ಚಪ್ಪಟೆಯಾದ ಹೊಟ್ಟೆಗಾಗಿ ಡಯಟ್ ಮಾಡಿ ಅಲ್ಲ, ಇವುಗಳನ್ನು ತಿಂದು ಒಂದೇ ವಾರದಲ್ಲಿ ತೂಕ ಇಳಿಸಿ
ಆಹಾರ ಬಿಟ್ಟು ಡಯಟ್ ಮಾಡಿ ತೂಕ ಇಳಿಸುವುದು ತಕ್ಷಣಕ್ಕೆ ಪರಿಹಾರ ಎಂದು ತೋರಿದರೂ ಭವಿಷ್ಯದಲ್ಲಿ ಇದರ ಅಡ್ಡಪರಿಣಾಮಗಳು ಗೋಚರಿಸುತ್ತವೆ. ಇದಕ್ಕಾಗಿ ಊಟ ಬಿಡುವುದಲ್ಲ ಸೂಕ್ತ ಆಹಾರ ಸೇವಿಸುವುದು ಅವಶ್ಯಕ.
ನೀವು ಮಾಂಸಾಹಾರಿಗಳಾಗಿದ್ದರೆ ನಿತ್ಯ ಚಿಕನ್ ನಿಂದ ತಯಾರಿಸಿದ ಭಕ್ಷ್ಯಗಳನ್ನು ಸೇವಿಸಿ. ಇದರಲ್ಲಿ ಪ್ರೊಟೀನ್ ಹೆಚ್ಚಾಗಿದ್ದು ದೇಹದಲ್ಲಿನ ಅಧಿಕ ಕೊಬ್ಬು ನಿವಾರಣೆಗೆ ಅತ್ಯುತ್ತಮ ಆಹಾರ.
ನೀವು ಸಸ್ಯಾಹಾರಿಗಳಾಗಿದ್ದರೆ ಕ್ಯಾಸೀನ್‌ನಲ್ಲಿ ಸಮೃದ್ಧವಾಗಿರುವ ಪನೀರ್ ಅನ್ನು ನಿಮ್ಮ ದೈನಂದಿನ ಆಹಾರದಲ್ಲಿ ಸೇರಿಸಿ. ಇದು ನಿಧಾನವಾಗಿ ಜೀರ್ಣವಾಗುವ ಹಾಗೂ ಕೊಬ್ಬನ್ನು ಕರಗಿಸಲು ಸಹಾಯಕವಾದ ಆಹಾರ.
ನಿತ್ಯ ಬೆಳಗಿನ ಉಪಹಾರದಲ್ಲಿ ಅಮೈನೋ ಆಮ್ಲಗಳೊಂದಿಗೆ ಸಂಪೂರ್ಣ ಪ್ರೋಟೀನ್ ಒದಗಿಸುವ ಮೊಟ್ಟೆಯನ್ನು ಸೇವಿಸುವುದರಿಂದ ಕೆಲವೇ ದಿನಗಳಲ್ಲಿ ಚಪ್ಪಟೆಯಾದ ಹೊಟ್ಟೆ ನಿಮ್ಮದಾಗುತ್ತದೆ.
ಅತ್ಯುತ್ತಮ ಗುಣಮಟ್ಟದ ಪ್ರೋಟೀನ್ ಮತ್ತು ಒಮೆಗಾ-3 ಕೊಬ್ಬಿನಾಮ್ಲಗಳು ಹೇರಳವಾಗಿರುವ ಮೀನಿನ ಸೇವನೆಯಿಂದ ಆರೋಗ್ಯಕರವಾಗಿ ತೂಕ ಇಳಿಸಬಹುದು.
ಮಸೂರ್ ದಾಲ್ ಸಸ್ಯ ಆಧಾರಿತ ಅತ್ಯುತ್ತಮ ಪ್ರೊಟೀನ್ ಮೂಲವಾಗಿದ್ದು ಇದು ಸುಲಭವಾಗಿ ಜೀರ್ಣವಾಗುವ ಹಾಗೂ ದೇಹಕ್ಕೆ ಅಗತ್ಯ ಪೋಷಕಾಂಶಗಳನ್ನು ಒದಗಿಸುವ ಮೂಲಕ ಹೊಟ್ಟೆಯ ಫ್ಯಾಟ್ ಕರಗಿಸಲು ಸಹಾಯಕ.
ಅತ್ಯಂತ ಶ್ರೀಮಂತ ಪ್ರೋಟೀನ್‌ನ ಮೂಲ ಎಂತಲೇ ಹೇಳಲಾಗುವ ಸೋಯಾ ಚಂಕ್ಸ್ ಅನ್ನು ಮಧ್ಯಾಹ್ನ ಊಟದ ಬದಲಿಗೆ ತಿನ್ನುವುದರಿಂದ ಇದು ದೇಹಕ್ಕೆ ಅಗತ್ಯ ಪೋಷಕಾಂಶ ನೀಡುವ ಜೊತೆಗೆ ಅಧಿಕ ಫ್ಯಾಟ್ ಕರಗಿಸಲು ನೆರವಾಗುತ್ತದೆ.
ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ.ಈ ಮಾಹಿತಿಯ ಹೊಣೆಯನ್ನು ಜೀ ಕನ್ನಡ ನ್ಯೂಸ್ ಹೇಳಿಕೊಳ್ಳುವುದಿಲ್ಲ.