Independence Day 2022: ದೇಶ ಭಕ್ತಿಯನ್ನು ಎತ್ತಿ ಹಿಡಿಯುವ ಐದು ಚಿತ್ರಗಳಿವು

Wed, 10 Aug 2022-4:21 pm,

ಕಾರ್ಗಿಲ್ ಯುದ್ಧದಲ್ಲಿ ತಮ್ಮ ಶೌರ್ಯಕ್ಕಾಗಿ ಮರಣೋತ್ತರವಾಗಿ ಪರಮವೀರ ಚಕ್ರ ಪ್ರಶಸ್ತಿಯನ್ನು ಪಡೆದ ಕ್ಯಾಪ್ಟನ್ ವಿಕ್ರಮ್ ಬಾತ್ರಾ ಅವರ ಜೀವನವನ್ನು ಆಧರಿಸಿದ 'ಶೆರ್ಷಾ' ಚಲನಚಿತ್ರವು ಇತ್ತೀಚಿನ ದಿನಗಳಲ್ಲಿ ನಿರ್ಮಿಸಲಾದ ಅತ್ಯುತ್ತಮ ಯುದ್ಧ ಚಲನಚಿತ್ರವೆಂದು ಪರಿಗಣಿಸಲಾಗಿದೆ. ಇದನ್ನು ನೋಡಿದರೆ ದೇಶಕ್ಕಾಗಿ ಏನಾದರೂ ಮಾಡಬೇಕೆಂಬ ಉತ್ಸಾಹ ಮೂಡುತ್ತದೆ. ಚಿತ್ರದ ಸಂಗೀತವೂ ತುಂಬಾ ಚೆನ್ನಾಗಿದೆ. ಚಿತ್ರದಲ್ಲಿ ಕ್ಯಾಪ್ಟನ್ ವಿಕ್ರಮ್ ಬಾತ್ರಾ ಪಾತ್ರದಲ್ಲಿ ಸಿದ್ಧಾರ್ಥ್ ಮಲ್ಹೋತ್ರಾ ನಟಿಸಿದ್ದಾರೆ ಮತ್ತು ವಿಕ್ರಮ್ ಸಾವಿನ ನಂತರ ಮದುವೆಯಾಗದ ಅವರ ಗೆಳತಿ ಡಿಂಪಲ್ ಚೀಮಾ ಪಾತ್ರದಲ್ಲಿ ಕಿಯಾರಾ ಅಡ್ವಾಣಿ ನಟಿಸಿದ್ದಾರೆ.  

ವಿಕ್ಕಿ ಕೌಶಲ್ ಮತ್ತು ಯಾಮಿ ಗೌತಮ್ ಅವರ ಚಿತ್ರ 'ಉರಿ: ದಿ ಸರ್ಜಿಕಲ್ ಸ್ಟ್ರೈಕ್' ಈ ಸ್ವಾತಂತ್ರ್ಯೋತ್ಸವದಂದು ವೀಕ್ಷಿಸಲು ಪರಿಪೂರ್ಣ ಆಯ್ಕೆಯಾಗಿದೆ. ಈ ಚಿತ್ರವು ನೈಜ ಘಟನೆಗಳನ್ನು ಆಧರಿಸಿದೆ. ಪುಲ್ವಾಮಾ ದಾಳಿಯ ನಂತರ ಭಯೋತ್ಪಾದಕರ ಮೇಲೆ ಭಾರತ ನಡೆಸಿದ ಸರ್ಜಿಕಲ್ ಸ್ಟ್ರೈಕ್ ಸುತ್ತ ಈ ಚಿತ್ರ ಕತೆಯನ್ನು ಹೆಣೆಯಲಾಗಿದೆ. 

ಮೇಘನಾ ಗುಲ್ಜಾರ್ ನಿರ್ದೇಶನದ ರಾಝಿ ಚಿತ್ರವು ಆಲಿಯಾ ಭಟ್ ವೃತ್ತಿಜೀವನದಲ್ಲಿ ಅತ್ಯಂತ ಅದ್ಭುತವಾದ ಕೃತಿಗಳಲ್ಲಿ ಒಂದಾಗಿದೆ. ಹರೀಂದರ್ ಸಿಂಗ್ ಸಿಕ್ಕಾ ಅವರ ಕಾದಂಬರಿ ಕಾಲಿಂಗ್ ಸೆಹ್ಮತ್ ಆಧರಿಸಿ, ಈ ಚಲನಚಿತ್ರವನ್ನು ನಿರ್ಮಿಸಲಾಗಿದೆ.  ಪಾಕಿಸ್ತಾನದ ಸೇನಾ ಅಧಿಕಾರಿ ಇಕ್ಬಾಲ್ ಸೈಯದ್ ಅವರನ್ನು ಮದುವೆಯಾಗಿ ಭಾರತೀಯ ಗೂಢಚಾರಿಕೆಯಾಗುವ ಯುವ ಕಾಶ್ಮೀರಿ ಹುಡುಗಿ ಸೆಹಮತ್ ಖಾನ್ ಅವರ ಸ್ಪೂರ್ತಿದಾಯಕ ಕಥೆಯಾಗಿದೆ.     

ಅಮೀರ್ ಖಾನ್, ಆರ್ ಮಾಧವನ್, ಸೋಹಾ ಅಲಿ ಖಾನ್ ಅಭಿನಯದ 'ರಂಗ್ ದೇ ಬಸಂತಿ' 16 ವರ್ಷಗಳ ಹಿಂದೆ ಬಿಡುಗಡೆಯಾಡ ಚಿತ್ರ. ಈ ಚಿತ್ರದಲ್ಲಿ ಚಂದ್ರಶೇಖರ್ ಆಜಾದ್ ಮತ್ತು ಭಗತ್ ಸಿಂಗ್ ರಂತಹ ಸ್ವಾತಂತ್ರ್ಯ ಹೋರಾಟಗಾರರಿಗೆ ಶ್ರದ್ಧಾಂಜಲಿ ಸಲ್ಲಿಸಲಾಗಿದೆ.   

2004 ರಲ್ಲಿ ಬಂದ ಸ್ವದೇಸ್ ಶಾರುಖ್ ಖಾನ್ ಅವರ ಅತ್ಯುತ್ತಮ ಚಿತ್ರಗಳಲ್ಲಿ ಒಂದಾಗಿದೆ. ಚಿತ್ರನಿರ್ಮಾಪಕ ಅಶುತೋಷ್ ಗೋವಾರಿಕರ್ ನಿರ್ದೇಶಿಸಿದ ಈ ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಗೆಲ್ಲದಿದ್ದರೂ ಜನರು ಈ ಸಿನಿಮಾವನ್ನು ಬಹಳ ಇಷ್ಟಪಟ್ಟಿದ್ದಾರೆ. ಎನ್‌ಆರ್‌ಐ ನಾಸಾ ವಿಜ್ಞಾನಿ, ತನ್ನ ತಾಯ್ನಾಡಿನ ಪ್ರೀತಿಯಲ್ಲಿ ಬೀಳುವ ಕತೆಯಾಗಿದೆ. ಗ್ರಾಮೀಣ ಭಾರತವನ್ನು ಚಿತ್ರದಲ್ಲಿ ಬಹಳ ಸುಂದರವಾಗಿ ತೋರಿಸಲಾಗಿದೆ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link