ತನ್ನ 16 ವರ್ಷಗಳ ವೃತ್ತಿಜೀವನದಲ್ಲಿ ಒಂದೇ ಒಂದು ನೋ ಬಾಲ್‌ ಎಸೆಯದ ಕ್ರಿಕೆಟಿಗ ಯಾರು ಗೊತ್ತಾ? ಇವರು ಟೀಂ ಇಂಡಿಯಾದವರೇ.. ಯಾರೆಂದು ಗೆಸ್‌ ನೋಡೋಣ

Sat, 12 Oct 2024-2:05 pm,

ಕ್ರಿಕೆಟ್ ಆಟದಲ್ಲಿ ಬೌಲರ್‌ನ ಪಾತ್ರ ಯಾವಾಗಲೂ ಬಹಳ ಮುಖ್ಯವಾಗಿರುತ್ತದೆ. ಬೌಲಿಂಗ್‌ನಲ್ಲಿ ಅದೆಷ್ಟೋ ವಿಶ್ವದಾಖಲೆಗಳನ್ನು ಸೃಷ್ಟಿಸಿದ ದಿಗ್ಗಜರನ್ನು ನಾವೆಲ್ಲರೂ ನೋಡಿರುತ್ತೇವೆ. ಆದರೆ ಇಲ್ಲಿಯವರೆಗೂ ಒಂದೇ ಒಂದು ನೋ ಬಾಲ್ ಕೂಡ ಬೌಲ್ ಮಾಡದ ವಿಶ್ವದ 5 ಬೌಲರ್‌ಗಳ ಬಗ್ಗೆ ನಿಮಗೆ ತಿಳಿದಿದೆಯೇ?

ಪಾಕಿಸ್ತಾನದ ಅತ್ಯಂತ ಯಶಸ್ವಿ ನಾಯಕ ಇಮ್ರಾನ್ ಖಾನ್ ಅವರು ತಮ್ಮ ವೃತ್ತಿಜೀವನದಲ್ಲಿ ಒಂದೇ ಒಂದು ನೋ ಬಾಲ್ ಅನ್ನು ಎಸೆಯದ ವಿಶ್ವದ 5 ಬೌಲರ್‌ಗಳಲ್ಲಿ ಒಬ್ಬರು. ಇಮ್ರಾನ್ ಖಾನ್ 1982 ರಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕರಾಗಿದ್ದರು. ಇಮ್ರಾನ್ ನಾಯಕತ್ವದಲ್ಲಿ ಪಾಕಿಸ್ತಾನವು 1992 ರಲ್ಲಿ ತನ್ನ ಏಕೈಕ ಮತ್ತು ಮೊದಲ ODI ವಿಶ್ವಕಪ್ ಗೆದ್ದಿತು. ಇವರು ಪಾಕಿಸ್ತಾನ ಪರ 88 ಟೆಸ್ಟ್ ಪಂದ್ಯಗಳಲ್ಲಿ 3807 ರನ್ ಹಾಗೂ 362 ವಿಕೆಟ್ ಪಡೆದಿದ್ದಾರೆ.

ಈ ಪಟ್ಟಿಯಲ್ಲಿ ಇಂಗ್ಲೆಂಡ್‌ನ ಲೆಜೆಂಡರಿ ಆಲ್‌ರೌಂಡರ್ ಇಯಾನ್ ಬೋಥಮ್ ಹೆಸರೂ ಇದೆ. ಬೋಥಮ್ ತಮ್ಮ 16 ವರ್ಷಗಳ ವೃತ್ತಿಜೀವನದಲ್ಲಿ ಒಂದೇ ಒಂದು ನೋ ಬಾಲ್ ಬೌಲ್ ಮಾಡಿಲ್ಲ.

ಈ ಪಟ್ಟಿಯಲ್ಲಿ ಡೆನ್ನಿಸ್ ಲಿಲ್ಲಿಯ ಹೆಸರೂ ಇದೆ. ಲಿಲ್ಲಿ ಕೂಡ ತಮ್ಮ ವೃತ್ತಿ ಜೀವನದಲ್ಲಿ ಒಂದೇ ಒಂದು ನೋ ಬಾಲ್ ಬೌಲ್ ಮಾಡಿಲ್ಲ. 70 ಟೆಸ್ಟ್ ಪಂದ್ಯಗಳಲ್ಲಿ 355 ವಿಕೆಟ್ ಕಬಳಿಸಿದ್ದಾರೆ.

ವೆಸ್ಟ್ ಇಂಡೀಸ್ ಮಾಜಿ ಕ್ರಿಕೆಟಿಗ ಲ್ಯಾನ್ಸ್ ಗಿಬ್ಸ್ ಕೂಡ ತಮ್ಮ ವೃತ್ತಿ ಜೀವನದಲ್ಲಿ ಒಂದೇ ಒಂದು ನೋ ಬಾಲ್ ಬೌಲ್ ಮಾಡಿಲ್ಲ. ಈ ಆಫ್-ಸ್ಪಿನ್ನರ್ ವೆಸ್ಟ್ ಇಂಡೀಸ್‌ ಪರ 79 ಟೆಸ್ಟ್ ಮತ್ತು 3 ODI ಪಂದ್ಯಗಳನ್ನು ಆಡಿದ್ದಾರೆ.

1983 ರಲ್ಲಿ ಭಾರತಕ್ಕೆ ಮೊದಲ ವಿಶ್ವಕಪ್ ಗೆದ್ದ ನಾಯಕ ಕಪಿಲ್ ದೇವ್ ಕೂಡ ತಮ್ಮ ವೃತ್ತಿಜೀವನದಲ್ಲಿ ಒಂದೇ ಒಂದು ನೋ ಬಾಲ್ ಅನ್ನು ಎಸೆದಿಲ್ಲ. ಕಪಿಲ್ ಭಾರತ ಪರ 131 ಟೆಸ್ಟ್ ಮತ್ತು 225 ಏಕದಿನ ಪಂದ್ಯಗಳನ್ನು ಆಡಿದ್ದಾರೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link