ವಿಪರೀತ ರಾಜಯೋಗ ನಿರ್ಮಾಣ, ಗ್ರಹಗಳ ರಾಜಕುಮಾರನ ಕೃಪೆಯಿಂದ, ಈ ಜನರ ಭಾಗ್ಯದಲ್ಲಿ ಭಾರಿ ಬದಲಾವಣೆ-ಧನಲಾಭ!
Vipareet Rajyog: 2023: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ವಕ್ರ ಭಾವದಲ್ಲಿ ಬುಧ ಮಹಾವಿಪರೀತ ರಾಜಯೋಗ ರೂಪಿಸಿದ್ದಾನೆ. ಇದರಿಂದ ಒಟ್ಟು ಮೂರು ರಾಶಿಗಳ ಜಾತಕದ ಜನರಿಗೆ ಭಾರಿ ಧನಲಾಭ ಹಾಗೂ ಉನ್ನತಿಯ ಯೋಗ ನಿರ್ಮಾಣಗೊಂಡಿದೆ. ಬನ್ನಿ ಆ ಅದೃಷ್ಟವಂತ ರಾಶಿಗಳು ಯಾವುವು ತಿಳಿದುಕೊಳ್ಳೋಣ,
ಮಿಥುನ ರಾಶಿ: ಮಹಾ ವಿಪರೀತ ರಾಜಯೋಗ ಮಿಥುನ ರಾಶಿಯ ಜಾತಕದವರ ಪಾಲಿಗೆ ಲಾಭಪ್ರದ ಸಾಬೀತಾಗಲಿದೆ. ಏಕೆಂದರೆ ನಿಮ್ಮ ಜಾತಕಕ್ಕೆ ಅಧಿಪತಿಯಾಗಿರುವ ಬುಧ ನಿಮ್ಮ ಗೋಚರ ಜಾತಕದ ತೃತೀಯ ಭಾವದಲ್ಲಿ ಸ್ಥಿತನಾಗಿದ್ದಾನೆ. ಇನ್ನೊಂದೆಡೆ ಆಗಸ್ಟ್ 31 ರಂದು ಆತ ಅಸ್ತಮಿಸಲಿದ್ದಾನೆ. ಇನ್ನೊಂದೆಡೆ ತೃತೀಯ ಭಾವದ ಮೇಲೆ ಶನಿ ಹಾಗೂ ಗುರುವಿನ ದೃಷ್ಟಿ ಕೂಡ ಬೀಳುತ್ತಿದೆ. ಹೀಗಾಗಿ ಈ ಅವಧಿಯಲ್ಲಿ ರಾಜಯೋಗ ರೂಪುಗೊಳ್ಳುವುದು ನಿಮಗೆ ಆಕಷ್ಮಿಕ ಧನಪ್ರಾಪ್ತಿಯ ಯೋಗ ನಿರ್ಮಿಸುತ್ತಿದೆ. ವಿದೇಶಗಳಿಂದ ಧನಲಾಭವಾಗುವ ಸಾಧ್ಯತೆ ಇದೆ. ಈ ಅವಧಿಯಲ್ಲಿ ಷೇರುಪೇಟೆ, ಬೆಟಿಂಗ್ ಹಾಗೂ ಲಾಟರಿಗಳಂತಹ ವ್ಯವಹಾರಗಳಿಂದ ನಿಮಗೆ ಲಾಭವಾಗಲಿದೆ.
