Flipkart Big Bachat Dhamaal: ಈ ಉತ್ತಮ ಸ್ಮಾರ್ಟ್‌ಫೋನ್‌ ಅನ್ನು ರೂ.400ಕ್ಕಿಂತ ಕಡಿಮೆ ಬೆಲೆಗೆ ಖರೀದಿಸಿ

Fri, 03 Jun 2022-2:37 pm,

ಪೋಕೋ ಸಿ31: Poco ನ ಟ್ರಿಪಲ್ ಕ್ಯಾಮೆರಾ ಸೆಟಪ್ ಸ್ಮಾರ್ಟ್‌ಫೋನ್ ಬೆಲೆ ರೂ 11,999 ಮತ್ತು ಫ್ಲಿಪ್‌ಕಾರ್ಟ್‌ನಲ್ಲಿ ರೂ 9,999 ಗೆ ಮಾರಾಟವಾಗುತ್ತಿದೆ. ನಿಮ್ಮ ಹಳೆಯ ಫೋನ್‌ಗೆ ಬದಲಾಗಿ ಇದನ್ನು ಖರೀದಿಸುವ ಮೂಲಕ ನೀವು ರೂ.9,250 ಉಳಿಸಬಹುದು ಮತ್ತು ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಸಿ ರೂ.500 ಉಳಿಸಬಹುದು. ಈ ಕೊಡುಗೆಗಳ ಲಾಭವನ್ನು ಪಡೆಯಲು ಸಾಧ್ಯವಾದರೆ ಈ ಫೋನ್‌ 249 ರೂ.ಗಳಿಗೆ ಲಭ್ಯವಾಗಲಿದೆ.

ಇನ್ಫಿನಿಕ್ಸ್ ಹಾತ್ 12 ಪ್ಲೇ : Infinix ನಿಂದ 6000mAh ಬ್ಯಾಟರಿ ಸಾಮರ್ಥ್ಯದ ಈ ಸ್ಮಾರ್ಟ್‌ಫೋನ್ ಅನ್ನು ಫ್ಲಿಪ್‌ಕಾರ್ಟ್‌ನಲ್ಲಿ ರೂ.8,499 ಗೆ ಮಾರಾಟ ಮಾಡಲಾಗುತ್ತಿದೆ. ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಸಿ ಈ ಫೋನ್ ಖರೀದಿಯ ಮೇಲೆ 425 ಅನ್ನು ಉಳಿಸಬಹುದು ಮತ್ತು ಎಕ್ಸ್‌ಚೇಂಜ್ ಆಫರ್‌ನೊಂದಿಗೆ ರೂ 7,750 ಉಳಿಸಬಹುದು. ಇದರೊಂದಿಗೆ ಈ ಫೋನ್‌ನ ಬೆಲೆ 324 ರೂ.ಗಳಿಗೆ ಇಳಿಕೆಯಾಗಲಿದೆ.

ಒಪ್ಪೋ ಎ16: 15,990 ರೂಪಾಯಿಗಳ ಈ ಒಪ್ಪೋ ಸ್ಮಾರ್ಟ್‌ಫೋನ್ ಅನ್ನು 12,990 ರೂಪಾಯಿಗಳಿಗೆ ಮಾರಾಟ ಮಾಡಲಾಗುತ್ತಿದೆ. ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ 650 ರೂಪಾಯಿಗಳ ರಿಯಾಯಿತಿಯನ್ನು ನೀಡಲಾಗುತ್ತಿದೆ ಮತ್ತು ಎಕ್ಸ್‌ಚೇಂಜ್ ಆಫರ್‌ನ ಸಂಪೂರ್ಣ ಪ್ರಯೋಜನವನ್ನು ಪಡೆಯುವ ಮೂಲಕ ನೀವು 12,000 ರೂಪಾಯಿಗಳ ರಿಯಾಯಿತಿಯನ್ನು ಪಡೆಯಬಹುದು. ಈ ಕೊಡುಗೆಗಳೊಂದಿಗೆ OPPO A16 ಅನ್ನು ರೂ 340 ಕ್ಕೆ ಖರೀದಿಸಬಹುದು. 

ರೆಡ್ಮಿ 10: 4GB RAM ಮತ್ತು 64GB ಸ್ಟೋರೇಜ್ ಹೊಂದಿರುವ ರೆಡ್ಮಿ 10 ಬೆಲೆ ರೂ 14,999 ಆಗಿದೆ. ಆದರೆ ಫ್ಲಿಪ್‌ಕಾರ್ಟ್‌ನಲ್ಲಿ ರೂ 10,499 ಗೆ ಮಾರಾಟವಾಗುತ್ತಿದೆ. ಈ ಸೇಲ್ ನಲ್ಲಿ ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಕೆದಾರರು 500 ರೂಪಾಯಿಗಳ ತ್ವರಿತ ರಿಯಾಯಿತಿಯನ್ನು ಪಡೆಯುತ್ತಿದ್ದಾರೆ ಮತ್ತು ಎಕ್ಸ್‌ಚೇಂಜ್ ಆಫರ್‌ನ ಸಂಪೂರ್ಣ ಪ್ರಯೋಜನಗಳನ್ನು ಪಡೆಯುವ ಮೂಲಕ ನೀವು ರೂ 9,750 ವರೆಗೆ ಉಳಿಸಬಹುದು. ಈ ರೀತಿಯಾಗಿ, ನೀವು 249 ರೂಪಾಯಿಗೆ ರೆಡ್ಮಿ 10 ಅನ್ನು ಖರೀದಿಸಬಹುದು. 

ಸ್ಯಾಮ್ಸಂಗ್ ಗ್ಯಾಲಕ್ಸಿ ಎಫ್22: ಈ ಶ್ರೇಷ್ಠ ಸ್ಯಾಮ್‌ಸಂಗ್ ಸ್ಮಾರ್ಟ್‌ಫೋನ್‌ನ ಬೆಲೆ 14,999 ರೂ ಆಗಿದೆ. ಆದರೆ ಇದನ್ನು 11,999 ರೂಗಳಿಗೆ ಮಾರಾಟ ಮಾಡಲಾಗುತ್ತಿದೆ. ನೀವು ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ನೊಂದಿಗೆ ರೂ. 600 ವರೆಗೆ ಉಳಿಸಬಹುದು ಮತ್ತು ಎಕ್ಸ್‌ಚೇಂಜ್ ಆಫರ್‌ನೊಂದಿಗೆ ನೀವು ರೂ 11,250 ವರೆಗೆ ರಿಯಾಯಿತಿ ಪಡೆಯಬಹುದು. ಎಲ್ಲಾ ಕೊಡುಗೆಗಳ ಲಾಭವನ್ನು ಪಡೆಯಲು ಸಾಧ್ಯವಾದರೆ ನೀವು ಈ ಸ್ಯಾಮ್‌ಸಂಗ್‌ನ ಸ್ಮಾರ್ಟ್‌ಫೋನ್ ಅನ್ನು ರೂ. 149 ಕ್ಕೆ ಮನೆಗೆ ತೆಗೆದುಕೊಂಡು ಹೋಗಬಹುದು. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link