ಈ ವಿಧಾನಗಳನ್ನು ಅಳವಡಿಸಿಕೊಂಡರೆ ಔಷಧಿಯಿಲ್ಲದೆ ಕರಗಿಸಬಹುದು ಕೊಲೆಸ್ಟ್ರಾಲ್
ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ನಿತ್ಯ ಅಡುಗೆಯಲ್ಲಿ ಬಳಸುವ ನುಗ್ಗೆಕಾಯಿ, ಬೆಳ್ಳುಳ್ಳಿ, ಈರುಳ್ಳಿ, ಸೂಪ್, ಕರಿಬೇವಿನ ಎಲೆಗಳಣು ಬಳಸಬೇಕು.
ರಕ್ತನಾಳಗಳಲ್ಲಿ ಸಂಗ್ರಹವಾಗಿರುವ ಕೊಲೆಸ್ಟ್ರಾಲ್ ಕರಗಿಸಲು ಆರೋಗ್ಯಕರ ಆಹಾರ ಸೇವಿಸುವುದು ಬಹಳ ಅಗತ್ಯ. ಮೇಲೆ ತಿಳಿಸಿದ ಆಹಾರಗಳನ್ನು ತಿನ್ನುವುದು ಇಷ್ಟವಿಲ್ಲದಿದ್ದರೆ, ನೆಲ್ಲಿಕಾಯಿ ಜ್ಯೂಸ್ ಕುಡಿಯಬಹುದು. ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಎರಡು ಚಮಚ ಆಮ್ಲಾ ರಸವನ್ನು ಒಂದು ಚಮಚ ಶುಂಠಿ ರಸದೊಂದಿಗೆ ಬೆರೆಸಿ ಕುಡಿದರೆ ಕೊಲೆಸ್ಟ್ರಾಲ್ ಸಮಸ್ಯೆ ನಿವಾರಣೆಯಾಗುತ್ತದೆ.
ಆರೋಗ್ಯಕರ ಆಹಾರದ ಜೊತೆಗೆ ಆರೋಗ್ಯಕರ ಜೀವನ ಶೈಲಿ ಕೂಡಾ ಮುಖ್ಯ. ಒತ್ತಡವನ್ನು ಕಡಿಮೆ ಮಾಡಲು ಯೋಗಡ ಮೊರೆ ಹೋಗಬಹುದು. ಇದು ನಿಮ್ಮ ಹೃದಯದ ಮೇಲಿನ ಒತ್ತಡವನ್ನು ಕಡಿಮೆ ಮಾಡುತ್ತದೆ.
ಊಟದ ನಂತರ ಕನಿಷ್ಠ ಅರ್ಧ ಗಂಟೆ ನಡೆಯಬೇಕು. ರಕ್ತನಾಳಗಳಲ್ಲಿ ಸಂಗ್ರಹವಾಗದ ಕೊಲೆಸ್ಟ್ರಾಲ್ ಅನ್ನು ವಾಕಿಂಗ್ ಮೂಲಕ ಕರಗಿಸುವುದು ಸಾಧ್ಯವಾಗುತ್ತದೆ.
ಅಧಿಕ ಕೊಲೆಸ್ಟ್ರಾಲ್ ಸಮಸ್ಯೆ ತಪ್ಪಿಸಲು ಸುಲಭವಾದ ಮಾರ್ಗವೆಂದರೆ ಲಘು ಆಹಾರ ಸೇವಿಸುವುದು. ರಾತ್ರಿ ಹಗುರವಾದ ಮತ್ತು ಸುಲಭವಾಗಿ ಜೀರ್ಣವಾಗುವ ಆಹಾರವನ್ನು ಮಾತ್ರ ಸೇವಿಸಬೇಕು. ಇದಲ್ಲದೆ, ಸಿಹಿ ಪದಾರ್ಥಗಳನ್ನು ಕೂಡಾ ಸೇವಿಸಬಾರದು.
( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ZEE NEWS ಅದನ್ನು ಖಚಿತಪಡಿಸುವುದಿಲ್ಲ.)