ಈ ಕಾರಣಗಳಿಗಾಗಿ ಮೇ 31ರೊಳಗೆ ನಿಮ್ಮ ಖಾತೆಯಲ್ಲಿರಲಿ 342 ರೂ.

Sun, 23 May 2021-4:53 pm,

ಮೋದಿ ಸರ್ಕಾರದ ಈ ಯೋಜನೆಗಳಲ್ಲಿ ಬ್ಯಾಂಕ್ ಖಾತೆದಾರರು ನೋಂದಾಯಿಸಿಕೊಂಡಿದ್ದರೆ, ಎರಡೂ ಯೋಜನೆಗಳ ಅಡಿಯಲ್ಲಿ 4 ಲಕ್ಷ ರೂ.ಗಳ ವಿಮಾ ರಕ್ಷಣೆಯನ್ನು ಪಡೆಯುತ್ತಾರೆ. ಈ ಯೋಜನೆಗಳ ಪ್ರೀಮಿಯಂ ಬಗ್ಗೆ ಹೇಳುವುದಾದರೆ, ಖಾತೆದಾರರು PMJJBYಗೆ  ವಾರ್ಷಿಕವಾಗಿ 330 ರೂ ಮತ್ತು PMSBYಗೆ ವಾರ್ಷಿಕವಾಗಿ 12 ರೂಯನ್ನು ಕಡಿತಗೊಳಿಸಲಾಗುತ್ತದೆ. ಈ ಹಣವನ್ನು ಖಾತೆಯಿಂದ ವಾರ್ಷಿಕವಾಗಿ ಕಡಿತಗೊಳಿಸಲಾಗುತ್ತದೆ. ಈ ಎರಡೂ ಯೋಜನೆಗಳನ್ನು ಮೇ 31 ರವರೆಗೆ ನಡೆಯುತ್ತದೆ. ಅಂದರೆ, ಈ ಯೋಜನೆಗಳ ಅಡಿಯಲ್ಲಿ ವಾರ್ಷಿಕ ಪ್ರೀಮಿಯಂ ಅನ್ನು ಪ್ರತಿ ವರ್ಷ ಮೇ ತಿಂಗಳಲ್ಲಿ ಕಡಿತಗೊಳಿಸಲಾಗುತ್ತದೆ. ನಿಮ್ಮ ಖಾತೆಯಲ್ಲಿ 342 ರೂಗಳನ್ನು ಹೊಂದಿಲ್ಲದಿದ್ದರೆ, ವಿಮೆಯನ್ನು ರದ್ದುಗೊಳಿಸಲಾಗುತ್ತದೆ.

ಪ್ರಧಾನಿ ಜೀವನ್ ಜ್ಯೋತಿ ಬಿಮಾ ಯೋಜನೆ (PMJJBY) ಅಡಿಯಲ್ಲಿ 55 ವರ್ಷ ವಯಸ್ಸಿನವರೆಗೆ ಲೈಫ್ ಕವರ್ ಸಿಗುತ್ತದೆ. ಈ ಯೋಜನೆಯಲ್ಲಿ ವಿಮಾದಾರನ ಮರಣದ ನಂತರ, ಅವನ ನಾಮಿನಿಗೆ 2 ಲಕ್ಷ ರೂಪಾಯಿಗಳ ಹಕ್ಕು ಸಿಗುತ್ತದೆ. ಈ ಯೋಜನೆಯಲ್ಲಿ 18 ರಿಂದ 50 ವರ್ಷ ವಯಸ್ಸಿನವರು ನೋಂದಾಯಿಸಬಹುದು. ಪಿಎಂಜೆಜೆಬಿವೈ ಯೋಜನೆಯನ್ನು ಎಲ್ಐಸಿ ಮತ್ತು ಇತರ ಖಾಸಗಿ ಜೀವ ವಿಮಾ ಕಂಪನಿಗಳ ಮೂಲಕ ನಿರ್ವಹಿಸಲಾಗುತ್ತದೆ. 

ಪ್ರಧಾನ್ ಮಂತ್ರಿ ಸುರಕ್ಷಾ ಬಿಮಾ ಯೋಜನೆ (PMSBY) 2  ಲಕ್ಷದ ಕವರ್ ಒಳಗೊಂಡಿದೆ.  ಪಿಎಂ ಸುರಕ್ಷಾ ಬಿಮಾ ಯೋಜನೆ ಆಕ್ಸಿಡೆಂಟಲ್ ಇನ್ಶುರೆನ್ಸ್ ಯೋಜನೆಯಾಗಿದ್ದು, 2 ಲಕ್ಷ ರೂಪಾಯಿಗಳ ಕವರ್ ಕೂಡ ಇದೆ. ಇದರಲ್ಲಿ ವಿಮೆದಾರರ ಸಾವು ಸಂಭವಿಸಿದರೆ, ಅಥವಾ ವಿಮಾದಾನ ವಿಕಲಾಂಗನಾದರೆ,  2 ಲಕ್ಷ ರೂಪಾಯಿಗಳ ಪರಿಹಾರ ನೀಡಲಾಗುತ್ತದೆ. ವಿಮೆದಾರನು ಭಾಗಶಃ ವಿಕಲಾಂಗನಾದರೆ, 1 ಲಕ್ಷ ರೂ.ಗಳನ್ನು ಈ ಯೋಜನೆಯಡಿ, ನೀಡಲಾಗುತ್ತದೆ.  

ಕೇಂದ್ರ ಸರ್ಕಾರದ PMJJBY  ಮತ್ತು PMSBYನಲ್ಲಿ ನೋಂದಣಿಗಾಗಿ, ನೀವು ಯಾವುದೇ ಹತ್ತಿರದ ಬ್ಯಾಂಕ್‌ಗೆ ಅರ್ಜಿ ಸಲ್ಲಿಸಬಹುದು. ಸ್ನೇಹಿತರು ಅಥವಾ ವಿಮಾ ಏಜೆಂಟರ ಸಹಾಯದಿಂದ ಬ್ಯಾಂಕುಗಳು ಈ ಯೋಜನೆಯಲ್ಲಿ ನೋಂದಾಯಿಸಿಕೊಳ್ಳಬಹುದು. ಸರ್ಕಾರಿ ವಿಮಾ ಕಂಪನಿಗಳು ಮತ್ತು ಬ್ಯಾಂಕುಗಳ ಜೊತೆಗೆ ಅನೇಕ ಖಾಸಗಿ ವಿಮಾ ಕಂಪನಿಗಳು ಈ ಯೋಜನೆಗಳನ್ನು ಒದಗಿಸುತ್ತಿವೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link