ಬೇಸಿಗೆಯಲ್ಲಿ ಬಾಂಬ್‌ನಂತೆ ಫೋನ್ ಸ್ಫೋಟಗೊಳ್ಳುವುದನ್ನು ತಪ್ಪಿಸಲು ಈ ಟ್ರಿಕ್ಸ್ ಅನುಸರಿಸಿ
ಹೆಚ್ಚು ಬಿರು ಬಿಸಿಲಿನಲ್ಲಿದ್ದರೇ, ಇಲ್ಲವೇ ಆತಿಯಾಗಿ ಚಾರ್ಜ್ ಮಾಡುವುದರಿಂದ ಫೋನ್ ತುಂಬಾ ಹೀಟ್ ಆಗುತ್ತದೆ. ಇಂತಹ ಸಂದರ್ಭದಲ್ಲಿ ಅದು ಬಾಂಬ್‌ನಂತೆ ಬ್ಲಾಸ್ಟ್ ಆಗುವ ಸಾಧ್ಯತೆ ಇರುವುದರಿಂದ ಸಾಧ್ಯವಾದಷ್ಟು ಸ್ಮಾರ್ಟ್ಫೋನ್ ಅನ್ನು ಶಾಖದಿಂದ ರಕ್ಷಿಸಿ.
ಮೊಬೈಲ್ ಗೆ ಕವರ್ ಹಾಕುವುದರಿಂದ ಅದು ಸುರಕ್ಷಿತವಾಗಿರುತ್ತದೆ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ಆದರೆ, ಬೇಸಿಗೆ ಕಾಲದಲ್ಲಿ ಮೊಬೈಲ್ ಕವರ್ ಹಾಕಿ ಅದನ್ನು ಚಾರ್ಜ್ ಮಾಡುವುದರಿಂದ ಫೋನ್ ಅತಿಯಾಗಿ ಹೀಟ್ ಆಗುತ್ತದೆ. ಇದರಿಂದಾಗಿ ಫೋನ್ ಸ್ಫೋಟಗೊಳ್ಳುವ ಅಪಾಯವೂ ಹೆಚ್ಚು.
ಮೊಬೈಲ್ ಬ್ರೈಟ್ನೆಸ್ ಅನ್ನು ಸಾಧ್ಯವಾದಷ್ಟು ಕಡಿಮೆ ಮಾಡಿ. ಡಿಸ್ಪ್ಲೇ ಬ್ರೈಟ್ನೆಸ್ ಹೆಚ್ಚಾದರೆ ಅದು ಬ್ಯಾಟರಿಯನ್ನು ಹೆಚ್ಚು ಬಳಸುತ್ತದೆ. ಇದರಿಂದಾಗಿ ಪದೇ ಪದೇ ಚಾರ್ಜ್ ಮಾಡುವುದರಿಂದ ಫೋನ್ ಬಿಸಿಯಾಗುತ್ತದೆ.
ಇತ್ತೀಚಿನ ದಿನಗಳಲ್ಲಿ ಫೋನ್ ಇಲ್ಲದೆ ಜೀವನವೇ ಇಲ್ಲ ಎಂಬ ಸ್ಥಿತಿ ಇದೆ. ಆದರೆ, ನಾವು ಫೋನ್ ಗೆ ವಿಶ್ರಾಂತಿಯೇ ನೀಡದೆ ಸದಾ ಚಾಟಿಂಗ್, ವಿಡಿಯೋ, ಗೇಮ್ಸ್ ಎಂದು ಫೋನ್ ಬಳಸುವುದರಿಂದ ಫೋನ್ ಬಿಸಿಯಾಗುತ್ತದೆ. ಇದು ಕೆಲವೊಮ್ಮೆ ಸ್ಫೋಟಕ್ಕೂ ಕಾರಣವಾಗಬಹುದು.
ಗೇಮಿಂಗ್ ಫೋನ್‌ಗಳಲ್ಲಿ ಫೋನ್‌ನ ಕಾರ್ಯಕ್ಷಮತೆಯನ್ನು ಹೆಚ್ಚಿಸುವ ಓವರ್‌ಲಾಕ್ ಕ್ಲೌಡ್ ವೈಶಿಷ್ಟ್ಯವಿರುತ್ತದೆ. ಆದರೆ, ನಿಮ್ಮ ಫೋನ್‌ನಲ್ಲಿ ಅಂತಹ ವೈಶಿಷ್ಟ್ಯ ಇದೆಯೇ ಅಥವಾ ಇಲ್ಲವೇ ಪರಿಶೀಲಿಸದೆ ನಿತ್ಯ ಗಂಟೆಗಟ್ಟಲೆ ಗೇಮ್ ಆಡುವುದರಿಂದ ಫೋನ್ ಸಿಡಿಯುವ ಸಾಧ್ಯತೆ ಇರುತ್ತದೆ.