ರಾತ್ರೋರಾತ್ರಿ ಕೋಟ್ಯಾಧಿಪತಿಯಾದ ಲಾಟರಿ ಅಂಗಡಿ ಮಾಲೀಕ..ಅಸಲಿಗೆ ಆಗಿದ್ದೇನು ಗೊತ್ತಾ..?

Fri, 22 Jan 2021-11:24 am,

ಕೊಲ್ಲಂನಲ್ಲಿ ಲಾಟರಿ ಮಾರಿ ಜೀವನ ಸಾಗಿಸುತ್ತಿದ್ದ ವ್ಯಕ್ತಿ ಶರಪುದ್ಧೀನ್ ಎ.  ಆತನಅಂಗಡಿಯಲ್ಲಿ ಕೆಲವೊಂದು ಲಾಟರಿ ಟಿಕೆಟ್ ಮಾರಾಟವಾಗುತ್ತಿರಲಿಲ್ಲ. ಇದರಿಂದ ಶರಪುದ್ದೀನ್ ಟೆನ್ಶನ್ ಹೆಚ್ಚಾಗಿತ್ತು.  ಆದರೆ, ಅದೇ ಬಿಕರಿಯಾಗದೇ ಉಳಿದ ಲಾಟರಿ ಟಿಕೆಟ್ ಒಂದು ಆತನ ಭವಿಷ್ಯವನ್ನೇ ಬದಲಾಯಿಸಿಬಿಟ್ಟಿದೆ.  

ಶರಫುದ್ದೀನ್ ಬಳಿ ಮಾರಾಟವಾಗದೇ ಉಳಿದು ಹೋಗಿದ್ದು ಕೇರಳ ಸರ್ಕಾರ ಕ್ರಿಸ್ ಮಸ್ ಬಂಪರ್ ಲಾಟರಿ (Christmas New Year Bumper Lottery) . ಮಾರಾಟವಾಗದೇ ಉಳಿದ ಈ ಲಾಟರಿ ಟಿಕೆಟನ್ನು ಶರಪುದ್ದೀನ್ ತನ್ನ ಜೊತೆ ಇಟ್ಟುಕೊಳ್ತಾರೆ. ಅದೇ ಅವರ ಬದುಕಿನ ಅತ್ಯಂತ ಲಕ್ಕೀ ನಿರ್ಧಾರವಾಗಿರುತ್ತದೆ.  ಅದೇ ಟಿಕೆಟ್ ನಲ್ಲಿ ಅವರಿಗೆ 12 ಕೋಟಿ ಬಂಪರ್ ಬಹುಮಾನ ಬರುತ್ತದೆ. 

ಶರಫುದ್ದೀನ್ ಮೊದಲು ಸೌದಿ ಅರೇಬಿಯಾದಲ್ಲಿದ್ದರು. ಕೆಲವು ಕಾರಣಗಳಿಂದಾಗಿ ಭಾರತಕ್ಕೆ ಮರಳಬೇಕಾಗಿ ಬಂತು. ಕೊಲ್ಲಂನಲ್ಲಿ ಒಂದು ಅಂಗಡಿ ಹಾಕಿ ಜೀವನ ನಡೆಸುತ್ತಿದ್ದರು. ಲಾಕ್ ಡೌನಿಂದ ಅಂಗಡಿ ಬಂದ್ ಆಯಿತು.  ಕೊನೆಗೆ ಲಾಟರಿ ಅಂಗಡಿ ಹಾಕಿದ್ರು.   

ಆರು ಜನರ ಸಣ್ಣ ಪರಿವಾರ ಶರಫುದ್ದೀನ್ ಅವರದ್ದು. ಮನೆಯಲ್ಲಿ ತಾಯಿ, ಇಬ್ಬರು ಸಹೋದರರು, ಪತ್ನಿ ಮತ್ತು ಮಗ ಇದ್ದಾರೆ. ಲಾಟರಿ ಹಣದಲ್ಲಿ ಮೊದಲು ಒಂದು ಮನೆ ಕಟ್ಟಬೇಕು ಅನ್ನೋದು ಶರ್ಫುದ್ದೀನ್ ಆಸೆ. ಬಳಿಕ ಸಾಲ ವಾಪಸ್ ಕೊಡಬೇಕು.  ಕುಟುಂಬ ನಿರ್ವಹಣೆಗೆ ಏನಾದರೂ ಒಂದು ಬಿಸಿನೆಸ್ ಮಾಡಬೇಕು ಎಂದು ಅಂದುಕೊಂಡಿದ್ದಾರೆ ಶರ್ಫು.

ಶರಫುದ್ದೀನ್ 12 ಕೋಟಿ ಲಾಟರಿ ಗೆದ್ದಿದ್ದಾರೆ.  ತೆರಿಗೆ ಹಾಗೂ ಕಮೀಶನ್ ಕಟ್ ಆದ ಮೇಲೆ ಸುಮಾರು 7.50 ಕೋಟಿ ದುಡ್ಡು  ಶರಫುದ್ದೀನ್ ಗೆ ಸಿಗಲಿದೆ. ನಿಮಗೆ ಗೊತ್ತಿರಲಿ, ಲಾಟರಿ ದುಡ್ಡಿನ ಮೇಲೆ ಶೇ. 30 ರಷ್ಟು ಟ್ಯಾಕ್ಸ್ ಮತ್ತು ಶೇ. 10 ಕಮಿಶನ್ ಕಡಿತ  ಆಗುತ್ತದೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link