ಕನ್ಯಾ ರಾಶಿ: ಬುಧ ನಿಮ್ಮ ಜಾತಕದ ವೃತ್ತಿ ಹಾಗೂ ಆಯಸ್ಸು ಭಾವಕ್ಕೆ ಅಧಿಪತಿಯಾಗಿ ದ್ವಾದಶ ಭಾವದಲ್ಲಿ ವಿರಾಜಮಾನಅನಾಗಿದ್ದಾನೆ. ಹೀಗಾಗಿ ಮಹಾವಿಪರೀತ ರಾಜಯೋಗ ನಿಮ್ಮ ಪಾಲಿಗೆ ಸಾಕಷ್ಟು ಅನುಕೂಲಕರ ಸಿದ್ಧ ಸಾಬೀತಾಗಲಿದೆ. ಇನ್ನೊಂದೆಡೆ ವಕ್ರಭಾವದಲ್ಲಿರುವ ಬುಧ ಅಸ್ತ ಕೂಡ ಆಗಳಿದ್ದಾನೆ. ಹೀಗಾಗಿ ಈ ಅವಧಿಯಲ್ಲಿ ಆರೋಗ್ಯದ ಬಗ್ಗೆ ನೀವು ಕಾಳಜಿವಹಿಸಬೇಕು. ಆದರೆ, ನಿಮ್ಮ ಆದಾಯದಲ್ಲಿ ಹೆಚ್ಚಳ ಸಂಭವಿಸಲಿದೆ. ಆದಾಯದ ಹೊಸ ಮಾರ್ಗಗಳು ತೆರೆದುಕೊಳ್ಳಲಿವೆ. ಕಮಾಡೆಟಿ, ಷೇರುಪೇಟೆ, ಚಿನ್ನ-ಬೆಳ್ಳಿ ಹಾಗೂ ಆಸ್ತಿಪಾಸ್ತಿ ಖರೀದಿ-ಬಿಕರಿಯಿಂದ ನಿಮಗೆ ಲಾಭ ಸಿಗಲಿದೆ. ಈ ಅವಧಿಯಲ್ಲಿ ವ್ಯಾಪಾರಿಗಳಿಗೆ ಉತ್ತಮ ಧನಲಾಭ ಸಿಗಲಿದೆ. ಹೊಸ ಆರ್ಡರ್ ಗಳು ಅಂತಿಮ ಹಂತಕ್ಕೆ ತಲುಪಲಿವೆ.
ಮಕರ ರಾಶಿ: ಮಹಾವಿಪರೀತ ರಾಜಯೋಗ ನಿಮ್ಮ ಪಾಲಿಗೆ ಅತ್ಯಂತ ಶುಭಕರ ಸಾಬೀತಾಗಲಿದೆ. ಏಕೆಂದರೆ ಬುಧ ಗ್ರಹ ನಿಮ್ಮ ಗೋಚರ ಜಾತಕದ ಭಾಗ್ಯ ಹಾಗೂ ಶಷ್ಟಮ ಭಾವಕ್ಕೆ ಅಧಿಪತಿಯಾಗಿದ್ದಾನೆ. ಇದಲ್ಲದೆ ಆತ ಅಷ್ಟಮ ಭಾವದಲ್ಲಿ ವಿರಾಜಮಾನನಾಗಿದ್ದಾನೆ ಹಾಗೂ ವಕ್ರಿಯಾಗಿದ್ದಾನೆ. ಇನ್ನೊಂದೆಡೆ ಶನಿ ಹಾಗೂ ರಾವಿವಿನ ದೃಷ್ಟಿ ಕೂಡ ಇದೆ. ಈ ಅವಧಿಯಲ್ಲಿ ನಿಮ್ಮ ಇಷ್ಟಾರ್ಥಗಳು ನೆರವೇರಲಿವೆ. ಷೇರುಪೇಟೆ, ಬೆಟ್ಟಿಂಗ್ ಹಾಗೂ ಲಾಟರಿಗಳಂತಹ ವ್ಯವಹಾರಗಳಿಂದ ನಿಮಗೆ ಲಾಭ ಸಿಗಲಿದೆ. ಚಿನ್ನ-ಬೆಳ್ಳಿ ಕ್ರಯ-ವಿಕ್ರಯದಲ್ಲಿ ತೊಡಗಿರುವವರಿಗೆ ಧನಲಾಭ ಸಿಗಲಿದೆ. ಕಮಿಷನ್ ಹಾಗೂ ಪ್ರಾಪರ್ಟೀ ಡೀಲಿಂಗ್ ವ್ಯವಹಾರಅಳಲ್ಲಿ ತೊಡಗಿರುವವರಿಗೆ ಉತ್ತಮ ಲಾಭ ಸಿಗಲಿದೆ.
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)