ಬಡತನದಿಂದ ಬೇಸತ್ತಿದ್ದೀರಾ? ಈ ಐದು ಮಾರ್ಗಗಳಿಂದ ಲಕ್ಷ್ಮೀ ಕಟಾಕ್ಷ ಖಂಡಿತ

Thu, 22 Jul 2021-3:37 pm,

ಶುಕ್ರವಾರದ ದಿನವನ್ನು ಮಹಾ ಲಕ್ಷ್ಮೀಯ ದಿನ ಎಂದು ಕರೆಯಲಾಗುತ್ತದೆ. ಲಕ್ಷ್ಮಿ ಎಂದರೆ ಸಂಪತ್ತಿನ ಅಧಿ ದೇವತೆ.  ಹಿಂದೂ ಕ್ಯಾಲೆಂಡರ್ ಪ್ರಕಾರ, ಈ ದಿನದಂದು ಲಕ್ಷ್ಮಿ ದೇವಿಯ ಹೆಸರಿನಲ್ಲಿ ಉಪವಾಸವನ್ನು ಶೃದ್ಧಾ ಭಕ್ತಿಯಿಂದ ಮಾಡಿದರೆ, ಲಕ್ಷ್ಮೀ ಪ್ರಸನ್ನಳಾಗಿ, ಭಕ್ತರ ಇಚ್ಛೆಯನ್ನು ಈಡೇರಿಸುತ್ತಾಳಂತೆ.  ಶುಕ್ರವಾರ ಮಹಾಲಕ್ಷ್ಮಿಯನ್ನು ಪೂಜಿಸಲು ಅತ್ಯಂತ ಶುಭ ದಿನವೆಂದು ಪರಿಗಣಿಸಲಾಗುತ್ತದೆ.   

ಶುಕ್ರವಾರ ಬಡವರಿಗೆ ಬಿಳಿ ಬಟ್ಟೆ ಅಥವಾ ಅಕ್ಕಿಯಂತಹ ಬಿಳಿ ವಸ್ತುಗಳನ್ನು ದಾನ ಮಾಡಬೇಕು. ಹೀಗೆ ಮಾಡುವುದರಿಂದ  ತಾಯಿಯ ಅನುಗ್ರಹವು ಸದಾ ನಿಮ್ಮ ಮೇಲಿರುತ್ತದೆ. ಇನ್ನು ಶುಕ್ರವಾರ ಹಸುವಿಗೆ ಆಹಾರ ನೀಡಿದರೂ ಲಕ್ಷ್ಮೀ ಸಂತಸಗೊಳ್ಳುತ್ತಾಳಂತೆ. 

ಲಕ್ಷ್ಮೀ ದೇವಿಗೆ ಶುಕ್ರವಾರ ಅಕ್ಕಿ ಅರ್ಪಿಸಬೇಕು. ಆದರೆ ನೆನಪಿರಲಿ, ನೀವು ಅರ್ಪಿಸುವ ಅಕ್ಕಿ ಕಾಳು ಮುರಿದಿರಬಾರದು. ಅಲ್ಲದೆ ಈ ದಿನ ಅಗತ್ಯ ಇದ್ದವರಿಗೆ ಸಹಾಯ ಮಾಡಬೇಕು. ಹೀಗೆ ಮಾಡುವುದರಿಂದ ಅಲ್ಪ ಅವಧಿಯಲ್ಲಿಯೇ ಹಣ ಬರಲು ಆರಂಭವಾಗುತ್ತದೆ. 

 ಮನೆಯೊಳಗೆ ಇರಿಸಲಾಗಿರುವ ಪೊರಕೆಯನ್ನು ಲಕ್ಷ್ಮಿ ದೇವಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಪೊರಕೆಯನ್ನು  ಎಂದಿಗೂ ಕೊಳಕು ಸ್ಥಳದಲ್ಲಿ ಇಡಬಾರದು. ಯಾರ ಪಾದವೂ ಅದರ ಮೇಲೆ ಬೀಳದಂತಹ ಸ್ಥಳದಲ್ಲಿ ಪೊರಕೆಯನ್ನು ಇರಿಸಿ. ಪೊರಕೆ ಹಳೆಯದಾದಾಗ, ಅದನ್ನು ಸುಡುವ ಬದಲು, ಮಣ್ಣಿನಲ್ಲಿ ಹೂಳಬೇಕು.    

ZEENEWS TRENDING STORIES

By continuing to use the site, you agree to the use of cookies. You can find out more by Tapping this link