ಡಾ. ಮನಮೋಹನ್ ಸಿಂಗ್ 2 ಬಾರಿ ಪ್ರಧಾನಿಯಾದರೂ, ಹುಟ್ಟೂರಿಗೆ ಹೋಗಬೇಕೆನಿಸಿದರೂ ಇದೊಂದು ಕಾರಣಕ್ಕೆ ಹೋಗಲೇ ಇಲ್ಲ…!
ಹುಟ್ಟಿದೂರಿಗೆ ಹೋಗಬೇಕು ಅಂತಾ ಯಾರಿಗೆ ಅನಿಸುವುದಿಲ್ಲ ಹೇಳಿ. ಆದರೆ ಡಾ. ಮನಮೋಹನ್ ಸಿಂಗ್ 2 ಬಾರಿ ಪ್ರಧಾನಿಯಾಗಿದ್ದರೂ ಜೊತೆಗೆ ತಮ್ಮ ಹುಟ್ಟೂರಿಗೆ ಹೋಗಬೇಕು ಎನ್ನುವ ಮಹದಾಸೆ ಇದ್ದರೂ ಕಡೆವರೆಗೂ ಅಲ್ಲಿಗೆ ಹೋಗಲೇ ಇಲ್ಲ.
ಡಾ. ಮನಮೋಹನ್ ಸಿಂಗ್ ಸಾಹೇಬ್ ಹುಟ್ಟಿದ್ದು ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಗಾಹ್ ನಲ್ಲಿ. ಅವರಿಗೆ ಎಲ್ಲರಂತೆ ತಾನು ಕೂಡ ಹುಟ್ಟಿದ ಊರಿಗೆ ಹೋಗಬೇಕು ಎನ್ನುವ ಆಸೆ ಇತ್ತು. ಆಸೆಯಾಚೆಗೆ ಅಲ್ಲೊಂದು ನೋವಿನ ಕತೆಯೂ ಇತ್ತು ಹಾಗಾಗಿ ಒಮ್ಮೆ ಊರುಬಿಟ್ಟು ಬಂದ ಸಿಂಗ್ ಮತ್ತೆಂದೂ ಅಲ್ಲಿಗೆ ಹೋಗಲೇ ಇಲ್ಲ.
ಸಿಖ್ ಸಮುದಾಯದವರು ಜೀವಿತದ ಕಾಲಾವಧಿಯಲ್ಲಿ ಒಂದು ಸಲವಾದರೂ ಪವಿತ್ರ ಸ್ಥಳ ಕತಾರಪುರ ಮತ್ತು ನಂಕಾನಾ ಸಾಹಿಬ್ ಗೆ ಹೋಗಬೇಕು ಎಂದು ಬಯಸುತ್ತಾರೆ. ಅದನ್ನು ಸಾರ್ಥಕ ಎಂದುಕೊಳ್ಳುತ್ತಾರೆ. ಆದರೆ ಮನಮೋಹನ್ ಸಿಂಗ್ ಹೋಗಲೇ ಇಲ್ಲ.
ಖ್ಯಾತ ಅರ್ಥಶಾಸ್ತ್ರಜ್ಞ, ಭಾರತದ ಆರ್ತಿಕ ಸುಧಾರಣೆಯ ಹರಿಕಾರ ಸರಳ ವ್ಯಕ್ತಿತ್ವದ ಡಾ ಮನಮೋಹನ್ ಸಿಂಗ್ ತಾವು ಎರಡು ಬಾರಿ ಪ್ರಧಾನಿಯಾದರೂ ಕೂಡ ತಮ್ಮ ಹುಟ್ಟೂರಿಗೆ ಹೋಗದೇ ಇರುವ ಬಗ್ಗೆ ಸಂದರ್ಶನವೊಂದರಲ್ಲಿ ಮನ್ ಪ್ರೀತ್ ಸಿಂಗ್ ಬಾದಲ್ ಅವರೊಂದಿಗೆ ತಾವು ಏಕೆ ಹುಟ್ಟೂರಿಗೆ ಹೋಗಲಿಲ್ಲ ಎಂಬ ನೋವಿನ ಕಹಾನಿಯನ್ನು ಹಂಚಿಕೊಂಡಿದ್ದರು.
ನನ್ನ ಹುಟ್ಟೂರಿನಲ್ಲಿರುವ ನೋವುಗಳ ಕಾರಣಕ್ಕಾಗಿಯೇ ಹೋಗಬೇಕು ಎನ್ನುವ ಅಪರಿಮಿತವಾದ ಆಸೆ ಇದ್ದರೂ ನಾನು ಹೋಗಲಿಲ್ಲ ಎಂದಿದ್ದರು ಡಾ. ಮನಮೋಹನ್ ಸಿಂಗ್.