ಬೆಳಗಿನ ಉಪಾಹಾರದಲ್ಲಿ ಈ 5 ವಸ್ತುಗಳನ್ನು ಸೇವಿಸಲೇ ಬೇಡಿ, ಆರೋಗ್ಯ ಬಿಗಡಾಯಿಸುವುದೇ ಇಲ್ಲಿಂದ
ಬೆಳಗ್ಗಿನ ಧಾವಂತದಲ್ಲಿ ಸಾಮಾನ್ಯವಾಗಿ ವೈಟ್ ಬ್ರೆಡ್ ಅನ್ನು ಟೀ, ಜಾಮ್ ಅಥವಾ ಬೆಣ್ಣೆಯೊಂದಿಗೆ ತಿನುವ ಅಭ್ಯಾಸ ಅನೇಕ ಮಂದಿಗೆ ಇದೆ. ಆದರೆ ವೈಟ್ ಬ್ರೆಡ್ ಕಡಿಮೆ ಪೋಷಕಾಂಶಗಳನ್ನು ಹೊಂದಿರುತ್ತದೆ. ಅದರ ಸೇವನೆಯು ಜೀರ್ಣಕ್ರಿಯೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಬ್ರೆಡ್ ತಿನ್ನಬೇಕಾದರೆ ವೈಟ್ ಬ್ರೆಡ್ ಬದಲು ಮಲ್ಟಿಗ್ರೇನ್ ಬ್ರೆಡ್ ಸೇವಿಸುವುದು ಒಳ್ಳೆಯದು.
ಹಲವರಿಗೆ ಬೆಳಗ್ಗೆ ಎದ್ದ ನಂತರ ಕಾಫಿ ಕುಡಿಯದಿದ್ದರೆ ಏನನ್ನೊ ಕಳೆದು ಕೊಂಡ ಭಾವ. ಕಾಫಿಯೊಂದಿಗೆ ದಿನ ಆರಂಭಿಸಲೇಬೇಕು. ಕಾಫಿ ಸೇವಿಸಿ ಉಲ್ಲಾಸ ಅನುಭವಿಸಿದರೂ ಅದು ಆರೋಗ್ಯಕ್ಕೆ ಸ್ವಲ್ಪವೂ ಪ್ರಯೋಜನಕಾರಿಯಲ್ಲ. ಖಾಲಿ ಹೊಟ್ಟೆಯಲ್ಲಿ ಕಾಫಿ ಕುಡಿಯುವುದರಿಂದ ಜೀರ್ಣಕ್ರಿಯೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.
ಇತ್ತೀಚಿನ ದಿನಗಳಲ್ಲಿ, ಬೆಳಗಿನ ಉಪಾಹಾರದಲ್ಲಿ ಮೊಸರು ಬದಲಿಗೆ ಫ್ಲೇವರ್ಡ್ ಮೊಸರು ತಿನ್ನುವ ಪ್ರವೃತ್ತಿ ಹೆಚ್ಚಾಗಿದೆ. ಆದರೆ ಈ ಆಹಾರ ಪದಾರ್ಥವು ಹೆಚ್ಚಿನ ಸಕ್ಕರೆ ಅಂಶವನ್ನು ಹೊಂದಿದ್ದು ನಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸಬಹುದು. ಆದ್ದರಿಂದ ಬೆಳಿಗ್ಗೆ ಇದನ್ನು ಸೇವಿಸಬೇಡಿ.
ಬೆಳಿಗ್ಗೆ ಹಣ್ಣುಗಳು ಮತ್ತು ಅವುಗಳ ರಸವನ್ನು ಕುಡಿಯುವುದು ಯಾವಾಗಲೂ ಆರೋಗ್ಯಕ್ಕೆ ಪ್ರಯೋಜನಕಾರಿ. ಆದರೆ ಕೆಲವರು ಮಾರುಕಟ್ಟೆಯಲ್ಲಿ ಲಭ್ಯವಿರುವ ಪ್ಯಾಕೇಜ್ಡ್ ಹಣ್ಣಿನ ರಸವನ್ನು ಸೇವಿಸುತ್ತಾರೆ. ಈ ಅಭ್ಯಾಸ ನಿಮಗೂ ಇದ್ದರೆ ಇಂದೇ ಬಿಟ್ಟು ಬಿಡಿ. ಪ್ಯಾಕೇಜ್ಡ್ ಜ್ಯೂಸ್‌ನಲ್ಲಿ ಪ್ರಿಸರ್ವೇಟಿವ್‌ಗಳು ಮತ್ತು ಸಕ್ಕರೆಯ ಪ್ರಮಾಣವು ಅಧಿಕವಾಗಿರುತ್ತದೆ. ಇದು ಆರೋಗ್ಯವನ್ನು ಹಾಳುಮಾಡುತ್ತದೆ.
ಇತ್ತೀಚಿನ ಕೆಲವು ವರ್ಷಗಳಲ್ಲಿ, ಬೆಳಗಿನ ಉಪಾಹಾರದ ಸಮಯದಲ್ಲಿ ಕಾಂಫ್ಲೇ ಕ್ಸ್, ಫ್ರುಟ್ ಲೂಪ್ಸ್ ಮಂತಾದ ಆಹಾರಗಳನ್ನು ತಿನ್ನುವ ಪ್ರವೃತ್ತಿಯು ಬಹಳಷ್ಟು ಹೆಚ್ಚಾಗಿದೆ. ಆದರೆ ಅವುಗಳನ್ನು ಸಂಸ್ಕರಿಸಿ ತಯಾರಿಸುವುದರಿಂದ ಆರೋಗ್ಯಕ್ಕೆ ಒಳ್ಳೆಯದಲ್ಲ. ಇದರಲ್ಲಿ ಧಾನ್ಯದ ಪ್ರಮಾಣ ಬಹಳ ಕಡಿಮೆ ಮತ್ತು ಸಕ್ಕರೆಯ ಪ್ರಮಾಣ ಹೆಚ್ಚು. ಆದ್ದರಿಂದ, ಇದು ಮಧುಮೇಹ, ಬೊಜ್ಜು ಮತ್ತು ಹೃದಯಾಘಾತದ ಅಪಾಯವನ್ನು ಹೆಚ್ಚಿಸುತ್ತದೆ.
( ಸೂಚನೆ : ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಮನೆಮದ್ದು ಮಾಹಿತಿ ಹಾಗೂ ಸಾಮಾನ್ಯ ಜ್ಞಾನವನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯಕೀಯ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)