Calcium Rich Food: ಈ ಆಹಾರವನ್ನು ಸೇವಿಸುತ್ತಾ ಬಂದರೆ ನೀಗುವುದು ದೇಹದಲ್ಲಿನ ಕ್ಯಾಲ್ಸಿಯಂ ಕೊರತೆ
ದೇಹದಲ್ಲಿನ ಕ್ಯಾಲ್ಸಿಯಂ ಕೊರತೆಯನ್ನು ನೀಗಿಸಲು, ಪ್ರತಿದಿನ ಹಾಲನ್ನು ಸೇವಿಸಬೇಕು. ಬೆಳಿಗ್ಗೆ ಹಾಲು ಸೇವಿಸುವುದರಿಂದ ದೇಹವು ಬಲಗೊಳ್ಳುತ್ತದೆ.ದೇಹದ ಎಲ್ಲಾ ಆಯಾಸವೂ ದೂರವಾಗುತ್ತದೆ. ರಾತ್ರಿ ಮಲಗುವ ಮುನ್ನವೂ ಹಾಲು ಕುಡಿಯಬೇಕು.
ಪಾಲಕ್ ಸೊಪ್ಪು ದೇಹದಲ್ಲಿನ ಕ್ಯಾಲ್ಸಿಯಂ ಕೊರತೆಯನ್ನು ನೀಗಿಸುತ್ತದೆ. ದೇಹದಲ್ಲಿ ಕ್ಯಾಲ್ಸಿಯಂ ಸರಿ ಪ್ರಮಾಣದಲ್ಲಿ ಇರಬೇಕಾದರೆ ವಾರಕ್ಕೆ 3-4 ಬಾರಿಯಾದರೂ ಪಾಲಕ್ ಸೇವಿಸಬೇಕು. ಪಾಲಕ್ ಸೊಪ್ಪಿನಲ್ಲಿ 99 ಮಿಲಿ ಕ್ಯಾಲ್ಸಿಯಂ ಅಡಗಿರುತ್ತದೆ.
ಕಿವಿ ಹಣ್ಣನ್ನು ಜನರು ತುಂಬಾ ಇಷ್ಟಪಡುತ್ತಾರೆ.ಈ ಹಣ್ಣಿನಲ್ಲಿ ವಿಟಮಿನ್ ಸಿ ಸಮೃದ್ಧವಾಗಿರುತ್ತದೆ. ಪ್ರತಿದಿನ ಎರಡು-ಮೂರು ಕಿವಿ ಹಣ್ಣಿನ ಜ್ಯೂಸ್ ಅನ್ನು ಕುಡಿಯಬೇಕು. ಇದು ದೇಹದಲ್ಲಿನ ಕ್ಯಾಲ್ಸಿಯಂ ಕೊರತೆಯನ್ನು ನೀಗಿಸುತ್ತದೆ.
ದೇಹದಲ್ಲಿ ಕ್ಯಾಲ್ಸಿಯಂ ಕೊರತೆಯಿಂದಾಗಿ, ಅನೇಕ ರೋಗಗಳಿಗೆ ತುತ್ತಾಗಬೇಕಾಗುತ್ತದೆ.ದೇಹದಲ್ಲಿ ಕ್ಯಾಲ್ಸಿಯಂ ಕಡಿಮೆಯಾಗಿದೆ ಎಂದಾದರೆ ಕ್ಯಾಲ್ಸಿಯಂ ಹೇರಳವಾಗಿರುವ ಆಹಾರಗಳನ್ನು ಸೇವಿಸಬೇಕು. ಇಂಥಹ ಆಹಾರಗಳಲ್ಲಿ ಕಿತ್ತಳೆ ಹಣ್ಣು ಕೂಡಾ ಒಂದು. ಕಿತ್ತಳೆ ರಸವನ್ನು ಕುಡಿದರೂ ಪ್ರಯೋಜನವಾಗುವುದು.
ದೇಹದಲ್ಲಿ ಕ್ಯಾಲ್ಸಿಯಂ ಕೊರತೆಯಿಂದಾಗಿ, ಸ್ನಾಯುಗಳಲ್ಲಿ ನೋವು, ಮಲಬದ್ಧತೆ ಮತ್ತು ನರಗಳ ಹಿಗ್ಗುವಿಕೆ ಮುಂತಾದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಪ್ರತಿದಿನ ಬಾದಾಮಿ ತಿನ್ನಬೇಕು. ದಿನಕ್ಕೆ ಎರಡು ಬಾದಾಮಿ ತಿನ್ನುವುದರಿಂದ ಮೆದುಳು ಕೂಡಾ ಚುರುಕಾಗುತ್ತದೆ. ಇದು ಮೂಳೆಗಳ ಆರೋಗ್ಯಕ್ಕೂ ಪ್ರಯೋಜನಕಾರಿ. (ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.)