Dhanshakti Yog 2024: ಮಂಗಳ ಹಾಗೂ ಶುಕ್ರರ ಕೃಪೆಯಿಂದ ಧನಶಕ್ತಿ ಯೋಗ ರಚನೆ, ಶುಕ್ರದೆಸೆಯಿಂದ ಈ ಜನರಿಗೆ ಅಪಾರ ಧನ ಸಂಪತ್ತು ಪ್ರಾಪ್ತಿ!
ಜೋತಿಷ್ಯ ಶಾಸ್ತ್ರದ ಪ್ರಕಾರ ಫೆಬ್ರುವರಿ 12 ರಂದು ಶುಕ್ರ ಮಕರ ರಾಶಿಗೆ ಪ್ರವೇಶಿಸಲಿದ್ದಾನೆ. ಮಕರ ರಾಶಿಯಲ್ಲಿ ಈಗಾಗಲೇ ಮಂಗಳ ಇರುವ ಕಾರಣ, ಅಲ್ಲಿ ಧನಶಕ್ತಿ ಯೋಗ ರಚನೆಯಾಗುತ್ತಿದೆ. ಈ ಶುಭ ಯೋಗ ಮಾರ್ಚ್ 7, 2024 ರವರೆಗೆ ಇರಲಿದೆ. ಈ ಯೋಗ ನಿರ್ಮಾಣವಾಗುವುದರಿಂದ ಯಾವ ಅದೃಷ್ಟವಂತ ರಾಶಿಗಳಿಗೆ ಲಾಭವಾಗಲಿದೆ ತಿಳಿದುಕೊಳ್ಳೋಣ ಬನ್ನಿ,
ಮೇಷ ರಾಶಿ: ನಿಮ್ಮ ಜಾತಕದ ದಶಮ ಭಾವದಲ್ಲಿ ಈ ಮೈತ್ರಿ ನೆರವೇರುತ್ತಿದೆ. ಇದರಿಂದ ನಿಮಗೆ ಸಾಕಷ್ಟು ಪ್ರಸಿದ್ಧಿ, ಗುರುತಿನ ಜೊತೆಗೆ ಭಾರಿ ಸ್ಥಾನಮಾನ ಲಭಿಸಲಿದೆ. ಒಂದು ವೇಳೆ ನೀವು ಗಮನವನ್ನು ಕೇಂದ್ರೀಕರಿಸಿದರೆ ವೃತ್ತಿಯಲ್ಲಿ ನಿಮಗೆ ಅಪಾರ ಉನ್ನತಿಯ ಪ್ರಾಪ್ತಿಯಾಗುವ ಪ್ರಬಲಯೋಗವಿದೆ. ಆರ್ಥಿಕ ಸ್ಥಿತಿ ಭಾರಿ ಬಲವಾಗಲಿದೆ =. ಆದಾಯದ ಹೊಸ ಮಾರ್ಗಗಳು ತೆರೆದುಕೊಳ್ಳಲಿವೆ. ಈ ಅವಧಿಯಲ್ಲಿ ನಿಮ್ಮ ವ್ಯವಹಾರದ ವಿಚಾರ ಉತ್ತಮವಾಗಿರಲಿದೆ. ಸಂಬಂಧಗಳಲ್ಲಿ ಸಕಾರಾತ್ಮಕ ಬದಲಾವಣೆಗಳಾಗಲಿವೆ. ಆರೋಗ್ಯದ ಕುರಿತು ಹೇಳುವುದಾದರೆ, ಆರೋಗ್ಯ ಉತ್ತಮವಾಗಿರಲಿದೆ.
