆಯಲ್ಲಿ ವಿಟಮಿನ್ ಇ ಸಮೃದ್ಧವಾಗಿದ್ದು ಇದು ಇದು ಶ್ವಾಸಕೋಶದ ಸಮಸ್ಯೆಗಳನ್ನು ನಿವಾರಿಸುವಲ್ಲಿ ಪ್ರಯೋಜನಕಾರಿ ಆಗಿದೆ.   

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಕೆಲವು ಸಂಶೋಧನೆ ಹಾಗೂ ಸಾಮಾನ್ಯ ಮಾಹಿತಿಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link