ಸುರೇಶ್ ರೈನಾ ಮಗನಿಗೆ ಈ ಕ್ರಿಕೆಟಿಗನೆಂದರೆ ಪಂಚಪ್ರಾಣ… ಅಪ್ಪ ದಿಗ್ಗಜನಾದ್ರೂ ಮಗನಿಗೆ ಇವರೇ ಫೇವರೇಟ್!

Thu, 29 Feb 2024-5:17 pm,

ಭಾರತದ ಮಾಜಿ ಕ್ರಿಕೆಟಿಗ ಸುರೇಶ್ ರೈನಾ ತನ್ನ ಮಗನಿಗೆ ವಿರಾಟ್ ಕೊಹ್ಲಿ ಎಂದರೆ ಇಷ್ಟ ಎಂದು ಹೇಳಿದ್ದಾರೆ. ಸ್ಪೋರ್ಟ್ಸ್ ಟಾಕ್ ಜೊತೆ ಮಾತನಾಡಿದ ರೈನಾ, ತನ್ನ ಮಗ ಬಹಳಷ್ಟು ಕ್ರಿಕೆಟ್ ನೋಡುತ್ತಾನೆ, ಆಟದ ದೊಡ್ಡ ಅಭಿಮಾನಿ ಎಂದು ಹೇಳಿದ್ದಾರೆ.

ಭಾರತದ ಬ್ಯಾಟ್ಸ್‌’ಮನ್ ವಿರಾಟ್ ಕೊಹ್ಲಿ ವಿಶ್ವದ ಮೂಲೆ ಮೂಲೆಯಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಅತಿ ಹೆಚ್ಚು ಫಾಲೋವರ್ಸ್ ಹೊಂದಿರುವ ಈ ಭಾರತೀಯ ಕ್ರೀಡಾಪಟು, 200 ಮಿಲಿಯನ್‌’ಗಿಂತಲೂ ಹೆಚ್ಚು ಫಾಲೋವರ್ಸ್’ಗಳನ್ನು ಹೊಂದಿದ್ದಾರೆ.

ಸುರೇಶ್ ರೈನಾ SportsTak ನಲ್ಲಿ ಮಾತನಾಡುತ್ತಾ, “ಈಗ ನಾನು ನನ್ನ ಮಗನ ಕೋಚ್ ಆಗಿದ್ದೇನೆ. ಸಾಮಾನ್ಯವಾಗಿ, ಅವನೇ ನನಗೆ ತರಬೇತಿ ನೀಡುತ್ತಾನೆ. ಅವನಿಗೆ ಆಟ ಆಡುವುದರಲ್ಲಿ ಹೆಚ್ಚಿನ ಆಸಕ್ತಿಯಿದೆ. ಆದರೆ ಅವನು ಆಟವನ್ನು ಆನಂದಿಸಬೇಕೆಂಬುದು ನನ್ನ ಇಚ್ಛೆ. ಅವನು ವಿರಾಟ್ ಕೊಹ್ಲಿಯ ದೊಡ್ಡ ಅಭಿಮಾನಿ” ಎಂದಿದ್ದಾರೆ.

ಸುರೇಶ್ ರೈನಾ ಭಾರತ ಕ್ರಿಕೆಟ್ ತಂಡದ ಅತ್ಯುತ್ತಮ ಬ್ಯಾಟ್ಸ್‌ಮನ್‌’ಗಳಲ್ಲಿ ಒಬ್ಬರು. ಮಾಜಿ ಎಡಗೈ ಬ್ಯಾಟರ್ ಎಲ್ಲಾ ಮೂರು ಸ್ವರೂಪಗಳಲ್ಲಿ ಶತಕಗಳನ್ನು ಸಿಡಿಸಿದ ಮೊದಲ ಭಾರತೀಯ ಕ್ರಿಕೆಟಿಗ ಮತ್ತು T20I ಗಳಲ್ಲಿ ಶತಕ ಬಾರಿಸಿದ ಮೊದಲ ಭಾರತೀಯ.

ಎಂಎಸ್ ಧೋನಿ ನಾಯಕತ್ವದಲ್ಲಿ ಸುರೇಶ್ ರೈನಾ ಭಾರತ ತಂಡದೊಂದಿಗೆ 2011 ರ ODI ವಿಶ್ವಕಪ್ ಮತ್ತು 2013 ರ ಚಾಂಪಿಯನ್ಸ್ ಟ್ರೋಫಿಯನ್ನು ಗೆದ್ದಿದ್ದರು. ಅಷ್ಟೇ ಅಲ್ಲದೆ, ಧೋನಿ ಮತ್ತು ರೈನಾ ಆತ್ಮೀಯ ಸ್ನೇಹಿತರಾಗಿದ್ದು, ಇಬ್ಬರೂ ಆಟಗಾರರು ಭಾರತ ತಂಡದಲ್ಲಿ ಮಾತ್ರವಲ್ಲದೆ ಚೆನ್ನೈ ಸೂಪರ್ ಕಿಂಗ್ಸ್‌’ನಲ್ಲಿ ಕೂಡ ಜೊತೆಯಾಗಿ ಸಾಕಷ್ಟು ಪಂದ್ಯಗಳನ್ನು ಆಡಿದ್ದರು.

ಸುರೇಶ್ ರೈನಾ ಈಗ ಪ್ರಪಂಚದಾದ್ಯಂತ ಲೀಗ್ ಕ್ರಿಕೆಟ್ ಆಡುತ್ತಿದ್ದು, ಇಂಡಿಯನ್ ಪ್ರೀಮಿಯರ್ ಲೀಗ್‌’ನಲ್ಲಿ ಕಾಮೆಂಟರಿ ಮಾಡುತ್ತಾರೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link