ವೃಷಭ ರಾಶಿ: ನಿಮ್ಮ ಜಾತಕದ ನವಮ ಭಾವದಲ್ಲಿ ಈ ಮೈತ್ರಿ ನೆರವೇರುತ್ತಿದೆ. ಇದರಿಂದ ಆಧ್ಯಾತ್ಮದತ್ತ ನಿಮ್ಮ ಒಲವು ಹೆಚ್ಚಾಗಲಿದೆ. ವೃತ್ತಿಯಲ್ಲಿ ಪ್ರಗತಿ ಸಾಧಿಸುವ ಅವಕಾಶಗಳು ಒದಗಿಬರಲಿವೆ. ಇದರಿಂದ ನೀವು ನಿಮ್ಮ ಗುರಿ ಸಾಧಿಸುವಲ್ಲಿ ಯಶಸ್ವಿಯಾಗಿವಿರಿ. ಹೊಶ ಅವಕಾಶಗಳು ನಿಮಗೆ ಪ್ರಾಪ್ತಿಯಾಗಲಿವೆ, ಹೊಸ ಬಿಸ್ನೆಸ್ ಆರಂಭಿಸಲು ಇದು ಸಕಾಲವಾಗಿದೆ. ವಿದೇಶ ಯಾತ್ರೆಯ ಸೌಭಾಗ್ಯ ಪ್ರಾಪ್ತಿಯಾಗಳಿವೆ. ಆರ್ಥಿಕ ಸ್ಥಿತಿ ಉತ್ತಮವಾಗಿರಲಿದೆ. ನೀವು ಕೈಗೊಂಡ ಒಳ್ಳೆಯ ವಿತ್ತೀಯ ನಿರ್ಣಯದ ಲಾಭ ನಿಮಗೆ ಸಿಗಲಿದೆ. ಆರ್ಥಿಕ ಸ್ಥಿತಿ ಇದರಿಂದ ಸಾಕಷ್ಟು ಬಲಿಷ್ಠವಾಗಲಿದೆ. ಆರೋಗ್ಯಕ್ಕೆ ಸಂಬಂದಿಸಿದಂತೆ ಸ್ವಲ್ಪ ಎಚ್ಚರಿಕೆ ವಹಿಸಬೇಕಾಗಬಹುದು.
ಕನ್ಯಾ ರಾಶಿ: ನಿಮ್ಮ ಗೋಚರ ಜಾತಕದ ಪಂಚಮ ಭಾವದಲ್ಲಿ ಈ ಧನಶಕ್ತಿ ಯೋಗ ರಚನೆಯಾಗುತ್ತಿದ್ದು, ನಿಮಗೆ ಸಾಕಷ್ಟು ಒಳ್ಳೆಯ ಫಲಗಳನ್ನು ನೀಡಲಿದೆ. ಶುಕ್ರನಾ ಸ್ಥಿತಿ ನಿಮ್ಮ ಜೀವನದಲ್ಲಿ ಸಾಕಷ್ಟು ಖುಷಿಗಳನ್ನು ತುಂಬಲಿದೆ. ಆರ್ಥಿಕ ಸ್ಥಿತಿ ಗಟ್ಟಿಯಾಗಲಿದೆ ಮತ್ತು ಆದಾಯದ ಹೊಸ ಮಾರ್ಗಗಳು ತೆರೆದುಕೊಳ್ಳಲಿವೆ. ಜೀವನದಲ್ಲಿ ಸುಖ ಸಮೃದ್ಧಿ ಹೆಚ್ಚಾಗಲಿದೆ, ಕಾರ್ಯಕ್ಷೇತ್ರದಲ್ಲಿ ನಿಮ್ಮ ಕೆಲಸಕ್ಕೆ ಪ್ರಶಂಸೆ ವ್ಯಕ್ತವಾಗಲಿದೆ. ಮಕ್ಕಳ ಕಡೆಯಿಂದಲೂ ಕೂಡ ಸಂತಸದ ಸುದ್ದಿ ಸಿಗಲಿದೆ. ಮಕ್ಕಳೊಂದಿಗೆ ಉತ್ತಮ ಕಾಲವನ್ನು ಕಳೆಯುವಿರಿ. ಆರೋಗ್ಯ ಉತ್ತಮವಾಗಿರಲಿದೆ.
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)