ಮೆಹಂದಿ.. ಹೇರ್ ಡೈ ಬೇಕಿಲ್ಲ.. ಬಿಳಿ ಕೂದಲನ್ನು 4 ವಾರಗಳಲ್ಲಿ ಶಾಶ್ವತ ಕಪ್ಪಾಗಿಸುತ್ತೆ ಈ ಬೀಜ .!
ಇತ್ತೀಚಿನ ದಿನಗಳಲ್ಲಿ ಕೂದಲಿಗೆ ಸಂಬಂಧಿಸಿದ ಹಲವಾರು ಸಮಸ್ಯೆಗಳು ಕಾಡುತ್ತಿವೆ. ಚಿಕ್ಕವಯಸ್ಸಿಗೆ ಕೂದಲು ಉದುರುವುದು ಮತ್ತು ಬಿಳಿ ಕೂದಲು ಮುಂತಾದ ಸಮಸ್ಯೆಗಳು ಉದ್ಭವಿಸುತ್ತವೆ. ಬಿಳಿ ಕೂದಲಿಗೆ ನೈಸರ್ಗಿಕವಾಗಿ ಪರಿಹಾರ ಕಂಡುಕೊಳ್ಳಲು ಈ ಮನೆಮದ್ದು ಬಳಸಿ.
ಅಗಸೆ ಬೀಜಗಳು ಕೂದಲನ್ನು ಬೇರುಗಳಿಂದಲೇ ಪೋಷಿಸುತ್ತವೆ. ಈ ಅಗಸೆ ಬೀಜ ಬಳಸಿದರೆ ಸಾಕು ಬಿಳಿ ಕೂದಲು ಕಪ್ಪಾಗುತ್ತದೆ. ಮಾರುಕಟ್ಟೆಯಲ್ಲಿ ಲಭ್ಯವಿರುವ ಯಾವುದೇ ಉತ್ಪನ್ನಗಳನ್ನು ಬಳಸುವ ಅಗತ್ಯವಿಲ್ಲ.
ಅಗಸೆ ಬೀಜದ ಹೇರ್ ಜೆಲ್ ಅನ್ನು ತಲೆಗೆ ಹಚ್ಚಿದರೆ ಕೂದಲಿನ ಹಲವಾರು ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ಇದನ್ನು ನಿಯಮಿತವಾಗಿ ಬಳಸುವುದರಿಂದ ಉತ್ತಮ ಪ್ರಯೋಜನಗಳಿವೆ.
ಅಗಸೆ ಬೀಜದ ಹೇರ್ ಜೆಲ್ ತಯಾರಿಸಲು 1 ಕಪ್ ಅಗಸೆ ಬೀಜ, 3-4 ಕಪ್ ನೀರು, 3-4 ಆಲಿವ್ ಆಯಿಲ್, 1 ಚಮಚ ತೆಂಗಿನ ಎಣ್ಣೆ ಅಥವಾ ವಿಟಮಿನ್ ಇ ಎಣ್ಣೆ ತೆಗೆದುಕೊಳ್ಳಿ.
ಅಗಸೆ ಬೀಜಗಳನ್ನುಒಂದು ಪಾತ್ರೆಯಲ್ಲಿ ನೀರಿನಲ್ಲಿ ಹಾಕಿ ಚೆನ್ನಾಗಿ ಕುದಿಸಬೇಕು. ಇದು ಜೆಲ್ ರೂಪ ಪಡೆದ ಬಳಿಕ ಮೃದುವಾದ ಬಟ್ಟೆಯ ಮೇಲೆ ಹಾಕಿ ಸೋಯಿಸಿ ಬೀಜವನ್ನು ಜೆಲ್‌ನಿಂದ ಬೇರ್ಪಡಿಸಿ.
ಈ ಜೆಲ್‌ನ್ನು ಗಾಜಿನ ಬಾಟಲಿಯಲ್ಲಿ ಶೇಖರಿಸಿಡಿ. ಈಗ ಒಂದು ಬೌಲ್ ತೆಗೆದುಕೊಂಡು ಅದರಲ್ಲಿ 1-2 ಸ್ಪೂನ್ ಅಗಸೆ ಬೀಜದ ಜೆಲ್ ಹಾಕಿ. ಇದಕ್ಕೆ ಆಲಿವ್ ಆಯಿಲ್, ವಿಟಮಿನ್ ಇ ಅಥವಾ ತೆಂಗಿನ ಎಣ್ಣೆ ಸೇರಿಸಿ ಮಿಶ್ರಣ ಮಾಡಿ.
ಈ ಮಿಶ್ರಣವನ್ನು ಕೂದಲಿನ ಬೇರಿನಿಂದ ತುದಿಯವರೆಗೆ ಹಚ್ಚಿಕೊಳ್ಳಿ. 10-15 ನಿಮಿಷ ಬಿಟ್ಟು ತಲೆ ಸ್ನಾನ ಮಾಡಿ. ಈ ಅಗಸೆ ಬೀಜದ ಜೆಲ್‌ನ್ನು 10 - 15 ದಿನಗಳವರೆಗೆ ಫ್ರಿಜ್‌ನಲ್ಲಿ ಸಂಗ್ರಹಿಸಬಹುದು.
ಬಿಳಿ ಕೂದಲಿಗೆ ಅಗಸೆಯ ಈ ಹೇರ್ ಪ್ಯಾಕ್ ಹಾಕುತ್ತ ಬಂದರೆ 4 ವಾರಗಳಲ್ಲಿ ಕೂದಲು ಮರಳಿ ಕಪ್ಪಾಗಲು ಆರಂಭಿಸುತ್ತವೆ. ಬಿಳಿ ಕೂದಲಿನ ಸಮಸ್ಯೆಯನ್ನು ಸುಲಭವಾಗಿ ನಿವಾರಿಸಬಹುದು. ಕೂದಲನ್ನು ದಪ್ಪ ಮತ್ತು ಬಲವಾಗಿಸಲು ಸಹಾಯ ಮಾಡುತ್ತದೆ.
ಗಮನಿಸಿ: ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆ ತೆಗೆದುಕೊಳ್ಳಿ. zee kannada news ಇದನ್ನು ಖಚಿತಪಡಿಸುವುದಿಲ್ಲ.