Weight loss food : ವೇಗವಾಗಿ ತೂಕವನ್ನು ಕಳೆದುಕೊಳ್ಳಬೇಕೇ..? ಹಾಗಿದ್ರೆ, ಈ ಕಾಳುಗಳನ್ನು ತಿನ್ನಿ
ಮಸೂರ್ ದಾಲ್ : ಇದು ಆರೋಗ್ಯಕ್ಕೆ ಪ್ರಯೋಜನಕಾರಿಯಾದ ವಿವಿಧ ಪೋಷಕಾಂಶಗಳಲ್ಲಿ ಸಮೃದ್ಧವಾಗಿದೆ. ಈ ಬೆಳೆ ದಿನನಿತ್ಯ ನಿಮ್ಮ ದೇಹಕ್ಕೆ ಬೇಕಾದ ಫೈಬರ್ ಅಗತ್ಯಗಳಲ್ಲಿ 32 ಪ್ರತಿಶತವನ್ನು ಒದಗಿಸುತ್ತದೆ. ಈ ದಾಲ್, ತೂಕ ನಷ್ಟ, ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಮತ್ತು ಮಧುಮೇಹದಂತಹ ಕಾಯಿಲೆಗಳಿಂದ ನಿಮ್ಮನ್ನು ರಕ್ಷಿಸುತ್ತದೆ.
ಕಡಲೆ : ಕಡಲೆಯನ್ನು ಕಾಬುಲಿ ಚನಾ ಎಂದೂ ಕರೆಯುತ್ತಾರೆ. ಇದು ಪ್ರೋಟೀನ್, ವಿಟಮಿನ್, ಕ್ಯಾಲ್ಸಿಯಂ, ಪೊಟ್ಯಾಸಿಯಮ್ ಮತ್ತು ಮೆಗ್ನೀಸಿಯಮ್ನಂತಹ ಪೋಷಕಾಂಶಗಳ ಹೊಂದಿದೆ. ಈ ಎಲ್ಲಾ ಪೋಷಕಾಂಶಗಳು ಆರೋಗ್ಯಕರ ಮತ್ತು ಬಲವಾದ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತವೆ. ಮೂಳೆಗಳನ್ನು ಸಹ ಬಲಪಡಿಸುತ್ತವೆ. ಹೆಚ್ಚುವರಿಯಾಗಿ ತೂಕ ನಷ್ಟಕ್ಕೆ ಕಾರಣವಾಗುತ್ತದೆ.
ರಾಜ್ಮಾ ಕಾಳು : ಪ್ರೋಟೀನ್ ಮತ್ತು ಫೈಬರ್ ಸಮೃದ್ಧವಾಗಿರುವ ರಾಜ್ಮಾ ತೂಕ ನಷ್ಟಕ್ಕೆ ಅತ್ಯುತ್ತಮ ಆಹಾರವಾಗಿದೆ. ಇದರಲ್ಲಿ ಗ್ಲೈಸೆಮಿಕ್ ಇಂಡೆಕ್ಸ್ ಕೂಡ ಕಡಿಮೆಯಾಗಿದ್ದು, ಇದು ಹೃದಯವನ್ನು ಆರೋಗ್ಯಕರವಾಗಿಡಲು ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
ಮಾಂಸಾಹಾರಿಗಳು ಪ್ರತಿದಿನ ಕನಿಷ್ಠ 30 ಗ್ರಾಂ ಬೇಳೆಕಾಳುಗಳನ್ನು ಸೇವಿಸಬೇಕು ಮತ್ತು ಸಸ್ಯಾಹಾರಿಗಳು ದಿನಕ್ಕೆ ಕನಿಷ್ಠ 60 ಗ್ರಾಂ ಬೇಳೆಕಾಳುಗಳನ್ನು ಸೇವಿಸಬೇಕು ಎಂದು ತಜ್ಞರು ಹೇಳುತ್ತಾರೆ. ನಿಮ್ಮ ಊಟದೊಂದಿಗೆ ನೀವು ಯಾವುದೇ ಬೇಳೆಕಾಳುಗಳನ್ನು ತಿನ್ನುತ್ತೀರೋ, ಅವೆಲ್ಲವೂ ಆರೋಗ್ಯಕರ. ಅಲ್ಲದೆ, ಅವು ನಿಮ್ಮ ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ.